NEWSನಮ್ಮಜಿಲ್ಲೆನಮ್ಮರಾಜ್ಯ

ನಾಳೆ ಇಪಿಎಸ್-95 ಪಿಂಚಣಿದಾರರ 99ನೇ ಮಾಸಿಕ ಸಭೆ: BMTC ‍& KSRTC ನಿವೃತ್ತ ನೌಕರರ ಸಂಫದ ಅಧ್ಯಕ್ಷ ನಂಜುಂಡೇಗೌಡ

ಲಾಲ್‌ ಬಾಗ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ ಇಪಿಎಸ್‌ ನಿವೃತ್ತರು.
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಲಾಲ್ ಬಾಗ್ ಆವರಣದಲ್ಲಿ ಏಪ್ರಿಲ್ 5ರ ಭಾನುವಾರದಂದು ಇಪಿಎಸ್-95, ಪಿಂಚಣಿದಾರರ 99ನೇ ಮಾಸಿಕ ಸಭೆ ಜರುಗಲಿದೆ ಎಂದು ಇಪಿಎಸ್-95, ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಂಜುಂಡೇಗೌಡ ತಿಳಿಸಿದ್ದಾರೆ.

ಬಹು ನಿರೀಕ್ಷಿತ ಪಾರ್ಲಿಮೆಂಟ್ ಬಜೆಟ್ ಅಧಿವೇಶನ ಇಪಿಎಸ್ ನಿವೃತ್ತರ ಪಾಲಿಗೆ ಮತ್ತೊಮ್ಮೆ ಕರಾಳ ಅಧಿವೇಶನವಾಗಿದೆ ಎಂದರೆ ತಪ್ಪಾಗಲಾರದು. ಸಾಗರ್ ಖಂಡ್ರೆ, ಸುಪ್ರಿಯ ಸೂಲೆ, ಅರವಿಂದ ಸಾವಂತ್ ಸಂಸದರು ಅಧಿವೇಶನದಲ್ಲಿ ಕೇಳಿದ ಪ್ರಶ್ನೆಗಳಿಗೆ ಸಚಿವರಾದ ಶೋಭಾ ಕರಂದ್ಲಾಜೆ ಹಾಗೂ ನಿರ್ಮಲಾ ಸೀತಾರಾಮನ್ ಅವರು ಆರಿಕೆ ಉತ್ತರ ನೀಡಿದ್ದು, ಎಲ್ಲ ಇಪಿಎಸ್ ನಿವೃತ್ತರಿಗೆ ಬೇಸರ ಮೂಡಿಸಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇನ್ನು ವಿತ್ತ ಸಚಿವರು ಇಪಿಎಸ್ ನಿವೃತ್ತರ ಕುರಿತು ನೀಡಿರುವ ಹೇಳಿಕೆ, ಧರ್ಮಸಂಕಟ, ಅಯ್ಯೋ ಪಾಪ ಎಂದು ಮೊಸಳೆ ಕಣ್ಣೀರು ಸುರಿಸುವ ಬದಲು, ಭಗತ್ ಸಿಂಗ್ ಕೋಶಿಯ ಕಮಿಟಿ ವರದಿ-2014, ( ರೂ 3,000 + ಭತ್ಯೆ) ಹಾಗೂ ಪ್ರತಿ 10 ವರ್ಷಗಳಿಗೊಮ್ಮೆ ಪಿಂಚಣಿ ಪರಿಸ್ಕಾರಣೆ ಮಾಡಿ, ಬೆಲೆ ಸೂಚ್ಯಂಕಕ್ಕೆ ಅನುಗುಣವಾಗಿ ಪಿಂಚಣಿ ನೀಡಬೇಕೆಂಬ ಕಾಯ್ದೆ ಇದ್ದರೂ ಸಹ 12 ವರ್ಷ ಕಳೆದಿದ್ದು, ಇವೆಲ್ಲವನ್ನು ಗಾಳಿಗೆ ತೂರಿ, ಅಧಿವೇಶನದಲ್ಲಿ ಸಚಿವೆಯವರು ನೀಡಿರುವ ಹೇಳಿಕೆ ಎಷ್ಟು ಸರಿ ಎಂದು ನಂಜುಂಡೇಗೌಡ ಪ್ರಶ್ನಿಸಿದ್ದಾರೆ.

