NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ನೌಕರರಿಗೆ ವೇತನ ಬಡ್ತಿ ನೀಡಿದ ಆಯಾ ತಿಂಗಳಲ್ಲಿಯೇ HRMSನಲ್ಲಿ ಜಾರಿ ಮಾಡಿ, ಇಲ್ಲದಿದ್ದರೆ ಕ್ರಮ- ಸಿಪಿಎಂ ಎಚ್ಚರಿಕೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಿಬ್ಬಂದಿಗಳಿಗೆ ವಾರ್ಷಿಕ ವೇತನ ಬಡ್ತಿ ಮಂಜೂರಾದ ನಂತರ ವಿಭಾಗಗಳಲ್ಲಿ ವಿಭಾಗೀಯ ಸಿಬ್ಬಂದಿ ಆದೇಶ ಹೊರಡಿಸಿದ ಎಚ್.ಆರ್.ಎಂ.ಎಸ್‌ನಲ್ಲಿ ನಮೂದಿಸಲಾದ ಸಿಬ್ಬಂದಿಗಳ ಮೂಲ ವೇತನದ ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳುವಂತೆ ವ್ಯವಸ್ಥಾಪಕ ನಿರ್ದೇಶಕರ ಆದೇಶದ ಮೇರೆಗೆ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ತಿಳಿಸಿದ್ದಾರೆ.

ನೌಕರರಿಗೆ ವಾರ್ಷಿಕ ವೇತನ ಬಡ್ತಿ ಮಂಜೂರು ಮಾಡಿದ ನಂತರ ಆಯಾ ತಿಂಗಳಲ್ಲಿಯೇ ವೇತನಕ್ಕೆ ಜಾರಿಗೊಳಿಸಿರುವುದನ್ನು ವಿಭಾಗ/ ಕಾರ್ಯಾಗಾರಗಳ ಲೆಕ್ಕಾಧಿಕಾರಿ ಖಚಿತಪಡಿಸಿಕೊಳ್ಳಬೇಕು ಹಾಗೂ ವಿಳಂಬ ಮಾಡುವ ಸಿಬ್ಬಂದಿಗಳ ವಿರುದ್ಧ ಸೂಕ್ತ ಶಿಸ್ತಿನ ಕ್ರಮ ಕೈಗೊಂಡು, ತೆಗೆದುಕೊಂಡ ಕ್ರಮದ ಬಗ್ಗೆ ಈ ಕಚೇರಿಗೆ ಅನುಸರಣಾ ವರದಿಯನ್ನು ಸಲ್ಲಿಸಬೇಕು ಎಂದು ಸಿಪಿಎಂ ಆದೇಶದಲ್ಲಿ ತಿಳಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ, ನಿಗಮದ ಸಿಬ್ಬಂದಿಗಳಿಗೆ ವಾರ್ಷಿಕ ವೇತನ ಬಡ್ತಿ ಮಂಜೂರಾದ ನಂತರ ವಿಭಾಗಗಳಲ್ಲಿ ವಿಭಾಗೀಯ ಸಿಬ್ಬಂದಿ ಆದೇಶ ಹೊರಡಿಸಿದ ನಂತರ ಎಚ್.ಆರ್.ಎಂ.ಎಸ್ ನಲ್ಲಿ ವಾರ್ಷಿಕ ವೇತನ ಬಡ್ತಿಯ ದಿನಾಂಕಕ್ಕೆ ಮೂಲ ವೇತನವನ್ನು ವಿಷಯ ನಿರ್ವಾಹಕರ ಲಾಗಿನ್‌ನಲ್ಲಿ ನಮೂದಿಸಲು ಕ್ರಮ ಜಾರಿಯಲ್ಲಿದೆ.

