NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮಾಡುತ್ತಿರುವ ಪಾದಯಾತ್ರೆಗೂ ಅಡ್ಡಿ ಮಾಡುತ್ತಿರುವ ಜಂಟಿ ಸಂಘಟನೆಯ ಕೆಲ ಅವಿವೇಕಿಗಳು..!

ವಿಜಯಪಥ ಸಮಗ್ರ ಸುದ್ದಿ

ತುಮಕೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಹಾಗೂ ಒಕ್ಕೂಟ ಹಮ್ಮಿಕೊಂಡಿರುವ ಪಾದಯಾತ್ರೆ 9ನೇ ದಿನ ಪೂರ್ಣಗೊಳಿಸಿ ಶುಕ್ರವಾರಕ್ಕೆ ಅಂದರೆ ಇಂದಿಗೆ 10ನೇ ದಿನಕ್ಕೆ ಕಾಲಿಟ್ಟಿದೆ.

ಗುರುವಾರ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ತಂಗಿದ್ದ ಪಾದಯಾತ್ರೆ ಇಂದು ಬೆಳಗ್ಗೆ ಮಠದಿಂದ ಪಾದಯಾತ್ರೆ ಮುಂದುವರಿದ್ದಿದ್ದು ಇಂದು ರಾತ್ರಿ ನೆಲಮಂಗಲ ತಲುಪಲಿದೆ.

ಹೌದು! ಇದೇ ಏ.8ರ ಬುಧವಾರ ಚಿತ್ರದುರ್ಗದ ಜಿಲ್ಲಾಧಿಕಾರಿಗಳ ಕಚೇರಿಯಿಂದ ಆರಂಭಗೊಂಡ ಸಾರಿಗೆ ನೌಕರರ ಪಾದಯಾತ್ರೆ ಇಂದು ಸುಮಾರು 135 ಕಿಮೀ ಸಾಗಿದ್ದು ಇನ್ನು ಸುಮಾರು 70 ಕಿಮೀ ಸಾಗಿದರೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನ ತಲುಪಲಿದೆ.

ಪಾದಯಾತ್ರೆ ಸಾಗಿದ ವಿವರ: ಏ.8ರ  ರಾತ್ರಿ ಬುರುಜನರೊಪ್ಪ ಗ್ರಾಮದ ಶ್ರೀ ರಕ್ಷಾ ಗಣಪತಿ ದೇವಸ್ಥಾನದಲ್ಲಿ ವಾಸ್ತವ್ಯ ಹೂಡಿತ್ತು. ಗುರುವಾರ ಏ.9ರಂದು ಬೆಳಗ್ಗೆ 6 ಗಂಟೆಗೆ ಎರಡನೇ ದಿನದ ಪಾದಯಾತ್ರೆ ದೇವಸ್ಥಾನದಿಂದ ಆರಂಭವಾಗಿ ಸುಮಾರು 30 ಕಿಮೀ ಕ್ರಮಿಸಿತ್ತು.

ಗುರುವಾರ ರಾತ್ರಿ ಹಿರಿಯೂರಿನಲ್ಲಿ ವಾಸ್ತವ್ಯ ಹೂಡಿದ್ದರು. ಶುಕ್ರವಾರ ಏ.10ರಂದು ಬೆಳಗ್ಗೆ ಹಿರಿಯೂರಿಂದ ಪಾದಯಾತ್ರೆ ಮುಂದುವರಿದು 18-20 ಕಿಮೀ ಕ್ರಮಿಸಿದ ಜೆ.ಜೆ. ಹಳ್ಳಿ ತಲುಪಿ ಅಂದು ರಾತ್ರಿ ಪಾದಯಾತ್ರೆ ತಂಡ ತಂಗಿತ್ತು. ಶನಿವಾರ ಏ.11ರಂದು ಬೆಳಗ್ಗೆ ಜೆಜೆ ಹಳ್ಳಿಯಿಂದ ಪಾದಯಾತ್ರೆ ಮುಂದುವರಿದು ತುಮಕೂರು ಜಿಲ್ಲೆಯ ಶಿರಾ ತಲುಪಲಿತ್ತು.

