KSRTC ನೌಕರರ ವೇತನ ಹೆಚ್ಚಳ, 38 ತಿಂಗಳ ಹಿಂಬಾಕಿ ಸಂಬಂಧ ಒಗ್ಗಟ್ಟಾಗಲು ಸರ್ವಸದಸ್ಯರ ಸಭೆಯಲ್ಲಿ ಕೂಟದ ನಿರ್ಧಾರ

- ಒಗ್ಗಟ್ಟು ಆಗದಿದ್ದರೆ ಇದೇ ಫೆ.23ರಿಂದ ಒಕ್ಕೂಟದಿಂದ ಉಪವಾಸ ಸತ್ಯಾಗ್ರಹಕ್ಕೆ ತೀರ್ಮಾನ
- ಸಾರಿಗೆ ನೌಕರರ ಕೂಟದಿಂದ ಇಂದು ಕರೆದಿದ್ದ ಕೂಟದ ಪದಾಧಿಕಾರಿಗಳು ಹಾಗೂ ಸರ್ವಸದಸ್ಯರ ರಾಜ್ಯ ಮಟ್ಟದ ಸಭೆಯಲ್ಲಿ ಒಕ್ಕೋರಿನ ನಿರ್ಧಾರ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ ಬರಬೇಕಿರುವ ಶೇ.15ರಷ್ಟು ಹೆಚ್ಚಳವಾಗಿರುವ ವೇತನದ 38 ತಿಂಗಳ ಹಿಂಬಾಕಿ ಹಾಗೂ 2024ರ ಜನವರಿ 1ರಿಂದ ಆಗಬೇಕಿರುವ ವೇತನ ಹೆಚ್ಚಳ ಸಂಬಂಧ ನೌಕರರ ಸರ್ವ ಸಂಘಟನೆಗಳು ಒಗ್ಗಟ್ಟಿನಿಂದ ಹೋರಾಟಕ್ಕೆ ಇಳಿಯುವ ಬಗ್ಗೆ ನೌಕರರ ಕೂಟದ ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು ನಿರ್ಧರಿಸಿದ್ದಾರೆ.

ಇಂದು (ಫೆ.8) ಬೆಳಗ್ಗೆ ಚಂದ್ರ ಲೇಔಟ್ನಲ್ಲಿರುವ ಕನಕ ಭವನದಲ್ಲಿ ಕರೆಯಲಾಗಿದ್ದ ಸಾರಿಗೆ ನೌಕರರ ಕೂಟದ ಪದಾಧಿಕಾರಿಗಳು ಹಾಗೂ ಸರ್ವಸದಸ್ಯರ ರಾಜ್ಯ ಮಟ್ಟದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು ಎಂದು ಕೂಟದ ರಾಜ್ಯಾಧ್ಯಕ್ಷ ಆರ್.ಚಂದ್ರಶೇಖರ್ ತಿಳಿಸಿದ್ದಾರೆ.

ಇನ್ನು ಈಗಾಗಲೇ ಕೂಟದಿಂದ ಎರಡು ಸಭೆಗಳು ನಡೆದಿದ್ದು, ಇಂದು ಅಂತಿಮ ಸಭೆ ನಡೆಯಿತು. ಈ ಸಭೆಯಲ್ಲಿ ನೌಕರರ ಹಿತದೃಷ್ಟಿ ಸಾರಿಗೆ ನೌಕರರ ಎಲ್ಲ ಸಂಘಟನೆಗಳು ಜಂಟಿ ಮತ್ತು ಒಕ್ಕೂಟ ಎಂದು ಹೇಳದೆ ಒಗ್ಗಟ್ಟಿನಿಂದ ಹೋರಾಟಕ್ಕೆ ಹೋಗಬೇಕು ಎಂದು ಸರ್ವ ಸದಸ್ಯರು ಒಕ್ಕೂರಿನಿಂದ ನಿರ್ಧಾರ ಮಾಡಿರುವುದಾಗಿ ತಿಳಿಸಿದ್ದಾರೆ.
ಇಲ್ಲಿ ನೌಕರರಿಗೆ ಬರಬೇಕಿರುವ 38 ತಿಂಗಳ ಹಿಂಬಾಕಿ ಹಾಗೂ 2024ರ ಜನವರಿ 1ರಿಂದ ಆಗಬೇಕಿರುವ ವೇತನ ಹೆಚ್ಚಳದ ಬಗ್ಗೆ ಎಲ್ಲ ಸಂಘಟನೆಗಳು ಒಗ್ಗಟ್ಟಾಗಿ ಈ ಒಂದು ಬಾರಿಗೆ ವೇತನ ಒಪ್ಪಂದದ ಮೂಲಕವೇ ಅದು ಸರ್ಕಾರಿ ನೌಕರರಿಗೂ ನಮಗೂ ಇರುವ ಶೇ.40ರಷ್ಟು ವ್ಯತ್ಯಾಸ ಸರಿದೂಗಿಸುವ ನಿಟ್ಟಿನಲ್ಲಿ ಬೇಡಿಕೆ ಇಟ್ಟು ಸರ್ಕಾರದ ಗಮನಸೆಳೆಯಬೇಕು ಎಂದು ತೀರ್ಮಾನ ಮಾಡಲಾಗಿದೆ.
ಬಳಿಕ 2028 ಜನವರಿ 1ರಿಂದ ಏನು ವೇತನ ಆಯೋಗದಂತೆ ಸಾರಿಗೆಯ ಎಲ್ಲ ನೌಕರರಿಗೂ ಸರಿ ಸಮಾನ ವೇತನವನ್ನು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಭರವಸೆಯಂತೆ ಮಾಡಬೇಕು ಎಂಬ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಇನ್ನು ಒಂದು ವೇಳೆ ನೌಕರರ ಕೂಟದ ಪದಾಧಿಕಾರಿಗಳು ಹಾಗೂ ಸರ್ವಸದಸ್ಯರ ಸಭೆಯಲ್ಲಿ ತೆಗೆದುಕೊಂಡಿರುವ ಈ ತೀರ್ಮಾನವನ್ನು ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಒಪ್ಪದೆ ಹೋದರೆ ಈಗಾಗಲೇ ಅಂದುಕೊಂಡಿರುವಂತೆ ಫೆ.23ರಿಂದ ಉಪವಾಸ ಸತ್ಯಾಗ್ರಹನ್ನು ಹಮ್ಮಿಕೊಳ್ಳೋಣ ಎಂಬ ದೃಢ ನಿರ್ಧಾರವನ್ನು ಸಭೆಯಲ್ಲಿ ಸರ್ವಾನುಮತದಿಂದ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
Related