ಈ ಮೂಲ ವೇತನವನ್ನು ಎಚ್.ಆ‌ರ್.ಎಂ.ಎಸ್‌ನಲ್ಲಿ ಸರಿಯಾಗಿ ನಮೂದಿಸಲಾಗುತ್ತಿರುವ ಬಗ್ಗೆ/ ವಾರ್ಷಿಕ ವೇತನ ಬಡ್ತಿಯು ಮಂಜೂರಾತಿ ಪ್ರಾಧಿಕಾರಸ್ಥರಿಂದ ಮಂಜೂರಾದ ನಂತರವೇ ನಮೂದಿಸುತ್ತಿರುವ ಬಗ್ಗೆ ವಿಭಾಗ/ ಕಾರ್ಯಾಗಾರಗಳಲ್ಲಿ ಪರಿಶೀಲಿಸುವ ನಿಟ್ಟಿನಲ್ಲಿ ವಿಭಾಗದ ಆಡಳಿತಾಧಿಕಾರಿ/ ಸಹಾಯಕ ಆಡಳಿತಾಧಿಕಾರಿಗಳು ಅವರ ವಿವೇಚನೆಗೆ ಒಳಪಟ್ಟಂತೆ ಒಬ್ಬ ಸಿಬ್ಬಂದಿ ಮೇಲ್ವಿಚಾರಕ ಹಾಗೂ ಕಿರಿಯ ಸಹಾಯಕರೊಂದಿಗೆ ತಂಡ ರಚಿಸಿಕೊಂಡು ವರದಿಯನ್ನು ಸಲ್ಲಿಸಲು ಆದೇಶ ಮಾಡಲಾಗಿದೆ.

ತಮ್ಮ ವಿಭಾಗ/ ಕಾರ್ಯಾಗಾರಗಳಿಗೆ ಪರಿಶೀಲನೆಗಾಗಿ ಹಾಜರಾದ ತಂಡಗಳು ವಿಭಾಗ/ ಕಾರ್ಯಾಗಾರಗಳ ಎಚ್.ಆರ್.ಎಂ.ಎಸ್‌ನಲ್ಲಿ ಹಾಗೂ ಸೇವಾ ಪುಸ್ತಕದಲ್ಲಿ ನಮೂದಿಸಲಾದ ಸಿಬ್ಬಂದಿಗಳ ಮೂಲವೇತನ/ ಬಿಡಿಎ ನಲ್ಲಿ ಯಾವುದೇ ವ್ಯತ್ಯಾಸವಾಗಿರುವ ಬಗ್ಗೆ ನಮೂದಿಸಿಲ್ಲ.

ಮುಂದಿನ ದಿನಗಳಲ್ಲಿ ಪ್ರತೀ ಮೂರು ತಿಂಗಳಿಗೊಮ್ಮೆ ವಿಭಾಗ/ ಕಾರ್ಯಾಗಾರಗಳ ಲೆಕ್ಕಪತ್ರ ಮತ್ತು ಆಡಳಿತ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ನೌಕರರುಗಳ ಸೇವಾ ಪುಸ್ತಕ ಮತ್ತು ಎಚ್.ಆ‌ರ್.ಎಂ.ಎಸ್‌ನಲ್ಲಿ ದಾಖಲಿಸಲಾದ ಮೂಲ ವೇತನ ಮತ್ತು ಇತರೆ ವೇತನಗಳ ಕುರಿತು ಪರಿಶೀಲಿಸಿ ಕ್ರಮಬದ್ಧಗೊಳಿಸಬೇಕು.

ವಿಭಾಗ/ ಕಾರ್ಯಾಗಾರಗಳಲ್ಲಿ ಅರ್ಹ ನೌಕರರಿಗೆ ವಾರ್ಷಿಕ ವೇತನ ಬಡ್ತಿಯನ್ನು ಮಂಜೂರು ಮಾಡಿದ ನಂತರ ಆಯಾ ತಿಂಗಳಲ್ಲಿಯೇ ವೇತನಕ್ಕೆ ಜಾರಿಗೊಳಿಸಿರುವುದನ್ನು ವಿಭಾಗ/ ಕಾರ್ಯಾಗಾರಗಳ ಲೆಕ್ಕಾಧಿಕಾರಿ ಖಚಿತಪಡಿಸಿಕೊಳ್ಳಬೇಕು ಹಾಗೂ ವಿಳಂಬ ಮಾಡುವ ಸಿಬ್ಬಂದಿಗಳ ವಿರುದ್ಧ ಸೂಕ್ತ ಶಿಸ್ತಿನ ಕ್ರಮಕೈಗೊಳ್ಳುವುದು. ಈ ಮೇಲಿನಂತೆ ಕ್ರಮ ಕೈಗೊಂಡು, ತೆಗೆದುಕೊಂಡ ಕ್ರಮದ ಬಗ್ಗೆ ಈ ಕಚೇರಿಗೆ ಅನುಸರಣಾ ವರದಿಯನ್ನು ಸಲ್ಲಿಸಬೇಕು ಎಂದು ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶದಲ್ಲಿ ತಿಳಿಸಿದ್ದಾರೆ.

