Please assign a menu to the primary menu location under menu

NEWSನಮ್ಮಜಿಲ್ಲೆ

ಚೆಕ್‍ಪೋಸ್ಟ್‍ನಲ್ಲಿ ಕರ್ತವ್ಯ ಲೋಪ ಎಸಗಿದ 6 ನೌಕರರ ಅಮಾನತು

ಚಾಮರಾಜನಗರದ ಜಿಲ್ಲಾಧಿಕಾರಿ ಎಂ.ಆರ್‌. ರವಿ ಆದೇಶ

ವಿಜಯಪಥ ಸಮಗ್ರ ಸುದ್ದಿ

ಚಾಮರಾಜನಗರ: ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಸ್ಥಾಪಿಸಲಾಗಿರುವ ಚೆಕ್‍ಪೋಸ್ಟ್‍ನಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರದೇ ಹಾಗೂ ಪೂರ್ವಾನುಮತಿ ಪಡೆಯದೇ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಚೆಕ್‍ಪೋಸ್ಟ್ ಮೂಲಕ ಹಾದುಹೋಗಲು ಅವಕಾಶ ಕಲ್ಪಿಸಿ ಕರ್ತವ್ಯ ಲೋಪ ಎಸಗಿದ ಹಿನ್ನೆಲೆಯಲ್ಲಿ ಆರು ಮಂದಿ ನೌಕರರನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಆದೇಶ ಹೊರಡಿಸಿದ್ದಾರೆ.

ಚಾಮರಾಜನಗರ ತಾಲೂಕಿನ ಹೆಗ್ಗವಾಡಿ ಚೆಕ್‍ಪೋಸ್ಟ್‍ನಲ್ಲಿ ಮಾರ್ಚ್ 27ರಂದು ಮೊದಲನೇ ಹಾಗೂ ಎರಡನೇ ಪಾಳಿಯಲ್ಲಿ ಹೆಚ್ಚು ವಾಹನಗಳು ಹಾಗೂ ಜನರ ಸಂಚಾರ ಸಂಚಾರಕ್ಕೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಎರಡೂ ಪಾಳಿಯಲ್ಲಿ ಕರ್ತವ್ಯದಲ್ಲಿದ್ದ ಒಟ್ಟು ಆರು ನೌಕರರು ಅಮಾನತುಗೊಂಡಿದ್ದಾರೆ.

ಮೊದಲನೇ ಪಾಳಿಯಲ್ಲಿದ್ದ ಮುಕ್ಕಡಹಳ್ಳಿ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಮಹದೇವಸ್ವಾಮಿ, ನಂಜದೇವನಪುರ ವೃತ್ತದ ಗ್ರಾಮ ಲೆಕ್ಕಿಗರಾದ ಸಂತೋಷ್‍ಕುಮಾರ್, ತಮ್ಮಡಹಳ್ಳಿ ವೃತ್ತದ ಗ್ರಾಮ ಲೆಕ್ಕಿಗರಾದ ಕೆ. ಶ್ರೀಧರ, ಎರಡನೇ ಪಾಳಿಯಲ್ಲಿದ್ದ ಮುಕ್ಕಡಹಳ್ಳಿ ಗ್ರಾಮ ಪಂಚಾಯಿತಿ ವಾಟರ್‍ಮ್ಯಾನ್ ನಂಜುಂಡಸ್ವಾಮಿ, ಕುಲಗಾಣ ವೃತ್ತದ ಲೆಕ್ಕಿಗರಾದ ಡಿ.ಜೆ. ಮಹೇಶ್, ಮುಕ್ಕಡಹಳ್ಳಿ ವೃತ್ತದ ಗ್ರಾಮ ಲೆಕ್ಕಿಗರಾದ ನಂದೀಶ್ ಅಮಾನತುಗೊಂಡ ನೌಕರರಾಗಿದ್ದಾರೆ.

