NEWSನಮ್ಮರಾಜ್ಯಲೇಖನಗಳು

ಸಾರಿಗೆ ನೌಕರರೇ.. ಎಚ್ಚರ! ಕೈಕಟ್ಟಿ ಕುಳಿತರೆ ನಿಮ್ಮ ನಿಮ್ಮ ಕುಟುಂಬದ ಭವಿಷ್ಯ ಶೂನ್ಯ!

ವಿಜಯಪಥ ಸಮಗ್ರ ಸುದ್ದಿ

ಬೀದಿಯಲ್ಲಿ ನಿಂತು ನಮ್ಮೆಲ್ಲರ ಹಕ್ಕಿಗಾಗಿ, ಸಾರಿಗೆ ಸಂಸ್ಥೆಯ ಉಳಿವಿಗಾಗಿ ಒಬ್ಬ ನಾಯಕನ ಜತೆ ಒಂದಷ್ಟು ಸಮೂಹ ಶಾಂತಿಯುತವಾಗಿ ಸುಮಾರು 230 ಕಿಲೋ ಮೀಟರ್‌ ನಡೆದು ಸಾಗುತ್ತಿರುವ ಈ ಹೊತ್ತಿನಲ್ಲಿ, ಅದೂ ಕೂಡ ಹಗಲು-ರಾತ್ರಿ ಎನ್ನದೆ ಸಂಕೋಲೆಗಳನ್ನು ಕಡಿದು ಹಾಕಲು ಹೋರಾಡುತ್ತಿರುವಾಗ… ಬದಿಯಲ್ಲಿ ನಿಂತು ತಮಾಷೆ ನೋಡುತ್ತಾ, ಕರ್ತವ್ಯದ ನೆಪದಲ್ಲಿ ಪಲಾಯನ ಮಾಡುತ್ತಿರುವ ನೀವು ನಿಜಕ್ಕೂ ಬದುಕಿದ್ದೀರಾ?

ಅನ್ಯಾಯದ ವಿರುದ್ಧ ಹೋರಾಡುವ ಸಹೋದ್ಯೋಗಿಯ ಜತೆ ನಿಲ್ಲದ ನೀವು, ಕೇವಲ ಸಮವಸ್ತ್ರ ಧರಿಸಿದ ‘ಜೀವಂತ ಶವಗಳು’. ಕೆಲವೇ ಕೆಲವು ವೀರ ನೌಕರರು ವ್ಯವಸ್ಥೆಯ ಅನ್ಯಾಯದ ವಿರುದ್ಧ ಎದೆಯೊಡ್ಡಿ ನಿಂತಾಗ, ಅವರಿಗೆ ಹೆಗಲು ಕೊಡಬೇಕಾದ ಸಾವಿರಾರು ನೌಕರರು ಬೆನ್ನು ತೋರಿಸಿ ಓಡುತ್ತಿರುವುದು ಈ ಕಾಲದ ದೊಡ್ಡ ದುರಂತ.

ನೆನಪಿಡಿ-​”ಹೋರಾಟಗಾರ ಸೋತರೆ ಕೇವಲ ಒಬ್ಬ ವ್ಯಕ್ತಿ ಸೋಲಲ್ಲ, ಇಡೀ ಸಾರಿಗೆ ನೌಕರರ ಸಂಕುಲದ ಭವಿಷ್ಯವೇ ಸಮಾಧಿಯಾಗುತ್ತದೆ.” ಹೋರಾಟಗಾರರು ಬೀದಿಗೆ ಇಳಿದಿರುವುದು ಅವರ ವೈಯಕ್ತಿಕ ಲಾಭಕ್ಕಲ್ಲ, ನಿಮ್ಮ ಮನೆಯ ಮಕ್ಕಳ ಜ್ಞಾನದ, ತುತ್ತಿನ ಚೀಲ ತುಂಬಿಸುವುದಕ್ಕಾಗಿ ಮತ್ತು ನಿಮ್ಮ ನಿವೃತ್ತ ಜೀವನದ ಭದ್ರತೆಗಾಗಿ.

ನಾವು ಸಂಸ್ಥೆಯ ಸರ್ವಾಧಿಕಾರಿಗಳು ಎಂಬಂತೆ ಕೆಲ ಅಧಿಕಾರಿಗಳು ನಮಗೂ ವೇತನ ತಾರತಮ್ಯವಿರುವುದನ್ನು ಹೋಗಲಾಡಿಸಿ ಶಾಶ್ವತ ಪರಿಹಾರಕ್ಕಾಗಿ, ಅದನ್ನು ಸರಿಪಡಿಸುವುದಕ್ಕೆ ನಾವು ಮುಂದಾಗಬೇಕು ಎಂಬ ಅರಿವಿಲ್ಲದೆ ಅಜ್ಞಾನಿಗಳಂತೆ ತೋರಿಸುವ ದಬ್ಬಾಳಿಕೆ ಮತ್ತು ಅಹಂಕಾರದ ಮುಂದೆ ತಲೆಬಾಗಿ ನಡೆಯುವುದು ಬದುಕಲ್ಲ, ಅದು ಬಣ್ಣ ಹಚ್ಚಿದ ಗುಲಾಮಗಿರಿ.

