CrimeNEWSಸಿನಿಪಥ

ನಟಿ ಮಣಿಯರ ಕೋಳಿ ಜಗಳಕ್ಕೆ ಹೈರಾಣಾದ ಜೈಲ್‌ ಸಿಬ್ಬಂದಿ, ಕೈದಿಗಳು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಡ್ರಗ್ಸ್‌ ದಂಧೆ ಪ್ರಕರಣದಲ್ಲಿ ಜೈಲು ಸೇರಿರುವ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಅವರ ನಿತ್ಯದ ಕಿತ್ತಾಟದಿಂದ ಜೈಲು ಸಿಬ್ಬಂದಿ ಮತ್ತು ಕೈದಿಗಳಿಗೆ ತಲೆನೋವು ಶುರುವಾಗಿದೆ. ಈ ನಶೆರಾಣಿಯರ ಜಗಳಕ್ಕೆ ಜೈಲಿಗೆ ಜೈಲೇ ಕಂಗಾಲಾಗಿ ಹೋಗಿದೆ ಎಂದು ಹೇಳಲಾಗುತ್ತಿದೆ.

ಪ್ರತಿದಿನ ಒಬ್ಬರ ಮೇಲೆ ಒಬ್ಬರು ಸಾಲು ಸಾಲು ಆರೋಪ ಮಾಡುತ್ತಿದ್ದಾರೆ. ಜತೆಗೆ ಹಾವು-ಮುಂಗುಸಿಯಂತೆ ಕಿತ್ತಾಡುತ್ತಿದ್ದಾರೆ ಇದರಿಂದ ಜೈಲು ಸಿಬ್ಬಂದಿ ನೆಮ್ಮದಿ ಹಾಳಾಗಿದೆ. ಸಿಬ್ಬಂದಿಯ ಜತೆಗೆ ಅಕ್ಕ ಪಕ್ಕದಲ್ಲಿರುವ ಕೈದಿಗಳಿಗೂ ಸಹಿಸಿಕೊಳ್ಳಲಾಗದಷ್ಟು ತಲೆಬಿಸಿಯಾಗಿದ್ದು. ಇವರಿಬ್ಬರೂ ಯಾವಾಗ ಜಾಮೀನು ಪಡೆದು ಹೊರ ಹೋಗುತ್ತಾರೋ ಎಂದು ಚಡಪಡಿಸುತ್ತಿದ್ದಾರಂತೆ.

ಪರಪ್ಪನ ಅಗ್ರಹಾರದ ಒಂದೇ ಸೆಲ್​ನಲ್ಲಿರುವ ನಟಿಯರ ಪೈಕಿ ರಾಗಿಣಿಗೆ ಪುಸ್ತಕ ಓದೋದು, ಟಿವಿ ನೋಡೋದು ನಿತ್ಯದ ಚಟುವಟಿಕೆ. ಬೆಳಗ್ಗೆ ಎದ್ದು ಯೋಗ ಮಾಡೋದು ಸಂಜನಾ ಗಲ್ರಾನಿ ದಿನಚರಿ. ಜತೆಗೆ, ಸಂಜನಾ ಜೈಲಲ್ಲಿರೋ ಪುಟ್ಟ ಮಕ್ಕಳ ಜತೆ ಸಮಯ ಕಳೆಯುತ್ತಿದ್ದಾರೆ ಎಂದು ಹೇಳಲಾಗಿದೆ. ಈ ನಡುವೆ, ಸಂಜನಾ ಬೆಳ್ಳಂಬೆಳಗ್ಗೆ ಸೆಲ್​ನ ಲೈಟ್ ಹಾಕಿ ಯೋಗ ಮಾಡ್ತಾರೆ ಅಂತಾ ತುಪ್ಪದ ಹುಡುಗಿಗೆ ಸಿಟ್ಟು. ನನ್ನನ್ನು ನೆಮ್ಮದಿಯಾಗಿ ಮಲಗೋಕೆ ಬಿಡ್ತಿಲ್ಲ ಅಂತಾ ಜೈಲರ್ ಮುಂದೆ ಕಂಪ್ಲೇಂಟ್ ಮಾಡಿದ್ದಾರೆ.

ಇನ್ನು ಇದರಿಂದ ಆರಂಭದಲ್ಲಿ ನಟಿಯರೆಂದು ಗೌರವಿಸಿದ್ದ ಸಿಬ್ಬಂದಿ, ಕೈದಿಗಳು ಇದೀಗ ಯಪ್ಪಾ ರಾಗಿಣಿನಾ ಮತ್ತು ಸಂಜನಾನಾ ಅನ್ನೋ ಮಟ್ಟಕ್ಕೆ ತಲುಪಿದ್ದಾರೆ ಎನ್ನಲ್ಲಾಗುತ್ತಿದೆ. ಇತ್ತ, ರಾಗಿಣಿ ರಾತ್ರಿಯೆಲ್ಲಾ ಲೈಟ್ ಹಾಕಿರ್ತಾಳೆ ಅಂತಾ ಸಂಜನಾ ದೂರಿದರೆ, ಇತ್ತ ಯೋಗ ಮಾಡಲು ಬೆಳ್ಳಂಬೆಳಗ್ಗೆ ಎದ್ದು ಲೈಟ್‌ ಹಾಕಿಕೊಂಡು ನಿದ್ರೆ ಮಾಡಲು ಬಿಡುತ್ತಿಲ್ಲ ಎನ್ನುವುದು ರಾಗಿಣಿ ದೂರಾಗಿದೆ ಎಂದು ಹೇಳಲಾಗುತ್ತಿದೆ.

Leave a Reply

error: Content is protected !!
LATEST
ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ...