NEWSಉದ್ಯೋಗನಮ್ಮರಾಜ್ಯ

ನೌಕರರಿಗೆ ಗುಡ್‌ ನ್ಯೂಸ್: ಏ.1ರಿಂದ ಬದಲಾಗಲಿದೆ ನಿಮ್ಮ ಸಂಬಳ, ಲಾಭ ಹೆಚ್ಚು!

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಹೊಸ ಹಣಕಾಸು ವರ್ಷ ಅಂದರೆ ಏಪ್ರಿಲ್ 1, 2026 ರಿಂದ ದೇಶದ ವೇತನ ಪಡೆಯುವ ನೌಕರರ ಪೇ-ಸ್ಲಿಪ್‌ನಲ್ಲಿ ಪ್ರಮುಖ ಬದಲಾವಣೆಗಳು ಕಂಡುಬರಲಿವೆ. ಕೇಂದ್ರ ಸರ್ಕಾರವು ಹೊಸ ಆದಾಯ ತೆರಿಗೆ ಕಾಯ್ದೆ 2025 ಮತ್ತು ಹೊಸ ಕಾರ್ಮಿಕ ಸಂಹಿತೆಯನ್ನು (New Labour Code) ಜಾರಿಗೆ ತರುತ್ತಿರುವುದೇ ಇದಕ್ಕೆ ಕಾರಣ.

ಇದರಿಂದ ನಿಮ್ಮ ‘ಟೇಕ್ ಹೋಮ್ ಸ್ಯಾಲರಿ’ (ಕೈಗೆ ಸಿಗುವ ಸಂಬಳ) ಮತ್ತು ಪಿಎಫ್ ಕೊಡುಗೆಯಲ್ಲಿ ವ್ಯತ್ಯಾಸವಾಗಲಿದೆ. ಆದರೂ ಇದರಿಂದ ನಿಮಗೆ ಲಾಭ ಹೆಚ್ಚಾಗಿ ಸಿಗಲಿದೆ. ಇದು ನೌಕರರಿಗೆ ಗುಡ್‌ನ್ಯೂಸ್‌ ಎಂದೇ ಹೇಳಬಹುದು.

ಏನಿದು ಹೊಸ ನಿಯಮ?: ಹೊಸ ಕಾರ್ಮಿಕ ಸಂಹಿತೆಯ ಪ್ರಕಾರ, ಉದ್ಯೋಗಿಯ ಮೂಲ ವೇತನವು (Basic Salary) ಒಟ್ಟು ಸಿಟಿಸಿಯ (CTC) ಕನಿಷ್ಠ ಶೇ. 50 ರಷ್ಟು ಇರಲೇಬೇಕು. ಪ್ರಸ್ತುತ ಅನೇಕ ಕಂಪನಿಗಳು ತೆರಿಗೆ ಉಳಿಸಲು ಮೂಲ ವೇತನವನ್ನು ಕಡಿಮೆ ಇಟ್ಟು (ಶೇ. 20-30), ಎಚ್‌ಆರ್‌ಎ (HRA), ಟ್ರಾವೆಲ್ ಅಲೋವೆನ್ಸ್ ಮತ್ತು ಸ್ಪೆಷಲ್ ಅಲೋವೆನ್ಸ್‌ಗಳನ್ನು ಹೆಚ್ಚಾಗಿ ನೀಡುತ್ತಿವೆ. ಆದರೆ ಏಪ್ರಿಲ್ 1 ರಿಂದ ಎಲ್ಲಾ ಭತ್ಯೆಗಳು ಒಟ್ಟು ಸಂಬಳದ ಶೇ. 50 ಕ್ಕಿಂತ ಹೆಚ್ಚಿರಬಾರದು.