ಇಂದು ಒಬ್ಬ ಹೋರಾಟಗಾರನನ್ನು ಏಕಾಂಗಿಯನ್ನಾಗಿ ಮಾಡಿದರೆ, ನಾಳೆ ನಿಮ್ಮ ಮೇಲೆ ಅನ್ಯಾಯದ ತೂಗುಗತ್ತಿ ಬಂದಾಗ ನಿಮಗಾಗಿ ಧ್ವನಿ ಎತ್ತಲು ಯಾರೂ ಇರುವುದಿಲ್ಲ. ಈ ಬಗ್ಗೆ ಈಗಾಗಲೇ ನಿಮಗೆ ಅದು ಅರ್ಥವಾಗಿದೆ. ಆದರೂ ಕಳೆದ ಏ.8ರಿಂದ ಪಾದಯಾತ್ರೆ ಮಾಡುತ್ತಿರುವ ಒಕ್ಕೂಟಕ್ಕೆ ಬೆಂಬಲ ನೀಡಲು ಈಗಲು ಮೀನಮೇಷ ಎಣಿಸುತ್ತ ಕುಳಿತಿರುವುದರ ಲಾಭ ಯಾರಿಗಾಗುತ್ತದೆ.

ಇದರಿಂದ ನಾವು ಲಾಭ ಪಡೆಯುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು ಹಾಗಾಗಿ ಈಗಲೂ ಕಾಲ ಮಿಂಚಿಲ್ಲ ಈ ಶಾಂತಿಯುತ ಪಾದಯಾತ್ರೆಗೆ ಬೆನ್ನೆಲುಬಾಗಿ ಅವರ ಹೆಜ್ಜೆಗೆ ನಿಮ್ಮ ಹೆಜ್ಜೆಯನ್ನು ಸೇರಿಸಿ ಒಂದಾಗಿ ಹೆಜ್ಜೆಹಾಕಿ ಸರ್ಕಾರದ ಮುಂದೆ ನಿಮ್ಮ ಶಾಶ್ವತ ಪರಿಹಾರದ ಬೇಡಿಕೆ ಈಡೇರಿಸಿಕೊಳ್ಳಿ.

ಈಗಲೂ ನಾವು ಕೈಕಟ್ಟಿ ಕುಳಿತರೆ ನಮ್ಮ ಭವಿಷ್ಯವನ್ನು ನಾವೇ ಹಾಳುಮಾಡಿಕೊಂಡಂತೆ. ಇದಕ್ಕೆ ಅವಕಾಶ ಮಾಡಿಕೊಡಬೇಡಿ …ಹೀಗಾಗಿ ಎಚ್ಚೆತ್ತುಕೊಳ್ಳಿ!

ಸಾರಿಗೆ ಸಹೋದ್ಯೋಗಿಗಳೇ… ಎದ್ದೇಳಿ!:
​ಕೈಕಟ್ಟಿ ನಿಂತು ನೋಡುವ ‘ಹೇಡಿ’ಗಳಾಗಬೇಡಿ. ಅಧಿಕಾರದ ಮದವೇರಿದ ವ್ಯವಸ್ಥೆಗೆ ನಿಮ್ಮ ಸಂಘಟಿತ ಶಕ್ತಿಯ ದರ್ಶನ ತೋರಿಸಿ. ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ನಿಮ್ಮ ಸಹೋದರನಿಗೆ ಸಾವಿರ ಕೈಗಳ ಬಲ ತುಂಬಿ. ಪಲಾಯನ ಮಾಡುವುದು ಹೇಡಿಗಳ ಲಕ್ಷಣ, ಎದುರಿಸಿ ನಿಲ್ಲುವುದು ಸ್ವಾಭಿಮಾನಿ ನೌಕರನ ಲಕ್ಷಣ!