ಕಳೆದ ಏಳೆಂಟು ವರ್ಷಗಳಿಂದ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘಟನೆಯು ನಡೆಸಿದ ಮಾಸಿಕ ಹಾಗೂ ಪ್ರತಿಭಟನಾ ಸಭೆಗಳು ಸಾವಿರಾರು ಇಪಿಎಸ್ ನಿವೃತ್ತರಲ್ಲಿ ಅರಿವು ಹಾಗೂ ಜಾಗೃತಿ ಮೂಡಿಸಿದ್ದು, ಈ ಹೋರಾಟದಲ್ಲಿ ಸದಸ್ಯರು ಹೊಂದಿರುವ ದೃಢ ನಿರ್ಧಾರ ಹಾಗೂ ನೀಡುತ್ತಿರುವ ಸಹಕಾರವೇ ಈ ಹೋರಾಟಕ್ಕೆ ಸ್ಪೂರ್ತಿ, ಪ್ರೆರಣೆಯಾಗಿದ ಎಂದರೆ ತಪ್ಪಾಗಲಾರದು. ಒಟ್ಟಾರೆ ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಹಾಗೂ ಇಪಿಎಫ್ಒ ಅಧಿಕಾರಿಗಳ ವಿರುದ್ಧದ ಉಗ್ರ ಹೋರಾಟಕ್ಕೆ ನಾವೆಲ್ಲರೂ ಸಿದ್ದರಾಗಬೇಕು!!!.

ಕಳೆದ ಮಾರ್ಚ್ 27ರಂದು ನಗರದ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಜರುಗಿದ ಇಪಿಎಸ್ ಪಿಂಚಣಿದಾರರ ಸಭೆಗೆ ನೂರಾರು ಪ್ರತಿಭಟನಾಕಾರರು ವಿವಿಧ ಭಾಗಗಳಿಂದ ಆಗಮಿಸಿದ್ದು, ಕಚೇರಿ ಆವರಣದಲ್ಲಿ ಪಥ ಸಂಚಲನ ಮಾಡುವ ಮೂಲಕ ಕೂಗಿದ ಧಿಕ್ಕಾರದ ಘೋಷಣೆ ಮಾಧ್ಯಮಗಳ ಮೂಲಕ ಕೇಂದ್ರ ಸರ್ಕಾರಕ್ಕೆ ತಲುಪಿದ್ದು, ಇದನ್ನು ಅರ್ಥ ಮಾಡಿಕೊಂಡು ಕೂಡಲೇ ನಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಅಗ್ರಹಿಸಿದ್ದಾರೆ.

82 ಲಕ್ಷ ಇಪಿಎಸ್ ನಿವೃತ್ತರ ಬದುಕು ಇಂದಿಗೂ ಅತಂತ್ರ ಸ್ಥಿತಿಯಲ್ಲಿದ್ದು, ಇದಕ್ಕೆ ಯಾರು ಕಾರಣ? ಎಂದು ಹೇಳಬೇಕಾಗಿಲ್ಲ, ಇಪಿಎಫ್ಒ ಅಧಿಕಾರಿಗಳ ಧೋರಣೆ, ಅಸಹಕಾರ, ಕೇಂದ್ರ ಸರ್ಕಾರದ ನಿರ್ಲಜ್ಜ ನಡೆ, ಇಪಿಎಸ್ ನಿವೃತ್ತರನ್ನು ಈ ಸ್ಥಿತಿಗೆ ತಂದು ನಿಲ್ಲಿಸಿದೆ. ಏನೇ ಆಗಲಿ ನಾವೆಲ್ಲರೂ ಒಂದೇ, ಒಗ್ಗಟ್ಟಾಗಿ ನಮ್ಮ ಗುರಿ ಮುಟ್ಟಲು ಪ್ರಯತ್ನಿಸೋಣ ಎಂದು ನಂಜುಂಡೇಗೌಡ ಕರೆ ನೀಡಿದ್ದಾರೆ.

ಇನ್ನು ಈ 99ನೇ ಮಾಸಿಕ ಸಭೆಗೆ ಸಂಘದ ಎಲ್ಲ ಪದಾಧಿಕಾರಿಗಳು, ಚಿಕ್ಕಬಳ್ಳಾಪುರ ಕೆಎಸ್‌ಆರ್‌ಟಿಸಿ ಕ್ಷೇಮಾಭಿವೃದ್ಧಿ ಟ್ರಸ್ಟಿನ ಪದಾಧಿಕಾರಿಗಳು, ಸದಸ್ಯರು,2020ರ ನಂತರ ಸಂಸ್ಥೆಯ ಸೇವೆಯಿಂದ ನಿವೃತ್ತರಾದ ನೌಕರರ ಬಾಕಿ ವೇತನ ಹಾಗೂ ಸಂಸ್ಥೆಯ ಸೇವೆಯಿಂದ ಇತ್ತೀಚಿಗೆ ನಿವೃತ್ತರಾದ ನೌಕರರಿಗೆ ಕೈಗಾರಿಕಾ ಒಪ್ಪಂದ 01/01/2024 ರ ಪ್ರಕಾರ ಫಿಕ್ಸ್ಯೇಷನ್ ಆಗಬೇಕಾಗಿದ್ದು, ನೌಕರರ ಈ ಎಲ್ಲ ಕುಂದು ಕೊರತೆಗಳ ಬಗ್ಗೆ ಚರ್ಚಿಸಲಾಗುವುದು.

