CRIMENEWSಬೆಂಗಳೂರು

BMTC ಬಸ್‌ಗೆ ಮಣಿಪುರದ ಯುವತಿ ಬಲಿ- ಬೆಚ್ಚಿ ಬೀಳಿಸುವಂತಿದೆ ಅಪಘಾತದ ದೃಶ್ಯ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (BMTC) ಏಕೋ ʻಕಿಲ್ಲರ್ʼ ಎಂಬ ಹಣೆಪಟ್ಟಿ ಕಳಚುವಂತೆ ಕಾಣಿಸುತ್ತಿಲ್ಲ. ಕಾರಣ ಬಸ್ ಹರಿದು ಯುವತಿಯೊಬ್ಬಳು ಮೃತಪಟ್ಟಿರುವ ಘಟನೆ ನಡೆದಿದ್ದು ಸಿಸಿಟಿವಿಯ ದೃಶ್ಯಗಳನ್ನು ನೋಡಿದರೆ ಬೆಚ್ಚಿ ಬೀಳುವಂತೆ ಇದೆ.

ಬೈಕ್ ನಲ್ಲಿ ಹೋಗ್ತಿದ್ದ ಕೆಲಸಕ್ಕೆ ಹೋಗುತ್ತಿದ್ದ ಹನ್ನಾ ಇನಕಾ (20) ಎಂಬ ಯುವತಿಯೇ ಬಸ್‌ಗೆ ಬಲಿಯಾದವರು. ಈ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬೆಚ್ಚಿ ಬೀಳಿಸುವಂತಿದೆ.

ನಿನ್ನೆ ಬೆಳಗ್ಗೆ 9.30 ರಿಂದ 10 ಗಂಟೆ ಸುಮಾರಿಗೆ ಬಿಎಂಟಿಸಿ ಎಲೆಕ್ಟ್ರಿಕ್‌ ಬಸ್‌ಗೆ ಈ 20 ವರ್ಷದ ಯುವತಿ ಬಲಿಯಾಗಿದ್ದಾರೆ. ಮಣಿಪುರದಿಂದ ಬೆಂಗಳೂರಿಗೆ ಬಂದು ಕೆಲಸ ನಿರ್ವಹಿಸುತ್ತಿದ್ದ ಹನ್ನಾ ಇನಕಾ ಅವರಿಗೆ ಸಿಲ್ಕ್ ಬೋರ್ಡ್‌ನಿಂದ ಟಿನ್ ಫ್ಯಾಕ್ಟರಿಗೆ ಹೋಗ್ತಿದ್ದ ಇವಿ ಬಸ್, ಕೆ.ಆರ್ ಪುರಂನ ರೈಲ್ವೆ ನಿಲ್ದಾಣದ ಬಳಿ ಬಂದಾಗ, ಬೈಕ್ ಬಸ್ ಮುಂದೆ ಬಂದಿದೆ.

ಈ ವೇಳೆ ಬಸ್‌ನ ಮುಂಭಾಗಕ್ಕೆ ಟಚಾಗಿ ಬೈಕ್ ಬ್ಯಾಲೆನ್ಸ್ ತಪ್ಪಿದ್ದರಿಂದ ಬೈಕ್‌ನ ಹಿಂಬದಿ ಕುಳಿತಿದ್ದ ಹನ್ನಾ ಇನಕಾ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಬಸ್ ಮುಂದಿನ ಚಕ್ರಕ್ಕೆ ಬಿದ್ದಿದ್ದಾಳೆ. ಆಗ ಯುವತಿಯ ತಲೆ ಮೇಲೆ ಬಿಎಂಟಿಸಿ ಬಸ್ ಹತ್ತಿಸಿದೆ.

ಅಪಘಾತವಾದ ಕೂಡಲೇ ಬಸ್ ಕೆಳಗಡೆ ಬಿದ್ದ ಯುವತಿಯನ್ನು ಕೆ.ಆರ್ ಪುರಂನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯ್ತು. ಆದ್ರೇ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ಸಾವನ್ನಪ್ಪಿದ ಯುವತಿ ಮೂಲತಃ ಮಣಿಪುರ ಮೂಲದವರಾಗಿದ್ರೂ, ಬದುಕು ಕಟ್ಟಿಕೊಳ್ಳಲು ಕೆಲಸ ಅರಸಿ, ಬೆಂಗಳೂರಿಗೆ ಬಂದು ಮಾರತಳ್ಳಿಯಲ್ಲಿ ವಾಸವಾಗಿದ್ದರು.

ಬೆಂಗಳೂರಿಗರ ನೆಚ್ಚಿನ ಸಾರಿಗೆ ಅಂದ್ರೆ ಅದು ಬಿಎಂಟಿಸಿ ಬಸ್‌ಗಳು. ಆದರೆ, ಇತ್ತೀಚಿಗೆ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿರೋ ಈ ಬಸ್‌ಗಳ ಅಪಘಾತಗಳು ಅದರಲ್ಲೂ ಎಲೆಕ್ಟ್ರಿಕ್ ಬಸ್ ಅಪಘಾತಗಳು ಜನರಲ್ಲಿ ಭಯವನ್ನುಂಟು ಮಾಡ್ತಿವೆ. ಚಾಲಕರ ಅಜಾಗರೂಕತೆ, ರ‍್ಯಾಶ್‌ ಡ್ರೈವಿಂಗ್‌ ಹಾಗೂ ನಿರ್ಲಕ್ಷ್ಯದಿಂದ ಬಿಎಂಟಿಸಿ ಬಸ್‌ಗಳಿಗೆ ಅನೇಕರು ಬಲಿಯಾಗಿದ್ದಾರೆ.

ಅಪಘಾತ ಸಂಬಂಧ ಕೆ.ಆರ್ ಪುರಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

Megha
the authorMegha

Leave a Reply

error: Content is protected !!