NEWSನಮ್ಮರಾಜ್ಯ

ಪ್ರಯಾಣಿಕರ ಅನುಕೂಲಕ್ಕಾಗಿ ನೂತನ ಸೌಲಭ್ಯ ಜಾರಿಗೆ ಮುಂದಾದ ಸಾರಿಗೆ ಇಲಾಖೆ

ಒಂದೇ ಸ್ಮಾರ್ಟ್ ಕಾರ್ಡ್ ರೀ-ಚಾರ್ಜ್ ಮಾಡಿಕೊಂಡರೆ ಸಾಕು, ಮೆಟ್ರೋ ಮತ್ತು ಬಿಎಂಟಿಸಿ ಬಸ್‌ಗಳಲ್ಲಿ ಸ್ವೈಪ್ ಮಾಡಿ ಪ್ರಯಾಣಿಸಬಹುದು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ನಗರ ಸಾರಿಗೆ ವ್ಯವಸ್ಥೆ ಜನರ ಜೀವನಾಡಿಯಾಗಿದೆ. ತಮ್ಮ ತಮ್ಮ ಕೆಲಸಕ್ಕೆ ತೆರಳಲು ನಿತ್ಯ ಲಕ್ಷಾಂತರ ಪ್ರಯಾಣಿಕರು ಮೆಟ್ರೋ ಹಾಗೂ ಬಿಎಂಟಿಸಿ ಬಸ್​​ಗಳ ಮೂಲಕ ಪ್ರಯಾಣ ಮಾಡುತ್ತಾರೆ.

ಸಾರಿಗೆ ವ್ಯವಸ್ಥೆ ಒಂದು ದಿನ ಬಂದ್ ಆದರೂ ಸಾಮಾನ್ಯ ಜನರಿಗೆ ಕಷ್ಟ ಕಷ್ಟವೇ ಆಗುತ್ತೆ. ಇನ್ನೂ ನಮ್ಮ ಮೆಟ್ರೋ ಬಂದ ಬಳಿಕ ಮೆಟ್ರೋ ಹಾಗೂ ಬಿಎಂಟಿಸಿ ಎರಡನ್ನೂ ಬಳಸುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ನೂತನ ಸೌಲಭ್ಯ ಜಾರಿಗೆ ತರಲು ಸಾರಿಗೆ ಇಲಾಖೆ ಮುಂದಾಗಿದೆ.

ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಶೀಘ್ರದಲ್ಲೇ ಮಹತ್ವದ ಬದಲಾವಣೆ ತರಲು ಇಲಾಖೆ ಮುಂದಾಗಿದೆ. ನಗರದಲ್ಲಿ ನಿತ್ಯ ಜನರು ಮೆಟ್ರೋಗಳ ಸಂಪರ್ಕ ಇರುವ ಕಡೆಗೆ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡಿ ಬಳಿಕ ಬಿಎಂಟಿಸಿ ಬಸ್​​ ಮೂಲಕ ತಾವು ತಲುಪಬೇಕಿದ್ದ ಸ್ಥಳಕ್ಕೆ ಹೋಗ್ತಾರೆ. ಹೀಗೆ ಎರಡೂ ಸಾರಿಗೆಗಳನ್ನ ಬಳಸುವ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಒಂದೇ ಸ್ಮಾರ್ಟ್​ ಕಾರ್ಡ್​ ಜಾರಿಗೆ ಸಾರಿಗೆ ಇಲಾಖೆ ಮುಂದಾಗಿದೆ.

ಬಿಎಂಟಿಸಿ ಮತ್ತು ಮೆಟ್ರೋ ಎರಡಕ್ಕೂ ಒಂದೇ ಸ್ಮಾರ್ಟ್ ಕಾರ್ಡ್ ನೀಡಲು ಸಾರಿಗೆ ಇಲಾಖೆ ಮುಂದಾಗಿದೆ. ಬಿಎಂಟಿಸಿ, ಮೆಟ್ರೋದಲ್ಲಿ ಪ್ರಯಾಣಿಸುವವರು ಎರಡೆರಡು ಕಾರ್ಡ್‌ ಬಳಸಬೇಕಿಲ್ಲ. ಎರಡಕ್ಕೂ ಒಂದೇ ‘ಸ್ಮಾರ್ಟ್ ಕಾರ್ಡ್’ ಬಳಸುವಂತಹ ಸೌಲಭ್ಯ ಶೀಘ್ರದಲೆ ಜಾರಿಗೆ ಬರಲಿದೆ.

