NEWSನಮ್ಮಜಿಲ್ಲೆಶಿಕ್ಷಣ

ಎಸ್ಸೆಸ್ಸೆಲ್ಸಿ ಪರೀಕ್ಷೆ-01 ಫಲಿತಾಂಶ – ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ 11ನೇ ಸ್ಥಾನ

ವಿಜಯಪಥ ಸಮಗ್ರ ಸುದ್ದಿ
  • ಶೇಕಡ 95.62 ರಷ್ಟು ಫಲಿತಾಂಶ

ಬೆಂಗಳೂರು: 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ-1 ರ ಫಲಿತಾಂಶ ಪ್ರಕಟಗೊಂಡಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಶೇ. 95.62% ರಷ್ಟು ಫಲಿತಾಂಶ ಪಡೆಯುವ ಮೂಲಕ ರಾಜ್ಯದಲ್ಲಿ ಹನ್ನೊಂದನೇ ಸ್ಥಾನ ಪಡೆದುಕೊಂಡಿದೆ.

ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಜಿಲ್ಲೆಯ ಒಟ್ಟು 278 ಪ್ರೌಢಶಾಲೆಗಳಲ್ಲಿನ ಒಟ್ಟು 13,083 ವಿದ್ಯಾರ್ಥಿಗಳ ಹಾಜರಾಗಿದ್ದು, 12,510 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇಕಡ 95.62 ರಷ್ಟು ಫಲಿತಾಂಶ ಪಡೆದಿದ್ದಾರೆ.

ಒಟ್ಟು 6639 ಬಾಲಕರು ಹಾಜರಾಗಿದ್ದು 6247 ಬಾಲಕರು ತೇರ್ಗಡೆಯಾಗುವ ಮೂಲಕ ಶೇ. 94.10 ರಷ್ಟು ಫಲಿತಾಂಶ ಪಡೆದಿದ್ದಾರೆ. 6444 ಬಾಲಕಿಯರು ಪರೀಕ್ಷೆಗೆ ಹಾಜರಾಗಿದ್ದು, 6263 ಬಾಲಕಿಯರು ತೇರ್ಗಡೆ ಹೊಂದುವ ಮೂಲಕ ಶೇ 97.19 ರಷ್ಟು ಫಲಿತಾಂಶ ದೊರಕಿದೆ.

ನಗರ ಪ್ರದೇಶದ 4775 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 4496 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ. 94.16 ರಷ್ಟು ಫಲಿತಾಂಶ ದೊರೆತಿದೆ.

ಗ್ರಾಮೀಣ ಪ್ರದೇಶದ 8308 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 8014 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ 96.46 ರಷ್ಟು ಫಲಿತಾಂಶ ಸಿಕ್ಕಿದೆ.

