NEWSನಮ್ಮರಾಜ್ಯರಾಜಕೀಯ

ಆರ್‌ಆರ್‌ ನಗರ ಉಪ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಕುಸುಮಾ 12 ಕೋಟಿ ರೂ. ಒಡತಿ

ಪತಿಯ ಹೆಸರನ್ನು ಆಸ್ತಿವಿವರ ಸಲ್ಲಿಸುವ ವೇಳೆ ನಮೂದಿಸಿಲ್ಲ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಮಂಗಳವಾರ ಜ್ಯೋತಿಷಿಗಳ ಸಲಹೆಯಂತೆ ನಾಮಪತ್ರ ಸಲ್ಲಿಸಿ, ಆಸ್ತಿ ವಿವರಗಳುಳ್ಳ ಅಫಿಡವಿಟ್ ನೀಡಿದ್ದಾರೆ.

ದಿ. ಐಎಎಸ್ ಅಧಿಕಾರಿ ಡಿ.ಕೆ. ರವಿ ಪತ್ನಿ ಹಾಗೂ ಹನುಮಂತರಾಯಪ್ಪ ಅವರ ಪುತ್ರಿ ಕುಸುಮಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಆರ್‌ಆರ್‌ ನಗರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.

ಕುಸುಮಾ ಕುಟುಂಬ, ವಿದ್ಯಾಭ್ಯಾಸ, ವೃತ್ತಿ
ಬೆಂಗಳೂರಿನಲ್ಲಿ 1989ರ ಜೂನ್ 6 ರಂದು ಜನಿಸಿದ ಕುಸುಮಾ ಜಾತ್ಯತೀತ ಜನತಾದಳ ಮುಖಂಡ ಹನುಮಂತರಾಯಪ್ಪ ಅವರ ಪುತ್ರಿ. 2010ರಲ್ಲಿ ಡಾ.ಅಂಬೇಡ್ಕರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಪದವಿ ಪಡೆದಿದ್ದಾರೆ. 2018ರಲ್ಲಿ ಯೂನಿವರ್ಸಿಟಿ ಆಫ್ ಮ್ಯಾಸಚೂಸೆಟ್ಸ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ (ಎಂ.ಎಸ್) ಪದವಿ ಪಡೆದಿದ್ದಾರೆ.

ಬೆಂಗಳೂರಿನ ದಯಾನಂದ ಸಾಗರ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿರುವ ಕುಸುಮಾ 2016ರಿಂದ ‘ನಿರಾಂತಕ’ ಸ್ವಯಂ ಸೇವಾ ಸಂಸ್ಥೆಯಲ್ಲಿ ಪ್ರವರ್ತಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸಮಾಜ ಸೇವೆಯ ಜತೆಗೆ ಓದು, ಬರವಣಿಗೆಯಂತಹ ಹವ್ಯಾಸಗಳು ಕುಸುಮಾ ತನ್ನ ನಿತ್ಯ ಚಟುವಟಿಕೆಯಲ್ಲಿ ಅಳವಡಿಸಿಕೊಂಡಿದ್ದಾರೆ. ನಿರಾತಂಕ ಸ್ವಯಂ ಸೇವಾ ಸಂಘದಲ್ಲಿ ನೊಂದ ವೃದ್ಧರಿಗೆ ಮತ್ತು ಮಹಿಳೆಯರ ಪರವಾಗಿ ಕಾರ್ಯ ನಿರ್ವಹಿಸಿರುವ ಅವರು ಈಗ ರಾಜಕೀಯ ಪ್ರವೇಶಿಸಿ ಜನ ಸೇವೆಗೆ ಮುಂದಾಗಿದ್ದಾರೆ.

ಪತಿ ಹೆಸರು ಹಾಕಿಲ್ಲ
ಕುಸಮಾ ಅವರು ಅಫಿಡವಿಟ್ ನಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರದ ಮತದಾರರಾಗಿದ್ದೇನೆ ಎಂದು ನಮೂದಿಸಿದ್ದಾರೆ. ತಮ್ಮ ಇಮೇಲ್, ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ಅಧಿಕೃತ ಖಾತೆಗಳನ್ನು ನೀಡಿದ್ದು, ಈ ಖಾತೆಗಳನ್ನು ಬಿಟ್ಟು ಮಿಕ್ಕ ಖಾತೆಗಳ ಪೋಸ್ಟ್ ಗಳಿಗೆ ಜವಾಬ್ದಾರರಲ್ಲ ಎಂದಿದ್ದಾರೆ. 2019-20ನೇ ಆರ್ಥಿಕ ವರ್ಷದಲ್ಲಿ 3,673,870 ಐಟಿ ರಿಟರ್ನ್ಸ್ ಫೈಲ್ ಮಾಡಿದ್ದಾರೆ. 2018-19ರಲ್ಲಿ 48,00,000 ರು ಹಾಗೂ 2017-18ರಲ್ಲಿ 6,00,000 ರು ಐಟಿ ರಿಟರ್ನ್ಸ್ ತೋರಿಸಿದ್ದಾರೆ. ಪತಿ ಹಾಗೂ ಕುಟುಂಬಸ್ಥರ ಹೆಸರನ್ನು ಉಲ್ಲೇಖಿಸಿಲ್ಲ.