ಸಾರ್ವಜನಿಕರ ಆರೋಗ್ಯ ಹಿತದೃಷ್ಠಿಯಿಂದ ಸರ್ಕಾರದ ಮಾರ್ಗಸೂಚಿಯನ್ವಯ ಜೀವನಾವಶ್ಯಕ ವಸ್ತುಗಳನ್ನು ಮಾತ್ರ ಚೆಕ್‍ಪೋಸ್ಟ್‍ಗಳ ಮೂಲಕ ಸಾಗಿಸಲು ಅವಕಾಶವಿದೆ. ಆದರೆ ಸೂಚನೆ ಉಲ್ಲಂಘಿಸಿ ಜಿಲ್ಲಾಧಿಕಾರಿಗಳ ಗಮನಕ್ಕೂ ತರದೇ, ಪೂರ್ವಾನುಮತಿ ಪಡೆಯದೇ ಮೊದಲೆರಡು ಪಾಳಿಯಲ್ಲಿ ನಿಯೋಜಿತರಾಗಿದ್ದ ನೌಕರರು ಚೆಕ್‍ಪೋಸ್ಟ್ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಹಾದುಹೋಗಲು ಅವಕಾಶ ಕಲ್ಪಿಸಿದ ಹಿನ್ನಲೆಯಲ್ಲಿ ಕರ್ತವ್ಯ ಲೋಪವೆಂದು ಪರಿಗಣಿಸಿ ನಿಯೋಜಿತರಾಗಿದ್ದ ನೌಕರರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಫೆ.2ರಂದು ಇಪಿಎಸ್ ಪಿಂಚಿಣಿದಾರರ 85ನೇ ಮಾಸಿಕ ಸಭೆ: ನಂಜುಂಡೇಗೌಡ ಮಹಿಳೆಯರ ಬೆಳವಣಿಗೆಗೆ ಶ್ರಮಿಸಿದ್ದ ಇಂದಿರಾ ಗಾಂಧಿ: ಸಚಿವ ಮುನಿಯಪ್ಪ 12 ವರ್ಷದ ಬಳಿಕ ಕಾಣಿಸಿಕೊಂಡ ಕೊಹ್ಲಿ 6 ರನ್‌ ಗಳಿಸಿ ಔಟ್‌: ಕಿಕ್ಕಿರಿದು ತುಂಬಿದ್ದ ಕ್ರೀಡಾಂಗಣ..! ಚುನಾವಣೆ ಒಂದು ವಾರ ಇರುವಾಗಲೇ ಪಕ್ಷ ತೊರೆದ ಎಎಪಿಯ ಏಳು ಶಾಸಕರು ರೋಹಿತ್ ವೇಮುಲಾ ಕಾಯ್ದೆ ಜಾರಿಗೆ ಸಚಿವ ಪ್ರಿಯಾಂಕ್ ಖರ್ಗೆ ಒತ್ತಾಯ ವೈದ್ಯೆ ಅಪಹರಿಸಿ ಸಾಮೂಹಿಕ ಅತ್ಯಾಚಾರ ಪ್ರಕರಣ: ನಾಲ್ವರಿಗೆ 20 ವರ್ಷ ಕಠಿಣ ಶಿಕ್ಷೆ ಸರ್ಕಾರದ ಅತಿಥಿ ಶಿಕ್ಷಕರು, ಉಪನ್ಯಾಸಕರ ಗೌರವಧನ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್ KPSC ಕನ್ನಡ ಪ್ರಶ್ನೆ ಪತ್ರಿಕೇಲಿ ಸಾಲು ಸಾಲು ತಪ್ಪಿಗೆ 5 ಕೃಪಾಂಕ: ಅಭ್ಯರ್ಥಿಗಳ ಆಕ್ರೋಶ ಬೆಳ್ಳಂಬೆಳಗ್ಗೆಯೇ ಭ್ರಷ್ಟರಿಗೆ ಲೋಕಾಯುಕ್ತ ಅಧಿಕಾರಿಗಳ ಶಾಕ್‌: ಮನೆ, ಕಚೇರಿಗಳ ಮೇಲೆ ದಾಳಿ ನಾಳೆ ಫೆ.1ರಂದು ಕೇಂದ್ರ ಬಜೆಟ್ ಮಂಡನೆ: ರಾಜ್ಯದ ರೈತರ ನಿರೀಕ್ಷೆ, ಒತ್ತಾಯಗಳೇನು?