ಪಿಎಫ್ ಮತ್ತು ನಿವೃತ್ತಿ ನಿಧಿ ಹೆಚ್ಚಳ: ನಿಮ್ಮ ಭವಿಷ್ಯ ನಿಧಿ (PF) ಮತ್ತು ಗ್ರಾಚ್ಯುಟಿ ಲೆಕ್ಕಾಚಾರವು ಮೂಲ ವೇತನದ ಆಧಾರದ ಮೇಲೆ ನಡೆಯುತ್ತದೆ. ಈಗ ಮೂಲ ವೇತನವು ಕಡ್ಡಾಯವಾಗಿ ಶೇ. 50 ಕ್ಕೆ ಏರಿಕೆಯಾಗುವುದರಿಂದ, ನಿಮ್ಮ ಪಿಎಫ್ ಖಾತೆಗೆ ಜಮೆಯಾಗುವ ಹಣವೂ ಹೆಚ್ಚಾಗಲಿದೆ. ಇದು ನಿಮ್ಮ ನಿವೃತ್ತಿ ಜೀವನಕ್ಕೆ ಒಳ್ಳೆಯದು, ಆದರೆ ಪ್ರತಿ ತಿಂಗಳು ನಿಮ್ಮ ಕೈಗೆ ಸಿಗುವ ಸಂಬಳದಲ್ಲಿ ಸ್ವಲ್ಪ ಇಳಿಕೆಯಾಗಬಹುದು.

ಉದಾಹರಣೆ: ಒಬ್ಬ ವ್ಯಕ್ತಿಯ ಒಟ್ಟು ಸಂಬಳ 50,000 ರೂ. ಎಂದು ಇಟ್ಟುಕೊಳ್ಳೋಣ. ಕಂಪನಿಯು ಮೂಲ ವೇತನವನ್ನು 10,000 ರೂ. (ಶೇ. 20) ಇಟ್ಟು ಬಾಕಿ 40,000 ರೂ.ಗಳನ್ನು ಭತ್ಯೆಗಳಲ್ಲಿ ನೀಡುತ್ತಿದ್ದರೆ, ಪಿಎಫ್ ಕಡಿತವು 10,000 ರೂ. ಮೇಲೆ ಮಾತ್ರ ಇರುತ್ತದೆ.

ಹೊಸ ನಿಯಮ: ಕಂಪನಿಯು ಮೂಲ ವೇತನವನ್ನು ಕಡ್ಡಾಯವಾಗಿ 25,000 ರೂ. (ಶೇ. 50) ಮಾಡಬೇಕಾಗುತ್ತದೆ. ಆಗ ಪಿಎಫ್ ಕಡಿತವು 25,000 ರೂ. ಮೇಲೆ ನಡೆಯುವುದರಿಂದ ನಿಮ್ಮ ಕೈಗೆ ಸಿಗುವ ಹಣ (Take-home salary) ಕಡಿಮೆಯಾಗುತ್ತದೆ. ಇನ್ನೊಂದು ಅಂಶ ಏನೆಂದರೆ ಈಗಾಗಲೇ ನಿಮ್ಮ ಮೂಲ ವೇತನವು ಶೇ. 50 ರಷ್ಟಿದ್ದರೆ ನಿಮ್ಮ ಸಂಬಳದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ.

ತೆರಿಗೆ ಮೇಲೆ ಏನು ಪರಿಣಾಮ?: ಹಳೆಯ ತೆರಿಗೆ ವ್ಯವಸ್ಥೆ : ಇಲ್ಲಿ ಎಚ್‌ಆರ್‌ಎ (HRA) ವಿನಾಯಿತಿಯು ಮೂಲ ವೇತನದ ಮೇಲೆ ಆಧಾರಿತವಾಗಿರುತ್ತದೆ. ಮೂಲ ವೇತನ ಹೆಚ್ಚಾದಂತೆ ತೆರಿಗೆ ವಿನಾಯಿತಿಯ ಲೆಕ್ಕಾಚಾರದಲ್ಲಿ ವ್ಯತ್ಯಾಸವಾಗಬಹುದು. ಆದರೂ ಮೆಟ್ರೋ ಸಿಟಿಗಳಲ್ಲಿ ವಾಸಿಸುವವರು ಮತ್ತು ಹೋಮ್ ಲೋನ್ ಹೊಂದಿರುವವರು 80C ಅಥವಾ NPS ಮೂಲಕ ತೆರಿಗೆ ಉಳಿಸಬಹುದು.

ಹೊಸ ತೆರಿಗೆ ವ್ಯವಸ್ಥೆ : ಈ ವ್ಯವಸ್ಥೆ ಆಯ್ದುಕೊಂಡವರಿಗೆ ಹೆಚ್ಚಿನ ಆತಂಕವಿಲ್ಲ. ಹೊಸ ತೆರಿಗೆ ಪದ್ಧತಿಯಲ್ಲಿ 12.75 ಲಕ್ಷ ರೂ.ವರೆಗಿನ ವಾರ್ಷಿಕ ಆದಾಯಕ್ಕೆ ಯಾವುದೇ ತೆರಿಗೆ ಇರುವುದಿಲ್ಲ (75,000 ರೂ. ಸ್ಟ್ಯಾಂಡರ್ಡ್ ಡಿಡಕ್ಷನ್ ಸೇರಿ). ಇಲ್ಲಿ ಎಚ್‌ಆರ್‌ಎ ರಿಯಾಯಿತಿಗಳು ಅನ್ವಯಿಸದ ಕಾರಣ ಮೂಲ ವೇತನ ಹೆಚ್ಚಳವು ನಿಮ್ಮ ತೆರಿಗೆಯ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲ.

