- ಈ ಪ್ರಕರಣ ವಿರುದ್ಧ ತಕರಾರು ಅರ್ಜಿ ಹಾಕಿದ್ದ BMTC ನಿರ್ವಾಹಕ ಚೇತನ್‌ರಾಜ್
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಚಾಲಕರೊಬ್ಬರ ಪತ್ನಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಅಶ್ಲೀಲ ಪದ ಬಳಕೆ ಮಾಡಿದ ಆರೋಪ ಹೊತ್ತಿರುವ ಬಿಎಂಟಿಸಿ ಘಟಕ-9 ನಿರ್ವಾಹಕ ಚೇತನ್ ರಾಜ್ ಎಂಬಾತ ಚಾಲಕರೊಬ್ಬರ ಪತ್ನಿ ಸೇರಿ ಇತರರ ವಿರುದ್ಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿರುವುದಕ್ಕೆ ಸಿಟಿ ಸಿವಿಲ್ ನ್ಯಾಯಾಲಯ ಮಧ್ಯಂತರ ಜಾಮೀನು (interim bail) ಮಂಜೂರು ಮಾಡಿ ಡಿ.12ರಂದು ಆದೇಶ ಹೊರಡಿಸಿತ್ತು.

ಅದರ ಮುಂದುವರಿದ ಭಾಗವಾಗಿ ಇಂದು (ಡಿ.29) ಸೋಮವಾರ ಚೇತನ್ ರಾಜ್ ಪರ ವಕೀಲರು ವಕಾಲತ್ತು ವಹಿಸಿ ತಕಾರರು ಅರ್ಜಿ ಹಾಕಿದ್ದರು. ಈ ವೇಳೆ ಆರೋಪಿಗಳ ಪರ ವಕೀಲರಾದ ಶಕ್ತಿ ದೂದುಹಳ್ಳಿ ಅವರು ತಮ್ಮ ಹಿರಿಯ ವಕೀಲರು ವಾದ ಮಂಡಿಸಲಿದ್ದಾರೆ ಹಾಗಾಗಿ ಪ್ರಕರಣವನ್ನು ಮಧ್ಯಾಹ್ನಕ್ಕೆ ಮುಂದೂಡಲು ಅಂದು ಮನವಿ ಮಾಡಿದರು.
ಮಧ್ಯಾಹ್ನ 3.30ಕ್ಕೆ ಪ್ರಕರಣ ಕೈಗೆತ್ತಿಕೊಂಡ ನ್ಯಾಯಾಧೀಶರ ಮುಂದೆ ಚೇತನ್‌ರಾಜ್ ಪರ ವಕೀಲರು ವಾದ ಮಂಡಿಸಿ ಈ ಪ್ರಕರಣ ಜಾತಿನಿಂದನೆ ಪ್ರಕರಣವಾಗಿದೆ ಹೀಗಾಗಿ ಆರೋಪಿಗಳಿಗೆ ಜಾಮೀನು ಕೊಡಬಾರದು ಎಂದು ವಾದ ಮಂಡಿಸಿದರು.
ಆಗ ಆರೋಪಿಗಳ ಪರ ವಕೀಲರು ಪ್ರತಿವಾದ ಮಂಡಿಸಿದ್ದರು. ಈ ವೇಳೆ ಇವರಲ್ಲಿ ಒಬ್ಬರು ಕೂಟದ ಅಧ್ಯಕ್ಷರಾಗಿದ್ದು, ಅವರು ಯಾವುದೇ ರೀತಿಯ ಜಾತಿನಿಂದನೆ ಮಾಡಿಲ್ಲ ಬದಲಿಗೆ ಎರಡು ಕಡೆಯವರು ಗಾಲಾಟೆ ಮಾಡುತ್ತಿದ್ದಾಗ ಅವರಿಗೆ ತಿಳಿಹೇಳಲು ಹೋಗಿದ್ದರು. ಆದರೆ ಅದನ್ನು ತಪ್ಪಾಗಿ ಭಾವಿಸಿಕೊಂಡು ಪ್ರಕರಣ ದಾಖಲಸಿದ್ದಾರೆ ಎಂದು ಹಿರಿಯ ವಕೀಲರು ವಾದ ಮಂಡಿಸಿ ಈ ಪ್ರಕರಣ ಜಾತಿನಿಂದನೆಯಡಿ ಬರುವುದಿಲ್ಲ ಎಂದು ವಿವರಿಸಿದರು.
