NEWSನಮ್ಮಜಿಲ್ಲೆನಮ್ಮರಾಜ್ಯ

ಸಾವಿರಾರು ಜನರನ್ನು ಅವರ ಗಮ್ಯಸ್ಥಾನಕ್ಕೆ ತಲುಪಿಸಲು ಆರೋಗ್ಯ ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುತ್ತಿರುವ ಸಾರಿಗೆ ನೌಕರರು..!!

ವಿಜಯಪಥ ಸಮಗ್ರ ಸುದ್ದಿ
  • ಮಧ್ಯಾಹ್ನದ ಬಿಸಿಲಿನ ಮಧ್ಯೆ ನಿಂತಿರುವ ಚಾಲಕರ ಕಣ್ಣುಗಳಲ್ಲಿ ದಣಿವು ಮಾತ್ರವಲ್ಲ, ಮೌನದ ಕಿರುಚಾಟವೂ ಕೇಳಿಸುತ್ತದೆ

ಬೀದರ್‌: ಕಲ್ಯಾಣ ಕರ್ನಾಟಕ ಭಾಗದಲ್ಲಿ ತೀವ್ರ ಬೇಸಿಗೆಯ ಹಿನ್ನೆಲೆಯಲ್ಲಿ ಚಾಲಕರ ಮತ್ತು ನಿರ್ವಾಹಕರ ಆರೋಗ್ಯ ರಕ್ಷಣೆಗಾಗಿ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ಮಜ್ದೂರ್ ಸಂಘ, ಬೀದರ್‌ ಜಿಲ್ಲಾ ಘಟಕ ಒತ್ತಾಯಿಸಿದೆ.

ಸಂಘವು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿರ್ದೇಶಕರಿಗೆ ಹಾಗೂ ರಾಜ್ಯಪಾಲರು, ಮುಖ್ಯಮಂತ್ರಿಗಳು, ಸಾರಿಗೆ ಸಚಿವರು, ಕಾರ್ಮಿಕ ಸಚಿವರು, ಆರೋಗ್ಯ ಸಚಿವರಿಗೆ ಜಿಲ್ಲಾಧಿಕಾರಿಗಳ ಮೂಲಕ ಇತ್ತೀಚೆಗೆ ಅಧಿಕೃತವಾಗಿ ಮನವಿ ಪತ್ರ ಸಲ್ಲಿಸಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಗಣಪತಿ ಸಕ್ರಪ್ಪನೂರ್ ತಿಳಿಸಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗವು ಪ್ರಸ್ತುತ ಅತೀ ತೀವ್ರ ಬೇಸಿಗೆ ತಾಪಮಾನವನ್ನು ಅನುಭವಿಸುತ್ತಿದ್ದು, ದಿನನಿತ್ಯ 40 ಮೇಲ್ಪಟ್ಟ ಉಷ್ಣಾಂಶ ದಾಖಾಲಾಗುತ್ತಿದೆ ಮತ್ತು ನಮ್ಮ ಬಸ್ ಚಾಲಕರ ಕ್ಯಾಬಿನ್ ಒಳಗಿನ ಉಷ್ಣಾಂಶವು 100 ಮಟ್ಟದ ತಾಪಾಮಾನವಾಗಿದ್ದು ಈ ಪರಿಸ್ಥಿಯಲ್ಲಿ ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ಸಾರಿಗೆ ಸಂಸ್ಥೆಯ ಚಾಲಕರು ಮತ್ತು ನಿರ್ವಾಹಕರು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಇದೇ ವೇಳೆ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿಗಳಿಂದ ಸರ್ಕಾರಿ ನೌಕರರ ಹಿತದೃಷ್ಟಿಯಿಂದ ಕೆಲಸದ ಸಮಯ ಬದಲಾವಣೆ ಕುರಿತು ಆದೇಶ ಹೊರಡಿಸಿರುವುದನ್ನು ಭಾರತಿಯ ಮಜ್ದೂಜ್ಯೂರ್ ಸಂಘವು ಸ್ವಾಗತಿಸುತ್ತದೆ.

ಮುಂಜಾನೆಯಿಂದ ರಾತ್ರಿ ತನಕ ಸೇವೆ ಸಲ್ಲಿಸುತ್ತಿರುವ ನಮ್ಮ ಸಾರಿಗೆ ಸಂಸ್ಥೆಯ ಸಿಂಬ್ಬಂದಿಗಳು, ಚಾಲಕರು ಮತ್ತು ನಿರ್ವಾಹಕರ ಆರೋಗ್ಯ ರಕ್ಷಣೆ ಅತ್ಯಂತ ಅಗತ್ಯವಾಗಿದೆ, ಈ ಹಿನ್ನೆಲೆಯಲ್ಲಿ ತುರ್ತು ಸೇವೆಯಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ವಿಶೇಷ ಆರೋಗ್ಯ ವ್ಯವಸ್ಥೆ ಕಲ್ಪಸುವುದು ಅವಶ್ಯಕವಾಗಿದೆ.