ಒಟ್ಟಾರೆಯಾಗಿ, ಈ ಹೊಸ ನಿಯಮದಿಂದ ನಿಮ್ಮ ಮಾಸಿಕ ವೇತನದಲ್ಲಿ ಸ್ವಲ್ಪ ಕಡಿತವಾದರೂ, ಭವಿಷ್ಯದ ದೃಷ್ಟಿಯಿಂದ ಅಂದರೆ ಪಿಎಫ್ ಮತ್ತು ಗ್ರಾಚ್ಯುಟಿ ರೂಪದಲ್ಲಿ ದೊಡ್ಡ ಮೊತ್ತದ ಹಣ ಸಂಗ್ರಹವಾಗಲಿದೆ. ಅಂದರೆ ಇದರಿಂದ ನಿಮಗೆ ಲಾಭ ಹೆಚ್ಚು ಅಲ್ಲವೆ.

Megha
the authorMegha

Leave a Reply

error: Content is protected !!
Latest news
ನೌಕರರಿಗೆ ಗುಡ್‌ ನ್ಯೂಸ್: ಏ.1ರಿಂದ ಬದಲಾಗಲಿದೆ ನಿಮ್ಮ ಸಂಬಳ, ಲಾಭ ಹೆಚ್ಚು! ಬೆಲೆ ಕಳೆದುಕೊಂಡ ಕೆಂಪು ಸುಂದರಿ: ಸಂಕಷ್ಟಕ್ಕೆ ಸಿಲುಕಿದ ಬೆಳೆಗಾರ ರೈತರು ಸರ್ಕಾರಿ ಕೆಲಸ ಕೊಡಿಸುವುದಾಗಿ ನೂರಾರು ಅಮಾಯಕರ ನಂಬಿಸಿ 25 ಕೋಟಿ ರೂ. ಸ್ವಾಹ: ದಂಪತಿ ಬಂಧನ, ಹಲವರಿಗೆ ಗಾಳ ! ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಬಸ್‌ ಡಿಕ್ಕಿ : ನಾಲ್ವರು ಮೃತ- ಹಲವರಿಗೆ ಗಾಯ KSRTC: ಟಿಕೆಟ್‌ ತೋರಿಸದಿದ್ದಕ್ಕೆ ತನಿಖಾ ಅಧಿಕಾರಿಯಿಂದ ವೃದ್ಧನ ಮೇಲೆ ಹಲ್ಲೆ ಆರೋಪ- ಅಧಿಕಾರಿ ವಿರುದ್ಧ FIR ದಾಖಲು ಲಾರಿ -ಟಿ.ಟಿ.ವಾಹನ ನಡುವೆ ಭೀಕರ ಅಪಘಾತ: ಕಾಶಿ ತೀರ್ಥಯಾತ್ರೆಗೆ ಹೊರಟಿದ್ದ ಮೂವರು ಮೃತ, 12 ಮಂದಿಗೆ ಗಾಯ GBA: ಅನಧಿಕೃತ ಫ್ಲೆಕ್ಸ್, ಬ್ಯಾನರ್ ತೆರವು- ಆಯುಕ್ತ ರಾಜೇಂದ್ರ ಚೋಳನ್ ಪವಿತ್ರ ರಂಜಾನ್ ಹಬ್ಬದ ಸಂದೇಶ ಮನುಕುಲಕ್ಕೆ‌ ಮಾರ್ಗದರ್ಶನ: ಸಿಎಂ ರಾಜ್ಯ ಉಗ್ರಾಣ ನಿಗಮದ ಎಂಡಿ ಆತ್ಮಹತ್ಯೆ ಪ್ರಕರಣ: ಸಾರಿಗೆ ಸಚಿವ ರಾಜೀನಾಮೆ! KKRTC: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬಸ್‌ ಪಲ್ಟಿ- 8ಮಂದಿಗೆ ಗಾಯ