ತಾಲೂಕು ವಾರು ಫಲಿತಾಂಶ
ದೇವನಹಳ್ಳಿ
* ಹಾಜರಾದವರು-3091
ಉತ್ತೀರ್ಣರಾದವರು-2956
ಶೇಕಡ: 95.63%

ದೊಡ್ಡಬಳ್ಳಾಪುರ
* ಹಾಜರಾದವರು-3553
ಉತ್ತೀರ್ಣರಾದವರು-3416
ಶೇಕಡ: 96.14%

ಹೊಸಕೋಟೆ
* ಹಾಜರಾದವರು-3578
ಉತ್ತೀರ್ಣರಾದವರು-3479
ಶೇಕಡ: 97.23%

ನೆಲಮಂಗಲ
* ಹಾಜರಾದವರು-2861
ಉತ್ತೀರ್ಣರಾದವರು-2659
ಶೇಕಡ:92.94%

ಶಾಲಾವಾರು ಫಲಿತಾಂಶ
* ಸರ್ಕಾರಿ ಶಾಲೆ-94.35%
* ಅನುದಾನಿತ-90.14%
* ಅನುದಾನ ರಹಿತ-98.27%

625 ಕ್ಕೆ 622 ಅಂಕ ಪಡೆದ ಜಿಲ್ಲೆಯ ಮೂವರು ಟಾಪರ್‌ಗಳು
1. ಹೇಮ ಜಿ. ಎಚ್, ಡಾ. ಬಿ.ಆರ್ ಅಂಬೇಡ್ಕರ್ ಹೆಣ್ಣು ಮಕ್ಕಳ ವಸತಿ ಶಾಲೆ. ಮಧುರೆ ದೊಡ್ಡಬಳ್ಳಾಪುರ.
2. ವಿಷ್ಣು ರೆಡ್ಡಿ. ಪಿ, ನ್ಯೂ ಹಾರಿಜನ್ ಶಾಲೆ, ಹೊಸಕೋಟೆ ತಾಲೂಕು.
3. ಸಹನಾ.ಎ, ಲಿಟ್ಲ್ ಮಾಸ್ಟರ್ ಆಂಗ್ಲ ಶಾಲೆ, ಕಂಟನಕುಂಟೆ, ದೊಡ್ಡಬಳ್ಳಾಪುರ ತಾ;ಲೂಕು.

Megha
the authorMegha

Leave a Reply

error: Content is protected !!
Latest news
ನಮ್ಮ ಮೆಟ್ರೋದಲ್ಲಿ ಸಾರ್ವಜನಿಕರೊಂದಿಗೆ ಪ್ರಯಾಣಿಸುವ ಅವಕಾಶ ಸಿಕ್ಕಿತು: ಸಿಎಂ ಡಿಕೆಶಿ ನೂತನ ಸಿಎಂ ಡಿಕೆಶಿಗೆ ಶುಭಾಶಯ ಕೋರಿದ ಮಲೇಷಿಯಾ ಪ್ರಧಾನಿ ಅನ್ವರ್‌ ಇಬ್ರಾಹಿಂ KKRTC: ನೌಕರರ ಮೇ ತಿಂಗಳ ವೇತನ ನಾಳೆ ಆಗುತ್ತದೆ, ಗೊಂದಲ ಬೇಡ: ಸಿಎಒ ಸ್ಪಷ್ಟನೆ KSRTC: ಮೂರು ವರ್ಷಕ್ಕೂ ಹೆಚ್ಚುಕಾಲ ಒಂದೇ ಕಡೆ ಬೇರುಬಿಟ್ಟಿರುವ ನೌಕರರ ವರ್ಗಾವಣೆಗೆ ಆದೇಶ ಬೆಳ್ಳಂಬೆಳಗ್ಗೆ ಗ್ರಾಹಕರಿಗೆ ಶಾಕ್‌ ಕೊಟ್ಟ ಕೇಂದ್ರ ಸರ್ಕಾರ: ಗೃಹಬಳಕೆ ಗ್ಯಾಸ್‌ ಸಿಂಡರ್‌ಗೆ 29 ರೂ. ಏರಿಕೆ, ಇಂದಿನಿಂದ... ರಾಮಲಿಂಗಾರೆಡ್ಡಿ: ರಾಜೀನಾಮೆ ವಾಪಸ್‌ -ಡಿಕೆಶಿ ಸರ್ಕಾರದಲ್ಲಿದ್ದ ಭಿನ್ನಮತ ಶಮನ ಸರ್ಕಾರದ ಮಹತ್ವಾಕಾಂಕ್ಷಿ ಭೂ ಗ್ಯಾರಂಟಿ ಯೋಜನೆಯ "ನನ್ನ ಇ-ಖಾತಾ ನನ್ನ ಹಕ್ಕು" ಅಭಿಯಾನಕ್ಕೆ ಉತ್ತಮ ಸ್ಪಂದನೆ ಪಾರ್ಕ್‌ಗಳ ನಡಿಗೆದಾರರ ಸ್ನೇಹಿಯನ್ನಾಗಿ ರೂಪಿಸಿ: ನೂತನ ಆಯುಕ್ತ ಜಗದೀಶ್ ಕರೆ 100 ವರ್ಷವಾದರೂ ಸಾಧನೆಗಳ ಮೂಲಕ ಅರಸು ಜೀವಂತ: ಸಿಎಂ ಡಿ.ಕೆ.ಶಿವಕುಮಾರ್‌ ಪರಿಸರ ಸಂರಕ್ಷಣೆ ನಮ್ಮ ಜೀವನದ ಅವಿಭಾಜ್ಯ ಅಂಗ: ನೈರ್ಮಲ್ಯ ಇಲಾಖೆ ಆಯುಕ್ತೆ ಫೌಜಿಯಾ