ಇದಲ್ಲದೆ, ಈಗಾಗಲೇ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತಿರುವ ಸಿಬ್ಬಂದಿಗಳ ಸ್ಥಿತಿ ಗಂಭೀರವಾಗಿದ್ದು ಸಕ್ಕರೆ ಕಾಯಿಲೆ, ರಕ್ತದ ಒತ್ತಡ, ಹೃದಯ ರೋಗಗಳು, ಅಸ್ತಮಾ ಹಾಗೂ ನರ ಸಂಬಂಧಿತ ಹಾಗೂ ಚರ್ಮ ರೋಗಗಳು ಸೇರಿ ಹತ್ತು ಹಲವು ಕಾಯಿಲೆಗಳು ಕಾಡುತ್ತಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ತುರ್ತು ಸೇವೆ ಸಲ್ಲಿಸುವ ಸಿಬ್ಬಂದಿಗಳಿಗೆ ಲಭ್ಯವಿರುವ ಆರೋಗ್ಯ ಹಾಗೂ ಸುರಕ್ಷತಾ ಸೌಲಭ್ಯಗಳನ್ನು ಸಮಪರ್ಕವಾಗಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ.

ತುರ್ತುಕ್ರಮಕ್ಕೆ ವಿನಂತಿ: ತುರ್ತು ಸೇವೆಯಲ್ಲಿ ಇರುವ ಚಾಲಕರು ಮತ್ತು ನಿವಾಹಕರಿಗೆ ನಿಯಮಿತ ಆರೋಗ್ಯ ತಪಾಸಣೆ ಮತ್ತು ವೈದ್ಯಕೀಯ ನೆರವು ಒದಗಿಸಬೇಕು. ಬಿಸಿಲಿನ ತೀವ್ರತೆಯನ್ನು ಪರಿಗಣಿಸಿ ಕೆಲಸದ ಸಮಯದಲ್ಲಿ ಬದಲಾವಣೆ ಅಥವಾ ಸುತ್ತುವಳಿಗಳು ಕಡಿತ ಜಾರಿಗೆ ತರಬೇಕು.

ಅನಾರೋಗ್ಯ ಸಮಸ್ಯೆ ಹೊದಿರುವ ಸಿಬ್ಬಂದಿಗಳಿಗೆ ತಣ್ಣೀರಿನ ವ್ಯವಸ್ಥೆ ಗ್ಲೋಕೋಸ ಹಾಗೂ ವಿಶ್ರಾಂತಿ ಸೌಲಭ್ಯಗಳನ್ನು ಕಡ್ಡಾಯಗೊಳಿಸಬೇಕು, ಬಸ್ ಒಳಗೆ ತಾಪಮಾನ ನಿಯಂತ್ರಣ ಜಾರಿಗೆ ತರಬೇಕು ತುರ್ತು ಸೇವೆ ಸಿಬ್ಬಂದಿಗಳಿಗೆ ಸರ್ಕಾರದಿಂದ ಲಭ್ಯವಿರುವ ಆರೋಗ್ಯ ವಿಮೆ ವೈದ್ಯಕೀಯ ವೆಚ್ಚ ಪರಿಹಾರ ಹಾಗೂ ಅಗತ್ಯವಿದ್ದಲ್ಲಿ ವಿಶೇಷ ಭತ್ಯೆ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು.

ಇತಂಹ ಸಂದರ್ಭಗಳಲ್ಲಿ ಸಿಬ್ಬಂದಿಗಳಿಗೆ ಸುರಕ್ಷತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲು ಕ್ರಮ ಕೈಗೊಳ್ಳಬೇಕು. ಸಾರ್ವಜನಿಕ ಸೇವೆಯ ಗುಣಮಟ್ಟವನ್ನು ಉಳಿಸಿಕೊಳ್ಳಲು ಸಿಬ್ಬಂದಿಗಳ ಆರೋಗ್ಯವೇ ಮುಖ್ಯ ಆಧಾರವಾಗಿದೆ, ತುರ್ತುಸೇವೆ ಸಲ್ಲಿಸುವ ಸಿಬ್ಬಂದಿಗಳ ಆರೋಗ್ಯವೆ ಸಾರ್ವಜನಿಕ ಸೇವೆ ಆಗಿದ್ದು ಅವರ
ರಕ್ಷಣೆ ಸರ್ಕಾರದ ಪ್ರಾಥಮಿಕ ಜವಾಬ್ದಾರಿಯಾಗಿದೆ. ಅಲ್ಲದೆ ಚಾಲಕರ ಮತ್ತು ನಿರ್ವಾಹಕರ ಆರೋಗ್ಯ ಸಮಸ್ಯೆಯಾದರೆ ಅದಕ್ಕೆ ನೆರವಾಗಿ ಮೇಲಧಿಕಾರಿಗಳು ಹೋಣೆಯಾಗುತ್ತಾರೆ.