ಹಲವಾರು ಕಾರ್ಮಿಕ ಮುಖಂಡರು ಹಾಗೂ ಇತರೆ ಕಾರ್ಖಾನೆ ಹಾಗೂ ಕಂಪನಿಗಳ ನಿವೃತ್ತರು, ಸಭೆಯಲ್ಲಿ ಭಾಗವಹಿಸಲಿದ್ದು, ಮುಖಂಡರು ಇತ್ತೀಚಿನ ಎಲ್ಲ ಬೆಳವಣಿಗೆಗಳು ಹಾಗೂ ನಮ್ಮ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಮಾತನಾಡಲಿದ್ದಾರೆ ಎಂದು ನಂಜುಂಡೇಗೌಡ ತಿಳಿಸಿದ್ದಾರೆ.

ಹೀಗಾಗಿ ಎಲ್ಲರೂ ವಿಶ್ವ ಪಾರಂಪರಿಕ ಲಾಲ್ ಬಾಗ್ ಹೂದೋಟದಲ್ಲಿ ವಾಯು ವಿಹಾರ ನಡೆಸಿ, ತಮ್ಮ ಹಳೆಯ ಸ್ನೇಹಿತರ ಭೇಟಿ, ವಿಚಾರ ವಿನಿಮಯ ಹಾಗೂ ಈ ಮೇಲ್ಕಂಡ ಎಲ್ಲ ಅಂಶಗಳ ಬಗ್ಗೆ ಚರ್ಚಿಸೋಣ. ಎಲ್ಲ ನಿವೃತ್ತ ನೌಕರರು ಏ.5ರ ಭಾನುವಾರ ಬೆಳಗ್ಗೆ 8ಗಂಟೆಗೆ ಹಾಜರಾಗಬೇಕೆಂದು ಕಾರ್ಯಕಾರಿ ಸಮಿತಿ ಪರವಾಗಿ ವಿನಂತಿಸಿಕೊಂಡಿದ್ದಾರೆ ನಂಜುಂಡೇಗೌಡ್ರು.

Megha
the authorMegha

Leave a Reply

error: Content is protected !!
Latest news
ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ ಪತ್ನಿ ನೋಡಲು ಬೈಕ್‌ನಲ್ಲಿ ಹೋಗುತ್ತಿದ್ದ ಪತಿ ಸರ್ಕಾರಿ ಬಸ್‌ಗೆ ಬಲಿ, ಪತ್ನಿಯ... ಸರಿಸಮಾನ ವೇತನ ಸೇರಿ ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಾಳಿದಿಂದ ಚಿತ್ರದುರ್ಗದಿಂದ ಪಾದಯಾತ್ರೆ: ಒಕ್ಕೂಟ KSRTC ಎಂಡಿ ಅಧ್ಯಕ್ಷತೇಲಿ ಸಾರಿಗೆ ನೌಕರರ ವೇತನ ಹೆಚ್ಚಳ ಸಂಬಂಧ ಇಂದು ಸಂಜೆ ಸಭೆ ಲಾಲ್‌ಬಾಗ್ ಆವರಣದಲ್ಲಿ ಯಶಸ್ವಿಯಾಗಿ ಜರುಗಿದ ಇಪಿಎಸ್ ಪಿಂಚಿಣಿದಾರರ 99ನೇ ಮಾಸಿಕ ಸಭೆ- ಕೇಂದ್ರದ ಬಗ್ಗೆ ಅಸಮಾಧಾನ ಆರ್‌.ಆರ್‌.ಇನ್‌ಫ್ರಾಸ್ಟ್ರಕ್ಚರ್‌ ಕಂಪನಿಯ ಮುಖ್ಯ ಕಾನೂನು ಸಲಹೆಗಾರ ವಕೀಲ H.B.ಶಿವರಾಜು ತಮಿಳುನಾಡಿಗೆ ವರ್ಗಾವಣೆ NWKRTC -ಖಾಸಗಿ ಬಸ್ ನಡುವೆ ಡಿಕ್ಕಿ: ಇಬ್ಬರು ಪ್ರಯಾಣಿಕರು ಮೃತ, 20 ಮಂದಿಗೆ ಗಾಯ KSRTC: ಪ್ರಣಾಳಿಕೆ ಭರವಸೆ ಈಡೇರಿಸದ ಸರ್ಕಾರದ ವಿರುದ್ಧ ಸಮರ ಸಾರಲು ಸಜ್ಜಾದ ಸಾರಿಗೆ ನೌಕರರಿಂದ ನಾಳೆ ಸುದ್ದಿಗೋಷ್ಠಿ KKRTC: ಏ.14ರಂದು ಡಾ.ಅಂಬೇಡ್ಕ‌ರ್‌ ಜಯಂತಿ-ತಲಾ 20 ಸಾವಿರ ರೂ. ಮಂಜೂರು 12ನೇ ತರಗತಿವರೆಗೆ ಗಂಡು ಮಕ್ಕಳಿಗೂ ಉಚಿತ ಸರ್ಕಾರಿ ಬಸ್‌ ಪ್ರಯಾಣಕ್ಕೆ ಶಿಫಾರಸು NWKRTC ಬಸ್‌ಗೆ ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ ಬೆಂಗಾವಲು ವಾಹ‌ನ ಡಿಕ್ಕಿ