ನಗದು, ಬ್ಯಾಂಕ್ ಠೇವಣಿ-ಚರಾಸ್ತಿ ವಿವರ

  • ನಗದು 1,41.050 ರೂ.
  • ಕೆನರಾ ಬ್ಯಾಂಕ್, ನಾಗರಭಾವಿ ಬ್ರ್ಯಾಂಚ್- 1,76,670.85 ರೂ.
  • ಆಕ್ಸಿಸ್ ಬ್ಯಾಂಕ್ ಐಟಿಐ ಲೇಔಟ್-5,7775 ರೂ.
  •  ಬ್ಯಾಂಕ್ ಆಫ್ ಬರೋಡಾ, ಕುಮಾರಸ್ವಾಮಿ ಲೇ ಔಟ್_ 3,27,765.29 ರೂ.
  •  ಬ್ಯಾಂಕ್ ಆಫ್ ಬರೋಡಾ ಸೌತ್ ಎಂಡ್ ರಸ್ತೆ- 1,000 ರೂ.
  •  ಎಸ್ ಬಿಐ ನಾಗರಭಾವಿ ಬ್ಯಾಂಕ್ – 41,620. 24 ರೂ.
  •  ಉಳಿತಾಯ ಖಾತೆ, ನಿಶ್ಚಿತ ಠೇವಣಿ ಮುಂತಾದ ಹೂಡಿಕೆ ಹೊಂದಿದ್ದಾರೆ.
  •  ಸುಮಾರು 2,45, 000 ರೂ.ವಿವಿಧ ಬಾಂಡ್, ಶೇರುಗಳಲ್ಲಿ ಹೂಡಿಕೆ ಮಾಡಿದ್ದಾರೆ.
  •  ಯಾವುದೇ ಸ್ವಂತ ವಾಹನ ಹೊಂದಿಲ್ಲ.
  •  ವೈಯಕ್ತಿಕ ಸಾಲ 2,05,000 ರೂ. (ಅನಿಲ್ ಗೌಡ ಎಚ್) ಹಾಗೂ 56, 58, 316 ರೂ. (ಎ ಬಿಎಚ್ ಇನ್ಫ್ರಾಸ್ಟ್ರಕ್ಚರ್ಸ್)
  • ಚಿನ್ನ ಬೆಳ್ಳಿ: 1,100 ಗ್ರಾಂ 45,00,000 ರೂ. ಮೌಲ್ಯ (ಗಿಫ್ಟ್) ಒಟ್ಟು ಚರಾಸ್ತಿ: 1,13,02,197. 38 ರೂ.

ಕೃಷಿ, ವಾಣಿಜ್ಯ ಭೂಮಿ, ಸ್ಥಿರಾಸ್ತಿ ವಿವರ

  • ತಮ್ಮ ಹೆಸರಿನಲ್ಲಿ ಯಾವುದೇ ಕೃಷಿ ಭೂಮಿ ಹೊಂದಿಲ್ಲ.
  •  ಬಿಬಿಎಂಪಿ ವಾರ್ಡ್ 40ರಲ್ಲಿ 1500 ಚದರ ಅಡಿ ಹಾಗೂ 2380 ಚದರಡಿ ವಿಸ್ತೀರ್ಣದ ಎರಡು ನಿವೇಶನ ಒಟ್ಟು ಮೌಲ್ಯ: 17, 84, 575 ರೂ.ಗೆ ಖರೀದಿ
  • ಎರಡು ಆಸ್ತಿಯ ಸದ್ಯದ ಮಾರುಕಟ್ಟೆ ಮೌಲ್ಯ: 1,37, 10,000
  • ಸಾಲ, ಆರ್ಥಿಕ ಮೂಲ : 20,48, 000 ರೂ. ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿದ್ದು ಸಂಬಳವೆ ಆರ್ಥಿಕ ಮೂಲ.
  • ಒಟ್ಟಾರೆ 12 ಕೋಟಿ ರೂ. ಒಡತಿಯಾಗಿದ್ದು, 1,13,02,197 ರೂ. ಚರಾಸ್ತಿ, 1,37, 10,000 ರೂ. ಸ್ಥಿರಾಸ್ತಿ, 20,48, 000 ರೂ. ಸಾಲವನ್ನು ತೋರಿಸಿದ್ದಾರೆ.

Leave a Reply

error: Content is protected !!
LATEST
ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ...