NEWSನಮ್ಮಜಿಲ್ಲೆ

60 ಜನ ಪ್ರಯಾಣಿಸುವ ಬಸ್‌ನಲ್ಲಿ 150 ಜನ: ಬಸ್ ಓಡಿಸುವುದಿಲ್ಲ ಎಂದ ಚಾಲಕ ..!!

ವಿಜಯಪಥ ಸಮಗ್ರ ಸುದ್ದಿ
  • ತಾನು ಮಾಡದ ತಪ್ಪಿಗೆ 5 ಸಾವಿರ ರೂಪಾಯಿ ದಂಡ ಕಟ್ಟಿದ ಭಯ 
  • ಸವೆದ ಟಯರ್‌ ಬ್ಲಾಸ್ಟ್‌ ಆಗಿದ್ದಕ್ಕೆ ಚಾಲಕನ ವೇತನದಲ್ಲಿ ಕಡಿತ
  • ಹೀಗಾದರೆ ಚಾಲನ ಸಿಬ್ಬಂದಿ ಡ್ಯೂಟಿ ಮಾಡುವುದಾದರೂ ಹೇಗೆ??

ಕಡಬ: ಕಡಬ – ಪುತ್ತೂರು ಮಾರ್ಗದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್‌ಗೆ 150 ಮಂದಿ ಹತ್ತಿದ್ದರಿಂದ ಭಯಗೊಂಡ ಬಸ್ ಚಾಲಕ ಬಸ್ ಓಡಿಸಲು ನಿರಾಕರಿಸಿದ ಘಟನೆ ಕಡಬ ಬಸ್‌ ನಿಲ್ದಾಣದಲ್ಲಿ ನಡೆದಿದೆ.

ಕಡಬ ಭಾಗದಿಂದ ಶಾಂತಿಮುಗೇರು ಮಾರ್ಗವಾಗಿ ಪುತ್ತೂರಿಗೆ ಬೆಳಗ್ಗಿನ ಸಮಯ ಇದ್ದ ಒಂದು ಬಸ್ಸನ್ನು ಇತ್ತೀಚೆಗೆ ನಿಲ್ಲಿಸಲಾಗಿತ್ತು. ಇದರಿಂದಾಗಿ ಬೆಳಗ್ಗಿನ ಆರಂಭದ ಬಸ್‌ ಓವರ್ ಲೋಡ್ ಆಗಿದ್ದರಿಂ ಇತ್ತೀಚೆಗೆ ಅದರ ಟಯರ್ ಬ್ಲಾಸ್ಟ್ ಆಗಿದ ಘಟನೆ ನಡೆದಿತ್ತು.

ಈ ನಡುವೆ ಜನರು ಹೆಚ್ಚುವರಿ ಬಸ್ ಹಾಕಿ ಎಂದು ಹೇಳಿದರೂ ಅಧಿಕಾರಿಗಳು ಮಾತ್ರ ಜಾಣ ಕಿಡುತನ ಪ್ರದರ್ಶಿಸುತ್ತಿದ್ದಾರೆ. ಇದರಿಂದ ಕಡಬದಿಂದ ಶಾಂತಿಮುಗೇರು ಮಾರ್ಗವಾಗಿ ಬೆಳಗ್ಗೆ 7.30ಕ್ಕೆ ಬಸ್‌ ಹೊರಟರೆ ಮತ್ತೆ 8.40 ರ ನಂತರವೇ ಕಡಬದಿಂದ ಈ ಮಾರ್ಗವಾಗಿ ಬಸ್‌ ಬರೋದು. ಪರಿಣಾಮ ನಿತ್ಯ ಬಳಗ್ಗ 7.30ಕ್ಕೆ ಕಡಬದಿಂದ ಹೊರಡುವ ಬಸ್‌ ಆಲಂಕಾರು ಮುಟ್ಟುವಾಗಲೇ 100ರಿಂದ 150 ಪ್ರಯಾಣಿಕರಿಂದ ತುಂಬಿ ಹೋಗಿರುತ್ತದೆ.

ನಿತ್ಯ ಬಸ್‌ನಲ್ಲಿ ನೂರೈವತ್ತಕ್ಕಿಂತಲೂ ಹೆಚ್ಚು ಪ್ರಯಾಣಿಕರು ಉಸಿರುಗಟ್ಟಿಕೊಂಡು ಪ್ರಯಾಣಿಸುತ್ತಾರೆ. ಶಾಲಾ, ಕಾಲೇಜು ವಿದ್ಯಾರ್ಥಿಗಳು, ವಿವಿಧ ಸರ್ಕಾರಿ ಉದ್ಯೋಗದಲ್ಲಿರುವವರು ಹಾಗೂ ಪುತ್ತೂರಿಗೆ ಅಗತ್ಯ ಕೆಲಸಗಳಿಗೆ ಹೋಗುವ ಪ್ರಯಾಣಿಕರು ಕೂಡ ಇದೇ ಬಸ್‌ನಲ್ಲಿ ಪ್ರಯಾಣಿಸುತ್ತಾರೆ.