Megha
the authorMegha

Leave a Reply

error: Content is protected !!
Latest news
KSRTC: ನಾಳೆ ನೌಕರರ ಕೂಟದ ಸರ್ವ ಸದಸ್ಯರ, ಪದಾಧಿಕಾರಿಗಳು, ನಿವೃತ್ತರ ಸಭೆ KSRTC: ನೌಕರರಿಗೆ ವೇತನ ಬಡ್ತಿ ನೀಡಿದ ಆಯಾ ತಿಂಗಳಲ್ಲಿಯೇ HRMSನಲ್ಲಿ ಜಾರಿ ಮಾಡಿ, ಇಲ್ಲದಿದ್ದರೆ ಕ್ರಮ- ಸಿಪಿಎಂ ಎಚ್ಚರ... ನಾಲ್ಕೂ ಸಾರಿಗೆ ನಿಗಮಗಳಿಗೆ "ಶಕ್ತಿ" ಮುಂಗಡವಾಗಿ 500 ಕೋಟಿ ರೂ. ಬಿಡುಗಡೆ ಮಾಡಿ ಸರ್ಕಾರ ಆದೇಶ ಸಾರಿಗೆ ನೌಕರರೇ.. ಎಚ್ಚರ! ಕೈಕಟ್ಟಿ ಕುಳಿತರೆ ಭವಿಷ್ಯ ಶೂನ್ಯ! ಗ್ಯಾಸ್ ಸಿಲಿಂಡ‌ರ್ ಡೆಲಿವರಿ ಬಾಯ್‌ಗೆ ಸಿಗುವ ಕಮಿಷನ್ ಎಷ್ಟು ಗೊತ್ತ? KSRTC: ಕರ್ತವ್ಯ ಮುಗಿಸಿ ಪ್ರಯಾಣಿಸುವ ಸಂಸ್ಥೆ ಸಿಬ್ಬಂದಿ ಕಡ್ಡಾಯವಾಗಿ ID Card ಪ್ರದರ್ಶಿಸಿ- ಇಂಥ ಚೋರರ ಪತ್ತೆಗೆ ಸಹಕ... ಗುಡ್‌ ನ್ಯೂಸ್‌: ಪೆಟ್ರೋಲ್ -ಡೀಸೆಲ್ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ ಕಡಿತ KSRTC: ಮೆಜೆಸ್ಟಿಕ್‌ನಿಂದ ಶಿವಮೊಗ್ಗಕ್ಕೆ ಹೊರಟಿದ್ದ ಬಸ್‌ ಭಸ್ಮ- ಅದೃಷ್ವಶಾತ್‌ ಕೂದಲೆಳೆ ಅಂತರದಲ್ಲೇ ಪ್ರಯಾಣಿಕರು ಪಾರ... ಬೆಳ್ಳಂಬೆಳಗ್ಗೆ ಬಸ್- ಟಿಪ್ಪರ್ ನಡುವೆ ಭೀಕರ ಅಪಾಘತ: 10ಮಂದಿ ಸಜೀವದಹನ, 18 ಜನರಿಗೆ ಗಂಭೀರಗಾಯ ಏ.6ರಂದು KSRTC ಎಂಡಿ ಜತೆ ಸಾರಿಗೆ ನೌಕರರ ಸಂಘಟನೆಗಳ ಸಭೆ- 2024 ರಿಂದ ವೇತನ ಹೆಚ್ಚಳ ಮಾಡದಿದ್ದರೆ ಹೋರಾಟ ಅನಿವಾರ್ಯ