​ಹೋರಾಟಕ್ಕೆ ಸಾಥ್ ನೀಡದ ನೌಕರನನ್ನು ಇತಿಹಾಸ ಎಂದಿಗೂ ಕ್ಷಮಿಸುವುದಿಲ್ಲ.​ಎದ್ದೇಳಿ! ಗುಡುಗಿ! ಒಂದಾಗಿ! ನಮ್ಮ ಹಕ್ಕು – ನಮ್ಮ ಹೋರಾಟ! ಹೀಗೆ ಈ ಪಾದಯಾತ್ರೆಯಲ್ಲಿ ಸಾರಿಗೆ ನೌಕರರು ತಮಗಾಗುತ್ತಿರುವ ವೇತನ ತಾರತಮ್ಯದ ವಿರುದ್ಧ ಮೌನದಲ್ಲೇ ಸರ್ಕಾರಕ್ಕೆ ಬಿಸಿ ಮುಟ್ಟಿಸಿ ಅದಕ್ಕಾಗಿ ಒಗ್ಗಟ್ಟು ಪ್ರದರ್ಶಿಸಿ ಈಗ ಈ ಒಗ್ಗಟ್ಟಿನ ಅಗತ್ಯತೆ ತುಂಬಾ ಇದೆ. ಇದಕ್ಕೆ ಎಲ್ಲರೂ ತಿಂತಿಸಿ ನಿರ್ಧಾರ ತೆಗೆದುಕೊಳ್ಳಿ, ಇದು ಅತೀ ಜರೂರಾಗಿ ಆಗಬೇಕಿದೆ.

Megha
the authorMegha

Leave a Reply

error: Content is protected !!
Latest news
ಇಂದು ರಾತ್ರಿ 8.30ರಿಂದ 9.30ರವರೆಗೆ KSRTC ಎಂಡಿ ಅಕ್ರಮ್‌ ಪಾಷರ ಭೇಟಿ ಮಾಡಿ ಗೌಪ್ಯ ಸಭೆ ನಡೆಸಿದ ಜಂಟಿ ಮುಖಂಡರು! ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟಿದ್ದ ಮುಷ್ಕರದಿಂದ ಹಿಂದೆ ಸರಿದ KSRTC ಪ.ಜಾ.-ಪ.ಪಂ ನೌಕರರ ಸಂಘ ಗುಡುಗು ಸಿಡಿಲಿನ ಆರ್ಭಟ: ಮನೆ ಮುಂದೆ ನಿಂತಿದ್ದ ಶಿಕ್ಷಕ ಹೃದಯಾಘಾತಕ್ಕೆ ಬಲಿ ಕೇರಳದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ವಿ.ಡಿ.ಸತೀಶನ್ ಇಂದು ಕೇರಳದ ನೂತನ ಸಿಎಂಆಗಿ ವಿ.ಡಿ. ಸತೀಶನ್‌ ಪ್ರಮಾಣ ವಚನ ಸ್ವೀಕಾರ KSRTC ಜಂಟಿ ಸಮಿತಿ ಒಳೊಪ್ಪಂದ ಬಯಲು; 2.5 ಕೋಟಿ ರೂ.ಗೆ ಸೇಲಾದರ ನೀಚರು, ನೌಕರರ ದಾರಿತಪ್ಪಿಸುತ್ತಿರುವುದರ ಹಿಂದಿನ ಮರ್ಮ... ವಿಜಯಪಥ ವರದಿ ಪರಿಣಾಮ: ಎಚ್ಚೆತ್ತ BMTC ಅಧಿಕಾರಿಗಳು- ಆದೇಶದ ದಿನಾಂಕಕ್ಕಿಂತ ಮೂರು ದಿನ ಮುಂಚಿತವಾಗಿಯೇ ನೌಕರರಿಗೆ 11 ತ... ಸಾರಿಗೆ ನೌಕರರಿಗೆ ಸೆಡ್ಡು ಹೊಡೆಯಲು ಸರ್ಕಾರ ತಂತ್ರ: ಬಸ್ ಸಂಚಾರ ನಿಲ್ಲಿಸಿ ಮುಷ್ಕರಕ್ಕೆ ಮುಂದಾಗಿರುವ ನೌಕರರಿಗೆ ಶಾಕ್ ... KSRTC: ಸರ್ಕಾರದ ಸಾಧನ ಸಮಾವೇಶದಲ್ಲಿ ಕಪ್ಪು ಬಾವುಟ, ಕಪ್ಪು ಪಟ್ಟಿ ಧರಿಸಿ ಸಾರಿಗೆ ನೌಕರರ ಪ್ರತಿಭಟನೆ !? BMTC ನೌಕರರಿಗೆ ಮೇ 19ರಂದು 11 ತಿಂಗಳ ಹಿಂಬಾಕಿ ಪಾವತಿಗೆ ಕ್ರಮ- ಎಂಡಿ ಆದೇಶಕ್ಕೂ ಕಿಮ್ಮತ್ತಿಲ್ಲದರ ಪರಿಣಾಮ ಈ ವಿಳಂಬ!