ಶಿರಾದಲ್ಲಿ ರಾತ್ರಿ ತಂಗಲಿದ್ದು ಭಾನುವಾರ ಏ.12ರಂದು ಬೆಳಗ್ಗೆ 5ನೇ ದಿನದ ಪಾದಯಾತ್ರೆ ಶಿರಾದಿಂದ ಮುಂದುವರಿದಿತ್ತು. ಶಿರಾ ತಾಲೂಕಿನ ಕಳ್ಳಂಬೆಳ್ಳದಿಂದ 6ನೇ ದಿನದ ಪಾದಯಾತ್ರೆ ಮುಂದುವರಿ ಸೀಬಿ ತಲುಪಿತ್ತು.   ಸೋಮವಾರಕ್ಕೆ 6ನೇ ದಿನ ಯಶಸ್ವಿಯಾಗಿ ಪೂರ್ಣಗೊಳಿಸಿದ್ದು ಮತ್ತೆ ಏ.14ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಜಯಂತಿ ನಿಮಿತ್ತ ಪಾದಯಾತ್ರೆಗೆ ವಿರಮಿಸಿತು.

ಇನ್ನು ಏ.15ರಿಂದ ಇದೇ ಸೀಬಿಯಿಂದ ಪಾದಯಾತ್ರೆ ಮುಂದುವರಿತ್ತು. ಬಳಿಕ ಏ.16ರಂದು ತುಮಕೂರು ತಲುಪಿ ಸಿದ್ಧಗಂಗಾ ಮಠದಲ್ಲಿ ತಂಗಿತ್ತು. 10ನೇ ದಿನವಾದ ಇಂದು ಪಾದಯಾತ್ರೆಯಲ್ಲಿ ವಿವಿಧೆಡೆಯಿಂದ ಹಲವಾರು ನೌಕರರು ಭಾಗಿಯಾಗಿದ್ದು ಪಾದಯಾತ್ರೆ ಮಠದಿಂದ ಮುಂದುವರಿದಿದೆ.

ಏ.8ರಂದು ಚಿತ್ರದುರ್ಗದಿಂದ ಬೆಂಗಳೂರಿನವರೆಗೆ ಪಾದಯಾತ್ರೆಗೆ ಚಾಲನೆ ನೀಡಲಾಗಿದ್ದು,  ಅಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾಯಿಸಿದ ನೌಕರರು ಮತ್ತು ಅವರ ಕುಟುಂಬ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಕೆಲಹೊತ್ತು ಪ್ರತಿಭಟನೆ ನಡೆಸಿದರು. ಬಳಿಕ ಬೆಂಗಳೂರಿನತ್ತ ಪಾದಯಾತ್ರೆ ಆರಂಭಿಸಿದ್ದರು.

ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ನೀಡಬೇಕು ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಜಟಾಪಟಿ ಗೋಜು ಗೊಂದಲಗಳಿಗೆ ಮುಕ್ತಿಯಾಡಬೇಕು. ಅಲ್ಲದೆ ಕಾಂಗ್ರೆಸ್‌ ಪಕ್ಷ ವಿಧಾನಸಭೆ ಚುನಾವಣಾ ಪೂರ್ವದಲ್ಲಿ ಸಾರಿಗೆ ನೌಕರರಿಗೆ ಕೊಟ್ಟಿರುವ ಪ್ರಣಾಳಿಕೆ ಭರವಸೆಯನ್ನು ಈಡೇರಿಸಬೇಕು ಹಾಗೂ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಕೊಡಲೇ ಬೇಕು ಜತೆಗೆ ಸಂಘಟನೆಗಳ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿ ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.