ಆದ್ದರಿಂದ ಈ ವಿಷಯವನ್ನು ತುರ್ತುಗಿ ಪರಿಗಣಿಸಿ ಮಾನವೀಯ ದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ವಿನಂತಿಸುತ್ತೇವೆ. ಈ ವಿಷಯವನ್ನು ಗಂಭಿರವಾಗಿ ಪರಿಗಿಣಿಸಿ, ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಮಾನವ ಹಕ್ಕು ಆಯೋಗದ ಗಮನಕ್ಕೆ ವಿಷಯವನ್ನು ತರುವುದರ ಜತೆಗೆ ಕಾನೂನು ಹೋರಾಟ ಕೈಗೊಳ್ಳಲಾಗುವುದು ತಾವು ಇದಕ್ಕೆ ಅವಕಾಶ ಮಾಡಿಕೊಡಬಾರದೆಂದು ಮನವಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಂಘದ ಪ್ರಧಾನ ಕಾರ್ಯದರ್ಶಿ ಗಣಪತಿ ಸಕ್ರಪ್ಪನೂರ್ ಹಾಗೂ ಮುಖಂಡರಾದ ಧನಶೆಟ್ಟಿ ಮನ್ನಾಳೆ, ಸಾಗರ್ ರಕ್ಷೆ, ಉಮಾಕಂತ್ ರೊಟ್ಟಿ ಮತ್ತು ಹಲವಾರು ಸಾರಿಗೆ ನೌಕರರು ಸಲ್ಲಿಸಿದ್ದಾರೆ.

ಪ್ರತಿ ದಿನವೂ ಸಾವಿರಾರು ಜನರ ಗಮ್ಯಸ್ಥಾನಕ್ಕೆ ತಲುಪಿಸುವ ನೌಕರರು: ಬಿಸಿಲು ಕೇವಲ ಒಂದು ಋತು ಅಲ್ಲ, ಇದು ಈಗ ಶ್ರಮಜೀವಿಗಳ ಸಹನೆಯ ಪರೀಕ್ಷೆಯಾಗಿದೆ. ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಉರಿಯುವ ನೆಲದಲ್ಲಿ, ಸೂರ್ಯನ ಕಿಡಿಕಾರುವ ಕಿರಣಗಳು ಮಾನವನ ದೇಹವನ್ನಷ್ಟೇ ಅಲ್ಲ, ಅವನ ಮನಸ್ಸನ್ನೂ ದಹಿಸುತ್ತಿವೆ.

ಈ ಕಠಿಣ ಸಮಯದಲ್ಲಿ, ಪ್ರತಿ ದಿನವೂ ಸಾವಿರಾರು ಜನರನ್ನು ತಮ್ಮ ಗಮ್ಯಸ್ಥಾನಕ್ಕೆ ತಲುಪಿಸುವ ಸಾರಿಗೆ ನೌಕರರು ಇಂದು ತಮ್ಮದೇ ಆರೋಗ್ಯವನ್ನು ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಬೀದರ ಹೊಸ ಬಸ್ ನಿಲ್ದಾಣದಲ್ಲಿ, ಮಧ್ಯಾಹ್ನದ ಬಿಸಿಲಿನ ಮಧ್ಯೆ ನಿಂತಿರುವ ಚಾಲಕರ ಕಣ್ಣುಗಳಲ್ಲಿ ದಣಿವು ಮಾತ್ರವಲ್ಲ, ಒಂದು ಮೌನದ ಕಿರುಚಾಟವೂ ಕೇಳಿಸುತ್ತಿದೆ.

ನಿರ್ವಾಹಕರ ಕೈಯಲ್ಲಿ ಟಿಕೆಟ್ ಇದೆ, ಆದರೆ ಹೃದಯದಲ್ಲಿ ಅಸಹಾಯಕತೆಯ ಭಾರ ಇದೆ. ನೀರಿಲ್ಲದ ಗಂಟಲುಗಳು, ನೆರಳಿಲ್ಲದ ವಿಶ್ರಾಂತಿ, ಶೀತಲತೆಯಿಲ್ಲದ ಪರಿಸ್ಥಿತಿ. ಇವೆಲ್ಲವೂ ಸೇರಿ, ಈ ಶ್ರಮಜೀವಿಗಳ ಜೀವನವನ್ನು ಒಂದು ನಿರಂತರ ಹೋರಾಟವಾಗಿಸಿದೆ.