ಈ ನಡುವೆ ಇತ್ತೀಚೆಗೆ ಅದೇ ಬಸ್ ಓವರ್ ಲೋಡ್ಆದ ಪರಿಣಾಮ ಕಳೆದ ವಾರವಷ್ಟೆ ಇದೇ ಬೆಳಗ್ಗಿನ ಪ್ರಥಮ ಬಸ್‌ ಶಾಂತಿಮುಗೇರು ಸಮೀಪದ ಕುದ್ಮಾರಿನಲ್ಲಿ ಚಕ್ರ ಬ್ಲಾಸ್ಟ್‌ಆಗಿ ನಿಂತಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ. ಒಂದು ವೇಳೆ ಅಪಾಯ ಸಂಭವಿಸಿದ್ದರೆ ಅದನ್ನು ಚಾಲಕರ ಮೇಲೆ ಹೊರಿಸಿ ಅಧಿಕಾರಿಗಳು ಜೈಲಿಗಾಕುತ್ತಿದ್ದರೋ ಏನೋ?

ಇನ್ನು ಶುಕ್ರವಾರ ಬೆಳಗ್ಗೆ ಇದೇ ಸಮಯದ ಬಸ್‌ ಆಲಂಕಾರು ಮುಟ್ಟುವಾಗಲೇ 130ಕ್ಕೂ ‌ಹೆಚ್ಚು ಪ್ರಯಾಣಿಕರು ಬಸ್‌ ಹತ್ತಿದ್ದರು. ವಿಶೇಷವೆಂದರೆ ಕಳೆದ ವಾರ ಕುದ್ಮಾರಿನಲ್ಲಿ ಬಸ್‌ನ ಚಕ್ರ ಒಡೆದು ಹೋಗುವ ಸಂದರ್ಭದಲ್ಲಿ ಇದ್ದ ಚಾಲಕನೇ ಶುಕ್ರವಾರ ಕೂಡಾ ಕರ್ತವ್ಯದಲ್ಲಿದ್ದರು. ಮೊದಲೇ ಭಯದಿಂದ ಇದ್ದ ಚಾಲಕನಿಗೆ. ಬಸ್‌ನಲ್ಲಿ ಜನ ಜಾತ್ರೆ ನೋಡಿ ಬೆವರಿಳಿದಿದೆ. ಬಸ್‌ನ ಚಕ್ರ ದುರ್ಬಲವಾಗಿದೆ ಹೀಗಾಗಿ ಇಷ್ಟು ಜನರು ಇರುವ ಬಸ್‌ ಚಲಾಯಿಸಲಾರೆ ಎಂದು ನಿಂತೆ ಬಿಟ್ಟರು.

ಕಳೆದ ವಾರ ಕೂಡಾ ಚಕ್ರ ದುರ್ಬಲವಾಗಿರುವಾಗಲೇ ಪ್ರಯಾಣಿಕರು ತುಂಬಿ ಓವರ್ ಲೋಡ್ ಆಗಿ ಟಯರ್ ಬ್ಲಾಸ್ ಆಗಿದೆ, ಇದರಿಂದಾಗಿ ಇಲಾಖೆ ನನಗೆ 5000 ರೂ. ದಂಡ ಬೇರೆ ವಿಧಿಸಿದೆ. ಇವತ್ತೂ ಕೂಡಾ ಅಪಾಯ ಸಂಭವಿಸಬಹುದು ಎಂದು ತನ್ನ ಅಸಾಯಕತೆಯನ್ನು ತೋಡಿಕೊಂಡರು.

ಪ್ರಯಾಣಿಕರು ಎಷ್ಟೇ ಮನವಿ ಮಾಡಿದರೂ ಚಾಲಕ ಪಟ್ಟು ಬಿಡದೆ ಸುಮಾರು ಅರ್ಧಗಂಟೆ ಬಸ್‌ ಮುಂದಕ್ಕೆ ಚಲಾಯಿಸದೆ ಆಲಂಕಾರಿನಲ್ಲೇ ನಿಲ್ಲಿಸಿದ್ದರು. ಬಳಿಕ ಪ್ರಯಾಣಿಕರೋರ್ವರು ಪುತ್ತೂರು ಡಿಪೋಗೆ ಕರೆ ಮಾಡಿ ಅಧಿಕಾರಿಗಳಿಗೆ ವಿಷಯ ತಿಳಿಸಿದರು. ಆ ಬಳಿಕ ಅಧಿಕಾರಿಗಳ ಸೂಚನೆಯಂತೆ ಬಸ್‌ಅನ್ನು ಪ್ರಯಾಸದಿಂದ ಚಲಾಯಿಸಲಾಯಿತು.

