VIJAYAPATHA.IN > ವಿಜಯಪಥ > NEWS > ನಮ್ಮರಾಜ್ಯ > 72 ಗಂಟೆಗಳು ಅನ್ನ ಆಹಾರ ತ್ಯಜಿಸಿ ಸಾರಿಗೆ ನೌಕರರ ಉಪವಾಸ ಸತ್ಯಾಗ್ರಹ : ಮಾನವೀಯತೆ ಮರೆತ ಕಟುಕ ಸರ್ಕಾರ
72 ಗಂಟೆಗಳು ಅನ್ನ ಆಹಾರ ತ್ಯಜಿಸಿ ಸಾರಿಗೆ ನೌಕರರ ಉಪವಾಸ ಸತ್ಯಾಗ್ರಹ : ಮಾನವೀಯತೆ ಮರೆತ ಕಟುಕ ಸರ್ಕಾರ
admin.savhnDecember 21, 2022
ಬೆಳಗಾವಿ: ಕಳೆದ ಮೂರು ದಿನಗಳಿಂದಲೂ ಅಂದರೆ ಸುಮಾರು 72 ಗಂಟೆಗಳ ಕಾಲ ಅನ್ನ ಆಹಾರ ತ್ಯಜಿಸಿ ಸಾರಿಗೆ ನೌಕರರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೂ ಮಾನವೀಯತೆ ಮರೆತ ಕಟುಕ ಸರ್ಕಾರ ಅವರ ಬೇಡಿಕೆಗೆ ಸ್ಪಂದಿಸದೆ ಉದಾಸೀನತೆ ತೋರುತ್ತಿದೆ.
ಆದರೂ ಪರವಾಗಿಲ್ಲ ನಮ್ಮ ಬಾಡಿ ಇಲ್ಲಿಂದ ಹೋದರೂ ಸರಿಯೇ ಸಾರಿಗೆ ನೌಕರರಿಗೆ ನಾಲ್ಕೂ ವರ್ಷಕ್ಕೊಮ್ಮೆ ಆಗುತ್ತಿರುವ ವಜಾ, ವರ್ಗಾವಣೆ, ಅಮಾನತು ಸೇರಿದಂತೆ ಇತರ ಕಿರುಕುಳಗಿಂದ ಮುಕ್ತಿ ಸಿಗಬೇಕು ಎಂದು ಆಗ್ರಹಿಸಿ ಅನ್ನ ಆಹಾರ ತ್ಯಜಿಸಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ.
ಇನ್ನು ನಿನ್ನೆ ಅನ್ನ ಆಹಾರ ತ್ಯಜಿಸಿ ಉಪವಾಸ ಸತ್ಯಾಗ್ರಹ ನಿರತ ಸಾರಿಗೆ ಮಹಿಳಾ ಸಿಬ್ಬಂದಿಗಳಿಬ್ಬರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆದರೂ ಸರ್ಕಾರ ಮತ್ತು ಸಾರಿಗೆ ಸಚಿವರು ಇತ್ತ ಗಮನಕೊಡದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ನಡುವೆ ಸತ್ಯಾಗ್ರಹ ನಿರತ ನೌಕರರು ವಿಡಿಯೋ ಮಾಡಿ ತಮ್ಮ ಸಹೋದ್ಯೋಗಿಗಳಿಗೆ ವಸ್ತು ಸ್ಥಿತಿಯನ್ನು ವಿವರಿಸಿದ್ದು, ಅದನ್ನು ಈ ವಿಡಿಯೋನಲ್ಲಿ ಕೇಳಬಹುದಾಗಿದೆ.
Related
admin.savhn
Leave a reply