NEWSನಮ್ಮರಾಜ್ಯಸಂಸ್ಕೃತಿ

ಹುಚ್ಚಮ್ಮ ದೇವಿಯ 650 ಕುರಿಗಳ ಮೆರವಣಿಗೆ, 12 ಟನ್ ಮಟನ್ ಸಾರು: ಇತಿಹಾಸ ನಿರ್ಮಿಸಿದ ಲಕ್ಷಕ್ಕೂ ಹೆಚ್ಚು ಭಕ್ತರಿಗೆ ಅನ್ನಸಂತರ್ಪಣೆ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಜಿಲ್ಲೆಯ ಬಿ.ಸಿ.ಹಳ್ಳಿಯಲ್ಲಿ ಹುಚ್ಚಮ್ಮ ದೇವಿ ಜಾತ್ರೆಯಲ್ಲಿ 500 ಕುರಿಗಳ ಹರಕೆ, 60 ಲಕ್ಷ ರೂ. ಮೌಲ್ಯದ ಕುರಿಗಳ ಮೆರವಣಿಗೆ, 12 ಟನ್ ಮಟನ್ ಸಾಂಬಾರ್, 1 ಲಕ್ಷಕ್ಕೂ ಹೆಚ್ಚು ಭಕ್ತರಿಗೆ ಅನ್ನಸಂತರ್ಪಣೆ.

ಮೈಸೂರು ಜಿಲ್ಲೆಯ ಬನ್ನೂರು ಹೋಬಳಿಯ ಬಿ.ಸಿ.ಹಳ್ಳಿಯಲ್ಲಿ ನಡೆದ ಗ್ರಾಮ ದೇವತೆ ಹುಚ್ಚಮ್ಮ ದೇವಿಯ ದೊಡ್ಡ ಹಬ್ಬ ಈಗ ಇಡೀ ಜಿಲ್ಲೆಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ. ಯಾಕೆಂದರೆ ಇಲ್ಲಿ ನಡೆದ ಸಂಭ್ರಮ ಸಾಮಾನ್ಯದ್ದಲ್ಲ. ಈ ಬಾರಿ ಹಬ್ಬದ ವಿಶೇಷತೆಯೆಂದರೆ ಭಕ್ತರು ದೇವಿಗೆ ಸಲ್ಲಿಸಿದ ಹರಕೆ. ಬರೋಬ್ಬರಿ 650 ಕುರಿಗಳನ್ನು ಭಕ್ತರು ಸ್ವಯಂಪ್ರೇರಿತವಾಗಿ ದೇವಿಗೆ ಸಮರ್ಪಿಸಿದ್ದಾರೆ. ಅಲ್ಲದೇ ಒಟ್ಟಿಗೆ 650 ಕುರಿಗಳನ್ನು ಮೆರವಣಿಗೆ ಮಾಡಿದ್ದಾರೆ.

60 ಲಕ್ಷ ರೂ. ಮೌಲ್ಯದ ಕುರಿಗಳು: ಇಂದಿನ ಮಾರುಕಟ್ಟೆ ದರದಂತೆ ಒಂದು ಕುರಿಯ ಬೆಲೆ ರೂಪಾಯಿ 12,000 ಎಂದು ಲೆಕ್ಕ ಹಾಕಿದರೂ, ಒಟ್ಟು 60 ಲಕ್ಷ ಮೌಲ್ಯದ ಕುರಿಗಳನ್ನು ಮೆರವಣಿಗೆ ಮಾಡಿ ಪೂಜೆ ಸಲ್ಲಿಸಲಾಗಿದೆ. ಗ್ರಾಮದ ಬೀದಿ ಬೀದಿಗಳಲ್ಲಿ ಕುರಿಗಳ ಸದ್ದು ಮತ್ತು ಭಕ್ತರ ಜಯಘೋಷ ಮುಗಿಲು ಮುಟ್ಟುವಂತಿತ್ತು.

12 ಟನ್ ಮಟನ್ ಸಾಂಬಾರ್: ಬರೀ ಪೂಜೆ ಮಾತ್ರವಲ್ಲ, ಇಲ್ಲಿ ನಡೆದ ಅನ್ನಸಂತರ್ಪಣೆ ನೋಡಿ ಜನ ದಂಗಾಗಿದ್ದಾರೆ. ಜಾತ್ರೆಗೆ ಬಂದ ಸಾವಿರಾರು ಭಕ್ತರಿಗಾಗಿ ಸುಮಾರು 12 ಟನ್ ಮಟನ್ ಸಾಂಬಾರ್ ಮತ್ತು ಬಿಸಿ ಬಿಸಿ ರಾಗಿ ಮುದ್ದೆಯನ್ನು ಸಿದ್ಧಪಡಿಸಲಾಗಿತ್ತು. ಗ್ರಾಮದ ಪುರುಷರು ಮತ್ತು ಮಹಿಳೆಯರು ಒಗ್ಗಟ್ಟಾಗಿ ನಿಂತು ಅಡುಗೆ ತಯಾರಿಸಿದ್ದು ಈ ಹಬ್ಬದ ಒಗ್ಗಟ್ಟಿನ ಸಂಕೇತವಾಗಿತ್ತು. 100,000ಕ್ಕೂ ಹೆಚ್ಚು ಜನರು ಈ ದೇವಿಯ ಪ್ರಸಾದ ಸವಿದು ಪುನೀತರಾದರು.

ಸಂಪ್ರದಾಯ ಮತ್ತು ಸಂಸ್ಕೃತಿಯ ಸಂಗಮ: ಬೆಳಗ್ಗೆ 70ಕ್ಕೂ ಹೆಚ್ಚು ಮಡಿಕೆಗಳಲ್ಲಿ ತಂದ ಪವಿತ್ರ ಗಂಗೆಯ ಪೂಜೆಯಿಂದ ಆರಂಭವಾದ ಸಂಭ್ರಮ, ಸಾಯಂಕಾಲ ದೇವಿಯ ಭವ್ಯ ಮೆರವಣಿಗೆಯವರೆಗೂ ಅದ್ಧೂರಿಯಾಗಿ ಸಾಗಿತು. ಡೊಳ್ಳು ಕುಣಿತ, ನಾದಸ್ವರದ ನಾದಕ್ಕೆ ಗ್ರಾಮಸ್ಥರು ಹೆಜ್ಜೆ ಹಾಕಿದರು.

ಗ್ರಾಮೀಣ ಭಾಗದ ಹಬ್ಬಗಳು ಅಂದ್ರೆ ಬರೀ ಆಚರಣೆಯಲ್ಲ, ಅದು ಜನರ ಒಗ್ಗಟ್ಟು ಮತ್ತು ನಂಬಿಕೆಯ ಸಂಕೇತ ಎಂಬುದಕ್ಕೆ ಬಿ.ಸಿ.ಹಳ್ಳಿಯ ಈ ಹುಚ್ಚಮ್ಮ ದೇವಿಯ ಹಬ್ಬವೇ ಸಾಕ್ಷಿ. ಈ ಅದ್ದೂರಿ ಜಾತ್ರೆಯ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.

ಅಲ್ಲದೆ, ಬಿ.ಸಿ.ಹಳ್ಳಿ ಗ್ರಾಮದ ಸುತ್ತಮುತ್ತಲ ಹತ್ತಾರು ಗ್ರಾಮಗಳ ಗ್ರಾಮಸ್ಥರು ಹಾಗೂ ಬೆಂಗಳೂರು, ಮೈಸೂರು ಭಾಗದ ಹಲವಾರು ಭಕ್ತರು ಆಗಮಿಸಿ ಅನ್ನ ಪ್ರಸಾದ ಸ್ವೀಕರಿಸಿದರು. ಕಿಕ್ಕಿರಿದು ತುಂಬಿದ್ದ ಭಕ್ತ ಸಮೂಹಕ್ಕೆ ಪ್ರಸಾದ ಸೇವೆ ನೀಡುವುದು ಸ್ವಲ್ಪಮಟ್ಟಿಗೆ ಬಳಡಿಸುವವರಿಗೆ ತ್ರಾಸವೂ ಆಯಿತು. ಆದರೂ ಯಾವುದೇ ಕೊರತೆ ಇಲ್ಲದೆ ಎಲ್ಲ ಭಕ್ತರಿಗೂ ಪ್ರಸಾದ ಸಿಕ್ಕಿತು.

Deva
the authorDeva

Leave a Reply

error: Content is protected !!
Latest news
ಸರ್ಕಾರಿ ನೌಕರ ಪರೋಕ್ಷವಾಗಿ ಬೇರೊಬ್ಬರ ಮೂಲಕ ಲಂಚ ಪಡೆದರೂ ಆತ ತಪ್ಪಿತಸ್ಥನೆ: ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ಇಂದಿನಿಂದ ಜಾರಿ: ಕರೆಂಟ್‌ ಬಿಲ್‌ಕೊಟ್ಟ ದಿನದಿಂದ ರಜೆ ಹೊರತುಪಡಿಸಿ ಕನಿಷ್ಠ 15 ದಿನಗಳ ಪಾವತಿ ಅವಧಿ ಕಡ್ಡಾಯ ಸರ್ಕಾರಿ ಸಾರಿಗೆ ಚಾಲನಾ, ತಾಂತ್ರಿಕಾ ಸಿಬ್ಬಂದಿ ಕಾರ್ಮಿಕರಲ್ಲ: “ಸಂಸ್ಥೆ ನಿಯಮಗಳ ಮೂಲಕ ಯಾರು ನೇಮಕವಾಗಿದ್ದಾರೋ ಅವರೇ ಅ... ನಾಲ್ಕೂ ರಸ್ತೆ ಸಾರಿಗೆ ಸಂಸ್ಥೆ ಎಂಡಿಗಳಿಗೆ ಪತ್ರ ಬರೆದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನಾಳೆ ವೇತನ ಹೆಚ್ಚಳದ 11 ತಿಂಗಳ ಹಿಂಬಾಕಿಯ ವ್ಯತ್ಯಾಸ ತಿಳಿಯಲು ಸಾರಿಗೆ ನೌಕರರಿಂದ NWKRTC ಎಂಡಿ ಭೇಟಿ GBA East ತ್ಯಾಜ್ಯ ವಿಲೇವಾರಿ ಅಕ್ರಮ: 6 ವಾಹನಗಳ ವಶ- FIR ದಾಖಲು NWKRTC: ಧಾರವಾಡ ಗ್ರಾ.ವಿಭಾಗದ ನಿವೃತ್ತ ಅಧಿಕಾರಿಗಳಿಗೆ ಹೃದಯಸ್ಪರ್ಷಿ ಬೀಳ್ಕೊಡುಗೆ KSRTC: ಮೂರು ದಶಕಗಳ ಸುದೀರ್ಘ ಸೇವೆ ಬಳಿಕ ಸಂಸ್ಥೆಯ ಬಸ್‌ ಚಾಲಕ ನಿವೃತ್ತಿ-  ಮರೆಯಲಾಗದ ಸಂದರ್ಭ ಸೆರೆ! ಇಂಧನ, ಗ್ಯಾಸ್ ಬೆಲೆಯೇರಿಕೆ, ವಿದ್ಯುತ್ ಖಾಸಗೀಕರಣ ವಿರೋಧಿಸಿ ರಾರೈಸಂ ಪ್ರತಿಭಟನೆ -ಸರ್ಕಾರಗಳ ವಿರುದ್ಧ ಘೋಷಣೆ KKRTC: ಬಸ್ ನಿಲ್ದಾಣದಲ್ಲಿ ಮಹಿಳೆ ಜತೆ ಅನುಚಿತ ವರ್ತನೆ-ಕಿಡಿಗೇಡಿಗೆ ಚಪ್ಪಲಿ ಏಟು