ಅಲ್ಲದೆ ಚಂದ್ರು ಅವರು ಸರ್ಕಾರಿ ನೌಕರರಿಗೆ ಕೊಡುತ್ತಿರುವಂತೆ ಸಾರಿಗೆ ನೌಕರರಿಗೂ ಸರಿ ಸಮಾನ ವೇತನ ಕೊಡಬೇಕು ಎಂಬ ಬಗ್ಗೆ ನೌಕರರ ಪರವಾಗಿ ಹೋರಾಟ ಮಾಡುತ್ತಿದ್ದಾರೆ. ಹೀಗಾಗಿ ಇದನ್ನು ಸಹಿಸದೆ ಈ ರೀತಿ ಜಾತಿ ನಿಂದನೆ ಪ್ರಕರಣವನ್ನು ಉದ್ದೇಶಪೂರ್ವಕವಾಗಿ ಎಳೆತಂದ್ದಿದ್ದಾರೆ ಆದ್ದರಿಂದ ಜಾಮೀನು ಮಂಜೂರು ಮಾಡಬೇಕು ಎಂದು ಪ್ರತಿವಾದ ಮಂಡಿಸಿದರು.
ವಾದ – ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು ಪ್ರಕರಣದ ತೀರ್ಪನ್ನು ಕಾಯ್ದಿರಿಕೊಂಡೇ ಬರಲಾಗುತ್ತಿತ್ತು. ಇನ್ನು ಮಧ್ಯಂತರ ಜಾಮೀನು (interim bail) ಮಂಜೂರು ಮಾಡಿರುವುದು ಮುಂದುವರಿದಿತ್ತು. ಆದರೆ, ಇಂದು ಸಿಟಿ ಸಿವಿಲ್ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಹೀಗಾಗಿ ಈ ಪ್ರಕರಣದಲ್ಲಿ ಸಿಲುಕಿದ್ದ ನಾಲ್ವರು ನಿರಾಳರಾಗಿದ್ದು ಇದು ಸತ್ಯದ ಪರಮಾರ್ಶೆ ಎಂದು ತಿಳಿಸಿದ್ದಾರೆ.
ಇನ್ನು ಈ ಪ್ರಕರಣ 7 ಕೋರ್ಟ್‌ಹಾಲ್‌ನಗಳಲ್ಲಿ 7 ನ್ಯಾಯಾಧೀಶರ ಮುಂದೆ ಬಂದಿತ್ತು. ಅಂತಿಮವಾಗಿ ಇಂದು 71ನೇ ಕೋರ್ಟ್ ಹಾಲ್‌ನಲ್ಲಿ ಮತ್ತೆ ಬಂದು ಜಾಮೀನು ಮಂಜೂರು ಮಾಡಲಾಗಿದೆ.
ಆರೋಪಿಗಳ ಪರ ವಕೀಲರು ಈ ಪ್ರಕರಣದಲ್ಲಿ ವಾದ ಮಂಡನೆ ಮಾಡಿದಿದ್ದನ್ನು ನ್ಯಾಯಾಧೀಶರು ಒಪ್ಪಲಿಲ್ಲ ನಂತರ ಹಿರಿಯ ವಕೀಲರನ್ನು ಸಂಪರ್ಕಿಸಿ ಎಂದು ಮೌಖಿಕವಾಗಿ ತಿಳಿಸಿದ್ದರು.
ಬಳಿಕ ಸುಪ್ರೀಂ ಕೋರ್ಟ್ ಮತ್ತು ಹೈ ಕೋರ್ಟ್ ವಕೀಲರಾದ ಎಚ್.ಬಿ.ಶಿವರಾಜು ಅವರನ್ನು ಈ ಪ್ರಕರಣದಲ್ಲಿ ವಾದ ಮಂಡನೆ ಮಾಡಿಲು ಆರೋಪಿಗಳ ಪರ ವಕೀಲರಾದ ಶಕ್ತಿ ದೂದುಹಳ್ಳಿ ಮನವಿ ಮಾಡಿದ್ದರು. ಈ ಮನವಿ ಮೇರೆಗೆ ವಕೀಲ ಶಿವರಾಜು ಅವರು71ನೇ ಕೋರ್ಟ್ ಹಾಲ್‌ನಲ್ಲಿ ವಾದ ಮಂಡಿನೆ ಮಾಡುವ ಮೂಲಕ ಜಾಮೀನು ಮಂಜೂರು ಮಾಡುವಂತೆ ನ್ಯಾಯಾಧೀಶರಲ್ಲಿ ಮನವಿ ಮಾಡಿದ್ದರು, ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು ಷರತ್ತು ಬದ್ದ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ.
ಆರೋಪಿಗಳ ಪರ ವಕೀಲರಾದ ಶಕ್ತಿ ದೂದುಹಳ್ಳಿ ಅವರಿಗೆ ಈ ಪ್ರಕರಣದಲ್ಲಿ ವಕೀಲರಾದ ಎಚ್.ಬಿ.ಶಿವರಾಜು ಅವರನ್ನು ಭೇಟಿ ಮಾಡಿ ಎಂದು ಹಲವು ಹಿರಿಯ ವಕೀಲರು ಸಮಹೆ ನೀಡಿದ್ದರಿಂದ ಶಿವರಾಜು ಅವರನ್ನು ಸಂಪರ್ಕಿಸಿದ್ದರು.
