NEWSದೇಶ-ವಿದೇಶರಾಜಕೀಯ

ಪ್ರಧಾನಿಗಾದರೆ 8,400 ಕೋಟಿ ರೂ. ವಿಮಾನ, ಯೋಧರಿಗೆ ಬುಲೆಟ್ ಪ್ರೂಫ್ ರಹಿತ ಟ್ರಕ್: ಇದು ಯಾವನ್ಯಾಯ ಎಂದ ರಾಹುಲ್

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ಸರ್ಕಾರ ಪ್ರಧಾನಿಗಾಗಿ 8,400 ಕೋಟಿ ರೂಪಾಯಿಯ ವಿಮಾನ ಮೀಸಲಿಟ್ಟಿದೆ. ಆದರೆ ಬುಲೆಟ್ ಪ್ರೂಫ್ ರಹಿತ ಟ್ರಕ್‍ಗಳಲ್ಲಿ ಸೈನಿಕರನ್ನು ಹುತಾತ್ಮರಾಗಲು ಕಳುಹಿಸಲಾಗುತ್ತಿದೆ ಇದು ನ್ಯಾಯವೇ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರ ವಿವಿಐಪಿಗಳಿಗಾಗಿ ಖರೀದಿಸಿರುವ ವಿಶೇಷ ವಿಮಾನದ ಕುರಿತು ಕಟುವಾಗಿ ಟೀಕಿಸಿ ಟ್ವೀಟ್‌ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿ ಸೈನಿಕರ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ರಾಹುಲ್ ಗಾಂಧಿ ಹಂಚಿಕೊಂಡಿರುವ ವೀಡಿಯೋದಲ್ಲಿ ಟ್ರಕ್ ಒಳಗೆ ಕುಳಿತಿದ್ದ ಕೆಲ ಸೈನಿಕರು, ತಮ್ಮ ಅಧಿಕಾರಿ ಬುಲೆಟ್ ಪ್ರೂಫ್ ಟ್ರಕ್‍ನಲ್ಲಿ ಕಳುಹಿಸುವ ಮೂಲಕ ನಮ್ಮ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕಳೆದ ವರ್ಷ ಸಂಭವಿಸಿದ ಪುಲ್ವಾಮಾ ದಾಳಿ ಬಳಿಕ ಕಾಶ್ಮೀರ ಕಣಿವೆಯಲ್ಲಿ ಸೈನ್ಯದ ಬೆಂಗಾವಲು ಪಡೆಯ ಸುರಕ್ಷತೆ ಖಚಿತಪಡಿಸಿಕೊಳ್ಳಲು ಮೈನ್-ಪ್ರೊಟೆಕ್ಟೆಡ್ ವಾಹನಗಳು (ಎಂಪಿವಿ) ಹಾಗೂ 30 ಸೀಟ್‍ಗಳ ಬಸ್‍ಗಳನ್ನು ಖರೀದಿಸುವುದಾಗಿ ಸಿಆರ್ ಪಿಎಫ್ ಹೇಳಿದೆ.

ಜಮ್ಮು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕರು ಹಾಗೂ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ಅಧಿಕಾರಿಗಳು (ಸಿಎಪಿಎಫ್) ಕೆಲಸಕ್ಕೆ ಹಾಜರಾಗಲು, ಪ್ರವಾಸಕ್ಕೆ ತೆರಳಲು ಅಥವಾ ರಜೆ ಮೇಲೆ ಮನೆಗೆ ತೆರಳಲು ವಾಣಿಜ್ಯ ವಿಮಾನಗಳನ್ನು ಬಳಸಬಹುದು ಎಂದು ಕೇಂದ್ರ ಇಲಾಖೆ ಕಳೆದ ವರ್ಷ ತಿಳಿಸಿತ್ತು. ಅಲ್ಲದೆ ಜಮ್ಮು ಕಾಶ್ಮೀರದಂತಹ ಸೂಕ್ಷ್ಮ ಪ್ರದೇಶದ ರಸ್ತೆಗಳಲ್ಲಿ ಸಂಚರಿಸುವ ಸೈನಿಕರಿಗೆ ಗೃಹ ಸಚಿವಾಲಯ  ವಿಮಾನದಲ್ಲಿ ಸಂಚರಿಸುವ ಅವಕಾಶ ನೀಡಿರುವುದಾಗಿ ಘೋಷಿಸಿತ್ತು.

Leave a Reply

error: Content is protected !!
LATEST
KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