ತಮ್ಮ ಬೆವರಿನ ಹನಿ ಮೂಲಕ ಈ ಸತ್ಯವನ್ನು ಲೋಕಕ್ಕೆ ತೋರಿಸುತ್ತಿರುವವರು ಸಾರಿಗೆ ನೌಕರರು. ಇದು ಕೇವಲ ಮನವಿ ಅಲ್ಲ ಇದು ಬದುಕಿಗಾಗಿ ಬರೆದ ಒಂದು ವಿನಂತಿ. ಈ ಬಗ್ಗೆ ಸರ್ಕಾರ ಹಾಗೂ ಸಾರಿಗೆ ಆಡಳಿತ ಮಂಡಳಿ ಕಣ್ತೆರೆದು ನೋಡಬೇಕಿರುವ ಸಮಯವಿದು. ಡ್ಯೂಟಿ ಮೇಲೆ ಬಳಲುತ್ತಿರುವ ನೌಕರರಿಗೆ ಹೆಗಲಾಗಿ ನಿಂತು ಅವರಿಗೆ ಬೇಕಿರುವುದನ್ನು ಕೊಡುವಂಥ ಕ್ರಮಕ್ಕೆ ಮುಂದಾಗಿದೆ ಪ್ಲೀಸ್‌ ಎಂದು ಭಾರತೀಯ ಮಜ್ದೂರ್ ಸಂಘ, ಬೀದರ್‌ ಜಿಲ್ಲಾ ಘಟಕ ಮನವಿ ಮಾಡಿದೆ.

Deva
the authorDeva

Leave a Reply

error: Content is protected !!
Latest news
KSRTC: ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮಾಡುತ್ತಿರುವ ಪಾದಯಾತ್ರೆಗೂ ಅಡ್ಡಿ ಮಾಡುತ್ತಿರುವ ಜಂಟಿ ಸಂಘಟನೆ... ಸಾವಿರಾರು ಜನರನ್ನು ಅವರ ಗಮ್ಯಸ್ಥಾನಕ್ಕೆ ತಲುಪಿಸಲು ಆರೋಗ್ಯ ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುತ್ತಿರುವ ಸಾರಿಗೆ ನೌಕರರು... ಸಾರಿಗೆ ನೌಕರರೇ.. ಎಚ್ಚರ! ಕೈಕಟ್ಟಿ ಕುಳಿತರೆ ನಿಮ್ಮ ನಿಮ್ಮ ಕುಟುಂಬದ ಭವಿಷ್ಯ ಶೂನ್ಯ! ನಾಳೆ ಸಕ್ಕರೆ ನಾಡು ಮಂಡ್ಯಕ್ಕೆ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ: ಸ್ವಾಗತಕ್ಕೆ ಸಜ್ಜಾದ ಶ್ರೀಮಠ 6ನೇ ದಿನ ಪೂರ್ಣಗೊಂಡ ಸಾರಿಗೆ ನೌಕರರ ಪಾದಯಾತ್ರೆ: ಏ.15ರಂದು ಸೀಬಿಯಿಂದ ಮುಂದುವರಿಕೆ ಕಬ್ಬಿನ ಹಣ ಪಾವತಿಗಾಗಿ ಡಿಸಿ ಕಚೇರಿ ಮುಂದೆ ಏ.21ರಿಂದ ನಿರಂತರ ಪ್ರತಿಭಟನಾ ಧರಣಿ: ಕುರುಬೂರ್ ಶಾಂತಕುಮಾರ್ ಚುನಾವಣೆವೇಳೆ ಕೊಟ್ಟ ಭರವಸೆ ಈಡೇರಿಸಿದ್ದೇವೆ: ಶಾಸಕ ಶ್ರೀನಿವಾಸ್ ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹ- ನಾಲ್ಕನೇ ದಿನಕ್ಕೆ ಕಾಲಿಟ್ಟ ಪಾದಯಾತ್ರೆ: ಇಂದು ಶಿರಾದಲ್ಲಿ ವಾಸ್ತವ್ಯ ಸಾರಿಗೆ ನೌಕರರ ಒಕ್ಕೂಟದ ಪಾದಯಾತ್ರೆಗೆ ಸಂಪೂರ್ಣ ಬೆಂಬಲ: ಮಹಾಮಂಡಳದ ಅಧ್ಯಕ್ಷ ಆರ್‌.ಪಿ.ಕೊಪರ್ಡೆ ನಡದು ಹೋಗುತ್ತಿರುವ ನಮ್ಮ ನೌಕರರಿಗೆ ಕೃತಜ್ಞತೆ ಸಲ್ಲಿಸಿ: ಸಾರಿಗೆ ನೌಕರ ಮನವಿ