ಬೆಂಗಳೂರು: ರಾಜ್ಯದಲ್ಲಿ ಇಂದು 8,191 ಹೊಸ ಪ್ರಕರಣ ಪತ್ತೆಯಾಗಿವೆ.ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 7,26,106ಕ್ಕೆ ಏರಿಕೆ ಆಗಿದೆ.
ಕೊರೊನಾದಿಂದಾಗಿ ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 87 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 10,142ಕ್ಕೆ (ಅನ್ಯ ಕಾರಣಕ್ಕೆ 19 ಮಂದಿ ಮೃತಪಟ್ಟಿರುವುದು ಸೇರಿ) ಏರಿಕೆಯಾಗಿದೆ.
ಇಂದಿನ 13/10/2020 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.@CMofKarnataka @BSYBJP @DVSadanandGowda @SureshAngadi_ @MoHFW_INDIA @UNDP_India @WHOSEARO @UNICEFIndia @sriramulubjp @drashwathcn @BSBommaihttps://t.co/fCRioQ0JaB pic.twitter.com/0SDLs6obdF
— K'taka Health Dept (@DHFWKA) October 13, 2020
ಯಾವ ಜಿಲ್ಲೆಯಲ್ಲಿ ಅ.10ರಂದು ಕೊರೊನಾ ಸೋಂಕಿಗೆ ಎಷ್ಟು ಜನ ಒಳಗಾಗಿದ್ದಾಋಎ ಮತ್ತು ಬಲಿಯಾಗಿದ್ದಾರೆ ಎಂದು ಬಾಕ್ಸ್ ಒಳಗೆ ಕೊಟ್ಟಿರುವುದರಲ್ಲಿ ನೋಡಿ…
ಇಂದು ಬೆಂಗಳೂರು ನಗರವೊಂದರಲ್ಲೇ ಅತಿ ಹೆಚ್ಚು ಅಂದರೆ 3,776 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಸಿಲಿಕಾನ್ ಸಿಟಿಯಲ್ಲಿ ಸೋಂಕಿತರ ಸಂಖ್ಯೆ 2,88,831ಕ್ಕೆ ಏರಿಕೆಯಾಗಿದೆ. ಇಂದು 28 ಮಂದಿ ಮೃತಪಟ್ಟಿದ್ದಾರೆ.
ಇಂದು 10,421ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಗುಣಮುಖರಾದವರ ಸಂಖ್ಯೆ 6,02,505ಕ್ಕೆ ಏರಿಕೆಯಾಗಿದೆ. 1,13,459 ಮಂದಿ ನಿಗದಿತ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 919ಮಂದಿ ಐಸಿಯುನಲ್ಲಿದ್ದಾರೆ.