ಜಂಟಿಯ ಕೆಲ ಅವಿವೇಕಿಗಳಿಂದ ಅಡ್ಡಿ: ಇನ್ನು ನೌಕರರ ಈ ಎಲ್ಲ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರ ಕೂಟ ಮತ್ತು ಒಕ್ಕೂಟ ಮಾಡುತ್ತಿರುವ ಈ ಪಾದಯಾತ್ರೆಗೆ ಜಂಟಿ ಸಂಘಟನೆಗಳ ಕೆಲ ಅವಿವೇಕಿಗಳು ಡಿಪೋ ವ್ಯವಸ್ತಾಪಕರು ಸೇರಿದಂತೆ ಕೆಲ ಅಧಿಕಾರಿಗಳಿಗೆ ಫೋನ್‌ ಕರೆ ಮಾಡಿ ಸಂಸ್ಥೆ ಏನು ಕಡಿಮೆ ಮಾಡಿದೆ ಅಂತ ಪಾದಯಾತ್ರೆ ಮಾಡುತ್ತಿದ್ದಾರೆ. ಈ ಪಾದಯಾತ್ರೆಯಲ್ಲಿ ಭಾಗಿಯಾಗಿರುವ ನಿಮ್ಮ ಘಟಕದ ನೌಕರರ ವಿರುದ್ಧ ಏನು ಕ್ರಮ ತೆಗೆದುಕೊಳ್ಳುತ್ತಿದ್ದೀರಿ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುತ್ತಿರುವುದಲ್ಲದೆ ಈ ಪಾದಯಾತ್ರೆಯನ್ನು ಹೇಗಾದರೂ ಮಾಡಿ ತಡೆಯಬೇಕು ಎಂಬ ನೀಚ ಕೃತ್ಯಕ್ಕೆ ಕೈಹಾಕಿದ್ದಾರೆ.

ಜಂಟಿ ಸಂಘಟನೆಯಲ್ಲಿರುವ ಇಂಥ ಅವಿವೇಕಿಗಳಿಂದ ನೌಕರರಿಗೆ ಸರ್ಕಾರದಿಂದ ನ್ಯಾಯಯುತವಾಗಿ ಸಿಗಬೇಕಿರುವ ಸೌಲಭ್ಯಗಳು ಕೈ ತಪ್ಪಿಹೋಗುತ್ತಿವೆ. ಆದರೆ, ನೌಕರರ ಮುಂದೆ ಮಾತ್ರ ನಾವು ನಿಮ್ಮಪರ ಇದ್ದೇವೆ ಎಂದು ಹೇಳಿ ದಾರಿತಪ್ಪಿಸುವ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದಾರೆ. ಇಂಥ ನೀಚರಿಗೆ ನೌಕರರೇ ಬುದ್ಧಿ ಕಲಿಸಬೇಕು. ಇಲ್ಲದಿದ್ದರೆ ಸರ್ಕಾರ ಕೊಟ್ಟರೂ ಇಂಥ ಅವಿವೇಕಿಗಳು ಕೊಡಬೇಡಿ ಎಂದು ಹೇಳಿ ಸರ್ಕಾರ, ಸಾರಿಗೆ ಸಚಿವರು ಹಾಗೂ ಅಧಿಕಾರಿಗಳ ದಾರಿಯನ್ನೇ ತಪ್ಪಿಸಿ ನೌಕರಿಗೆ ಸಿಗಬೇಕಿರುವುದನ್ನು ಮೊಟಕುಗೊಳಿಸುತ್ತಾರೆ.

ಸಾರಿಗೆ ನೌಕರರು ಎಚ್ಚೆತ್ತುಕೊಳ್ಳಬೇಕಿದೆ. ನೀವು ನಿಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಡ್ಯೂಟಿಗೆ ಗೈರಾಗದೆ ರಜೆ ದಿನಗಳಲ್ಲಿ ಭಾಗವಹಿಸುವುದರಿಂದ ನಿಮ್ಮ ವಿರುದ್ಧ ಯಾವುದೇ ರೀತಿಯ ಕಾನೂನು ಕ್ರಮ ತೆಗೆದುಕೊಳ್ಳಲು ಬರುವುದಿಲ್ಲ. ಈ ಬಗ್ಗೆ ಅರಿತು ರಜೆ ದಿನಗಳಲ್ಲಿ ಎಲ್ಲ ನೌಕರರು ಭಾಗವಹಿಸಿ ನಿಮ್ಮ ಬೇಡಿಕೆಗಳ ಈಡೇರಿಸಿಕೊಳ್ಳುವುದಕ್ಕೆ ಭಯವಪಡದೆ ಮುಂದಾಗಿ.

