ಬೆಂಗಳೂರು: ಬೆಂಗಳೂರು ಮಹಾನಗದ ಸಾರಿಗೆ ಸಂಸ್ಥೆ (BMTC) ಚಾಲಕನೊಬ್ಬ ಮದ್ಯಪಾನ ಮಾಡಿ ಬಸ್ ಚಾಲನೆ ಮಾಡುತ್ತಿದ್ದನ್ನು ಪ್ರಶ್ನಿಸಿದ ಪ್ರಯಾಣಿಕ ಮಹಿಳೆ ಜತೆ ಚಾಲಕ ವಾಗ್ವಾದ ನಡೆಸಿದ ಘಟನೆ ನಗರದಲ್ಲಿ ನಡೆದಿದೆ.

ನಿನ್ನೆ ಬುಧವಾರ ಮಾ. 18ರ ರಾತ್ರಿ 7:30ರ ಸುಮಾರಿಗೆ ಈ ಘಟನೆ ಟಿನ್ ಫ್ಯಾಕ್ಟರಿ ಹತ್ತಿರ ನಡೆದಿದೆ. ಚಾಲಕ ಅಡ್ಡಾದಿಡ್ಡಿಯಾಗಿ ಬಸ್ ಚಲಾಯಿಸುತ್ತಿದ್ದ. ಈ ವೇಳೆ ಚಾಲಕನ ವರ್ತನೆ ಕಂಡು ಬಸ್ ನಿಲ್ಲುಸುವಂತೆ ಮಹಿಳೆ ಕೇಳಿಕೊಂಡಿದ್ದಾರೆ. ಆದರೆ, ಬಸ್ ನಿಲ್ಲಿಸದೆ ಆ ಮಹಿಳೆ ಜತೆ ಚಾಲಕ ವಾಗ್ವಾದ ಮಾಡಿದ್ದಾನೆ.
KA – 57 – F – 3660 ಸಂಖ್ಯೆಯ ಬಿಎಂಟಿಸಿ ಬಸ್‌ನಲ್ಲಿ ವಾಗ್ವಾದ ನಡೆದಿದೆ. ಬಸ್ ಚಾಲಕನ ವರ್ತನೆ ಕಂಡು ವಿಡಿಯೋ ಸೆರೆ ಹಿಡಿದು ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಬಸ್ ಚಾಲನೆ ಮಾಡುತ್ತಿದ್ದ ಚಾಲಕನ ಗಮನಿಸಿದರೆ ಮದ್ಯಪಾನ ಮಾಡಿ ಬಸ್ ಓಡಿಸುತ್ತಿದ್ದ ಎಂಬ ಅನುಮಾನವಿದೆ. ಆದರೆ, ಈ ಬಗ್ಗೆ ಸೂಕ್ತ ತನಿಖೆ ನಡೆಸಿದರೆ ಆತ ಒತ್ತಡದಲ್ಲಿ ಡ್ಯೂಟಿ ಮಾಡುತ್ತಿದ್ದಣೆ ಅಥವಾ ಕುಡಿದು ಬಸ್ ಓಡಿಸುತ್ತಿದ್ದನೆ ಎಂಬ ಸತ್ಯ ಹೊರಬೀಳಲಿದೆ.
Related










