ಬೆಂಗಳೂರು: ಬಹುತೇಕ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಿದೆ.
ಉಜಿರೆ, ಧರ್ಮಸ್ಥಳ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಮಂಗಳವಾರ ಮಧ್ಯಾಹ್ನ ಗುಡುಗು ಸಹಿತ ಮಳೆಯಾಗಿದ್ದರೆ, ಸೋಮವಾರ ತಡರಾತ್ರಿ ಮಂಡ್ಯ ಜಿಲ್ಲೆ ಶ್ರೀರಂಪಟ್ಟಣ ತಾಲೂಕಿನ ನೆರಲಕೆರೆ ಗ್ರಾಮದ ಸುತ್ತಮುತ್ತ ಸಾಧಾರಣ ಮಳೆಯಾಗಿದೆ.
ಮಳೆಯಿಂದ ಯಾವುದೇ ಹಾನಿಯಾಗಿಲ್ಲ. ಆದರೆ ಕೆಲಸ ನಿಮಿತ್ತ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗುತ್ತಿದ್ದವರೆಗೆ ಕಲ ಕಾಲ ತೊಂದರೆಯಾಗಿತು. ಬೇಸಿಗೆ ಆರಂಭದಲ್ಲಿ ಮಳೆ ಬರುವುದು ಸಾಮಾನ್ಯ. ಆದರೆ ಇದು ಅಕಾಲಿಕ ಮಳೆಯಾಗಿರುವುದರಿಂದ ಬಂದು ಹೋದರೆ ಹಲವು ರೋಗಗಳಿಗೆ ಎಡೆಮಾಡಿಕೊಟ್ಟಂತ್ತಾಗುತ್ತದೆ.
ಈಗಾಗಲೇ ವಿಶ್ವಮಾರಿ ಕೊರೊನಾದಿಂದ ಜನರು ತತ್ತರಿಸುತ್ತಿದ್ದು, ಅಕಾಲಿಕ ಮಳೆಯಿಂದ ಇನ್ನಷ್ಟು ರೋಗಗಳು ಬರುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಜನರು ಮುಜಾಗ್ರತಾ ಕ್ರಮವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳುವತ್ತ ಹೆಚ್ಚಿನ ಗಮನ ನೀಡಬೇಕಿದೆ.
ನಿತ್ಯ ಬಿಸಿನೀರು ಸೇವನೆ ಮಾಡಬೇಕು. ಬೇಯಿಸಿದ ಆಹಾರವನ್ನೇ ತಿನ್ನುವುದು ಉತ್ತಮ, ತಂಗುಳು ಆಹಾರವನ್ನು ತಿನ್ನುವುದರಿಂದಲೂ ಕಾಯಿಲೆ ಬರುವ ಸಾಧ್ಯತೆ ಹೆಚ್ಚಾಗಿದೆ. ಇದೇ ಅಲ್ಲದೇ ತಮ್ಮ ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವತ್ತ ಹೆಚ್ಚಿನ ಗಮನ ನೀಡುವುದು ಒಳ್ಳೆಯದು.