Megha
the authorMegha

Leave a Reply

error: Content is protected !!
Latest news
ಸರ್ಕಾರಿ ನೌಕರ ಪರೋಕ್ಷವಾಗಿ ಬೇರೊಬ್ಬರ ಮೂಲಕ ಲಂಚ ಪಡೆದರೂ ಆತ ತಪ್ಪಿತಸ್ಥನೆ: ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ಇಂದಿನಿಂದ ಜಾರಿ: ಕರೆಂಟ್‌ ಬಿಲ್‌ಕೊಟ್ಟ ದಿನದಿಂದ ರಜೆ ಹೊರತುಪಡಿಸಿ ಕನಿಷ್ಠ 15 ದಿನಗಳ ಪಾವತಿ ಅವಧಿ ಕಡ್ಡಾಯ ಸರ್ಕಾರಿ ಸಾರಿಗೆ ಚಾಲನಾ, ತಾಂತ್ರಿಕಾ ಸಿಬ್ಬಂದಿ ಕಾರ್ಮಿಕರಲ್ಲ: “ಸಂಸ್ಥೆ ನಿಯಮಗಳ ಮೂಲಕ ಯಾರು ನೇಮಕವಾಗಿದ್ದಾರೋ ಅವರೇ ಅ... ನಾಲ್ಕೂ ರಸ್ತೆ ಸಾರಿಗೆ ಸಂಸ್ಥೆ ಎಂಡಿಗಳಿಗೆ ಪತ್ರ ಬರೆದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನಾಳೆ ವೇತನ ಹೆಚ್ಚಳದ 11 ತಿಂಗಳ ಹಿಂಬಾಕಿಯ ವ್ಯತ್ಯಾಸ ತಿಳಿಯಲು ಸಾರಿಗೆ ನೌಕರರಿಂದ NWKRTC ಎಂಡಿ ಭೇಟಿ GBA East ತ್ಯಾಜ್ಯ ವಿಲೇವಾರಿ ಅಕ್ರಮ: 6 ವಾಹನಗಳ ವಶ- FIR ದಾಖಲು NWKRTC: ಧಾರವಾಡ ಗ್ರಾ.ವಿಭಾಗದ ನಿವೃತ್ತ ಅಧಿಕಾರಿಗಳಿಗೆ ಹೃದಯಸ್ಪರ್ಷಿ ಬೀಳ್ಕೊಡುಗೆ KSRTC: ಮೂರು ದಶಕಗಳ ಸುದೀರ್ಘ ಸೇವೆ ಬಳಿಕ ಸಂಸ್ಥೆಯ ಬಸ್‌ ಚಾಲಕ ನಿವೃತ್ತಿ-  ಮರೆಯಲಾಗದ ಸಂದರ್ಭ ಸೆರೆ! ಇಂಧನ, ಗ್ಯಾಸ್ ಬೆಲೆಯೇರಿಕೆ, ವಿದ್ಯುತ್ ಖಾಸಗೀಕರಣ ವಿರೋಧಿಸಿ ರಾರೈಸಂ ಪ್ರತಿಭಟನೆ -ಸರ್ಕಾರಗಳ ವಿರುದ್ಧ ಘೋಷಣೆ KKRTC: ಬಸ್ ನಿಲ್ದಾಣದಲ್ಲಿ ಮಹಿಳೆ ಜತೆ ಅನುಚಿತ ವರ್ತನೆ-ಕಿಡಿಗೇಡಿಗೆ ಚಪ್ಪಲಿ ಏಟು