ಇಷ್ಟೆಲ್ಲಾ ರಾದ್ಧಾಂತಗಳಿಗೆ ಬೆಳಗ್ಗೆ 7.40ಕ್ಕೆ ಕಡಬದಿಂದ ಶಾಂತಿಮುಗೇರು ಮಾರ್ಗವಾಗಿ ಹೋಗುವ ಬಸ್ಸಿನ ಸೇವೆಯನ್ನು ಕಡಿತಗೊಳಿಸಿರುವುದೇ ಕಾರಣವಾಗಿದೆ. ಹಿಂದೆ ಈ ಸಮಯಕ್ಕೆ ಬಸ್‌ ಸೇವೆ ಇದ್ದಾಗ ಜನ ಆರಾಮವಾಗಿ ಉಸಿರುವ ಬಿಟ್ಟು ಓಡಾಡುತ್ತಿದ್ದರು.

ಇದೇ ಸಮಯಕ್ಕೆ ಮತ್ತೆ ಬಸ್‌ ಓಡಿಸಬೇಕು ಎಂದು ಹಲವಾರು ಮನವಿ ಸಲ್ಲಿಸಲಾಗಿದೆ. ಅಲ್ಲದೇ ಇತ್ತೀಚೆಗೆ ಪುತ್ತೂರು ಶಾಸಕರಿಗೆ ಮನವಿ ಸಲ್ಲಿಸಲಾಗಿದದೆ. ಈ ಹಿನ್ನೆಲೆಯಲ್ಲಿ ಬಸ್‌ ವ್ಯವಸ್ಥೆ ಮಾಡಲಾಗಿದೆ ಎಂದು ಸಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಅಸಲಿಗೆ ಆ ಬಸ್‌ ಇನ್ನೂ ಓಡಾಟವನ್ನೇ ಪ್ರಾರಂಭಿಸಿಲ್ಲ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.

Leave a Reply

error: Content is protected !!
LATEST
2086 ಮಂದಿ ಸರ್ಕಾರಿ ನೌಕರರ ಬಳಿಯು ಇವೆ ಬಿಪಿಎಲ್ ಕಾರ್ಡ್‌ಗಳು ! KKRTC ಬಸ್‌ನಲ್ಲಿ ಮರೆತುಹೋಗಿದ್ದ ₹3 ಲಕ್ಷ ಮೌಲ್ಯದ ಚಿನ್ನಾಭರಣ ಮರಳಿಸಿ ಮಾನವೀಯತೆ ಮೆರೆದ ಕಂಡಕ್ಟರ್‌ ಅಡ್ಡಾದಿಡ್ಡಿ ಲಾರಿ ಓಡಿಸಿದ ಕೋಪದಲ್ಲಿ ಚಾಲಕನ ಹತ್ಯೆಗೈದ ಐವರ ಬಂಧನ ಪಿಡಿಒ ಹುದ್ದೆಗೆ ಸಿದ್ದಪಡಿಸಿದ್ದ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ : ಅಭ್ಯರ್ಥಿಗಳಿಂದ ಪ್ರತಿಭಟನೆ ಹೈಪರ್‌ಸಾನಿಕ್ ಕ್ಷಿಪಣಿ ಪರೀಕ್ಷೆ ಸಕ್ಸಸ್‌ – ಈ ದೇಶಗಳ ಪಟ್ಟಿಗೆ ಭಾರತ ಸೇರ್ಪಡೆ ಸ್ಯಾಂಡಲ್‌ವುಡ್‌ ಹಿರಿಯ ನಟ ಟಿ.ತಿಮ್ಮಯ್ಯ ಹೃದಯಾಘಾತದಿಂದ ನಿಧನ NWKRTCಯ 27ನೇ ಸಂಸ್ಥಾಪನಾ ದಿನ- 2023-24 ನೇ ಸಾಲಿನ ಅತ್ಯುತ್ತಮ ವಿಭಾಗ, ಉತ್ತಮ ಘಟಕ, ಅತ್ಯುತ್ತಮ ಅಧಿಕಾರಿಗಳಿಗೆ ಪುರಸ... KKRTC ಅಧಿಕಾರಿಗಳ ನಡೆಯಿಂದ ನೊಂದ ತಾಳಿಕೋಟೆ ಘಟಕ ಚಾಲಕನಿಂದ ದಯಾಮರಣಕ್ಕಾಗಿ ರಾಜ್ಯಪಾಲರಿಗೆ ಅರ್ಜಿ KSRTC: ₹30 ಸಾವಿರ ಲಂಚ ಪಡೆದ ಬಳಿಕ ಗುತ್ತಿಗೆ ಚಾಲಕರ ನೇಮಕ - 11 ತಿಂಗಳ ಬಳಿಕ ₹30 ಸಾವಿರದಿಂದ ₹18 ಸಾವಿರಕ್ಕೆ ಇಳಿದ ... ಅಕ್ರಮ ಹಣ ಸಂಪಾದನೆ: ಅಬಕಾರಿ ಉಪ ನಿರೀಕ್ಷಕನಿಗೆ 3 ವರ್ಷ ಕಠಿಣ ಶಿಕ್ಷೆ, ₹50 ಲಕ್ಷ ದಂಡ