ಪ್ರಕರಣವೇನು?: ಬಿಎಂಟಿಸಿ ಘಟಕ-9 ನಿರ್ವಾಹಕ ಚೇತನ್ ರಾಜ್ ಎಂಬಾತ ಈ ಪ್ರಕರಣ ಅರ್ಜಿದಾರರಾದ ಚಾಲಕ ಮಲ್ಲೇಶಪ್ಪ ಅವರ ಪತ್ನಿ, ಬಿಎಂಟಿಸಿ ನೌಕರ ರೇಣುಕಾನಂದ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಈ ಸಂಬಂಧ ಡಿ.12ರಂದು ಇದೇ ಕೋರ್ಟನಲ್ಲಿ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ಈ ನಾಲ್ವರಿಗೂ ಷರತ್ತುಗಳೊಂದಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ್ದು, ಅಲ್ಲದೆ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದ್ದರು.
ಅಂದು ಡಿ.12ರಂದು ಚಂದ್ರಶೇಖರ್ ಸೇರಿದಂತೆ ನಾಲ್ವರು ಅರ್ಜಿದಾರರಿಗೆ ಮಧ್ಯಂತರ ಜಾಮೀನು ಷರತ್ತುಗಳೊಂದಿಗೆ ಅನುಮತಿಸಲಾಗಿದ್ದು, ಅದರಲ್ಲಿ 1) ನಾಲ್ವರು ಅರ್ಜಿದಾರರು ಸಭೆಯಲ್ಲಿ (Mrrting) ಯಾವುದೇ ಸಮಸ್ಯೆ ಉಂಟುಮಾಡುವುದಿಲ್ಲ ಮತ್ತು ನ್ಯಾಯಾಲದ ನೀಡಿರುವ ನಿಯಮಗಳನ್ನು ಪಾಲಿಸುವ ಜತೆಗೆ ಸಭೆಯ ನಡಾವಳಿಗಳನ್ನು ಸುಗಮವಾಗಿ ನಡೆಸಲು ಅವಕಾಶ ನೀಡಬೇಕು.
2) ತನಿಖಾಧಿಕಾರಿ ಕರೆದಾಗ ಅರ್ಜಿದಾರರು ಅವರ ಮುಂದೆ ಹಾಜರಾಗಬೇಕು. 3) ಮಧ್ಯಂತರ ಜಾಮೀನಿನಲ್ಲಿರುವ ಅರ್ಜಿದಾರರು ಯಾವುದೇ ರೀತಿಯ ಅಪರಾಧ ಕೃತ್ಯಗಳಲ್ಲಿ ತೊಡಗಬಾರದು.
4) ಅರ್ಜಿದಾರರು ಸಾಕ್ಷಿಗಳನ್ನು ತಿರುಚಬಾರದು ಅಥವಾ ಅವರಿಗೆ ಬೆದರಿಕೆ ಹಾಕಬಾರದು. 5) ಅರ್ಜಿದಾರರು ತನಿಖಾ ಪ್ರಕ್ರಿಯೆ ಸಮಯದಲ್ಲಿ ತನಿಖಾ ಸಂಸ್ಥೆಯೊಂದಿಗೆ ಸಹಕರಿಸಬೇಕು ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸುವ ಮೂಲಕ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಇನ್ನು ಪ್ರಮುಖವಾಗಿ ಪ್ರತಿವಾದಿ ಪೊಲೀಸರು ಮಧ್ಯಂತರ ಜಾಮೀನು ಅರ್ಜಿ ಹಾಕಿರುವ ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ನಿರ್ದೇಶಿಸಿದ್ದು, ಅಲ್ಲದೆ ಈ ಮುಖ್ಯ ಅರ್ಜಿ ಇತ್ಯರ್ಥವಾಗುವವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ ಎಂದು ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.
ಅಂದು ಇಂದು ಸಾಥ್ ನೀಡಿದ ಹಿರಿಯ ವಕೀಲರು: ಕೋರ್ಟ್‌ನಲ್ಲಿ ಜಾಮೀನು ಕೋರಿ ಹಾಕ್ಕಿದ್ದ ಅರ್ಜಿಗೆ ಹಿರಿಯ ವಕೀಲರು ವಕೀಲೆ ಶಕ್ತಿ ದೂದುಹಳ್ಳಿ ಅವರಿಗೆ ಮಾರ್ಗದರ್ಶನ ನೀಡಿದ್ದರು. ಅದೇ ರೀತಿ ಇಂದು ಕೂಡ ನಿರ್ವಾಹಕ ಚೇತನ್ ರಾಜ್ ಪರ ವಕೀಲರು ಸಲ್ಲಿಸಿದ್ದ ತಕರಾರು ಅರ್ಜಿ ಬಗ್ಗೆ ಹೇಗೆ ಪ್ರತಿವಾದ ಮಂಡಿಸಬೇಕು ಎಂದು ಮಾರ್ಗದರ್ಶನ ನೀಡಿದ್ದರು.
Related