ಲಕ್ಷಾಂತರ ಪ್ರಯಾಣಿಕರಿಗೆ ಅನುಕೂಲ: ಪ್ರಯಾಣಿಕರು ಒಂದೇ ಸ್ಮಾರ್ಟ್ ಕಾರ್ಡ್ ರೀ-ಚಾರ್ಜ್ ಮಾಡಿಕೊಂಡರೆ ಸಾಕು, ಅದನ್ನೇ ಮೆಟ್ರೋ ನಿಲ್ದಾಣಗಳಲ್ಲಿ ಮತ್ತು ಬಿಎಂಟಿಸಿ ಬಸ್‌ಗಳಲ್ಲಿ ಸ್ವೈಪ್ ಮಾಡಿ ಪ್ರಯಾಣಿಸಬಹುದು.

ಈ ನೂತನ ವ್ಯವಸ್ಥೆಯಿಂದ ಬೆಂಗಳೂರಿನ ಲಕ್ಷಾಂತರ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಬಿಎಂಟಿಸಿ ಈಗಾಗಲೇ ಈ ಮಹತ್ವಾಕಾಂಕ್ಷಿ ಯೋಜನೆ ಜಾರಿಗೊಳಿಸಲು ಸನ್ನದ್ಧವಾಗಿದ್ದು, ತ್ವರಿತವಾಗಿ ಎಲ್ಲ ಡಿಪೋಗಳಿಗೆ ಅತ್ಯಾಧುನಿಕ ಟಿಕೆಟ್ ಮಿಷನ್‌ಗಳನ್ನು ವಿತರಣೆ ಮಾಡಲಾಗಿದೆ.

ಈ ಮಿಷನ್‌ಗಳ ಮೂಲಕ ಸ್ಮಾರ್ಟ್ ಕಾರ್ಡ್‌ ಗಳನ್ನು ಸುಲಭವಾಗಿ ರೀಡ್ ಮಾಡಬಹುದು. ಹೊಸ ಕಾರ್ಡ್‌ ಪಡೆಯಲು ಮತ್ತು ರೀಚಾರ್ಜ್ ಮಾಡಲು ಪ್ರಯಾಣಿಕರಿಗೆ ಅನುಕೂಲಕರವಾಗುವಂತೆ ಕೇಂದ್ರಗಳ ಸ್ಥಾಪನೆ ಮಾಡಲು ಸಾರಿಗೆ ಸಂಸ್ಥೆ ಮುಂದಾಗಿದೆ.

Megha
the authorMegha

Leave a Reply

error: Content is protected !!
Latest news
ಪ್ರಯಾಣಿಕರ ಅನುಕೂಲಕ್ಕಾಗಿ ನೂತನ ಸೌಲಭ್ಯ ಜಾರಿಗೆ ಮುಂದಾದ ಸಾರಿಗೆ ಇಲಾಖೆ ಕಾರು-ಟ್ರ್ಯಾಕ್ಟರ್‌ ನಡುವೆ ಡಿಕ್ಕಿ: ಐವರು ಸಾವು, ಏಳು ಮಂದಿಗೆ ಗಂಭೀರ ಗಾಯ ನೌಕರರ 18 ತಿಂಗಳ ಬಾಕಿ ಹಣ 6 ಕಂತುಗಳಲ್ಲಿ ನೀಡಲಾಗುವುದು: ವಿತ್ತ ಸಚಿವರ ಭರವಸೆ KSRTC ಕೋಲಾರ ವಿಭಾಗದ ಅಧಿಕಾರಿಗಳ ದರ್ಪ- ಚಾಲಕರ ಹೆದರಿಸಿ ವಿಶ್ರಾಂತಿ ರಹಿತ ಡಬಲ್‌ ಡ್ಯೂಟಿ, ಸಿಂಗಲ್‌ ಪೇಮೆಂಟ್‌, ಒಟಿ ... BMTC: ಕರ್ತವ್ಯದಲಿದ್ದಾಗಲೇ ಚಾಲಕನಿಗೆ ಹೃದಯಾಘಾತ ಸಾವು- ಪರಿಹಾರಕ್ಕೆ ಆಗ್ರಹಿಸಿ ಚಾಲಕರಿಂದ ಡಿಪೋ ಬಳಿ ಪ್ರತಿಭಟನೆ ಮಾತುಕತೆ ಯಶಸ್ವಿ: ಆರ್‌ಟಿಸಿ ಮುಷ್ಕರ ಅಂತ್ಯ-ಇಂದಿನಿಂದ ಬಸ್ ಸೇವೆ ಪುನಾರಂಭ ಏ.27ರಂದು ಪಿಎಫ್ ಕಚೇರಿ ಮುಂದೆ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ : ನಂಜುಂಡೇಗೌಡ BMS ಸಂಘಟನೆಯ ಹೋರಾಟ: ನೌಕರರ ಧ್ವನಿಗೆ ಸ್ಪಂದಿಸಿದ ಸರ್ಕಾರ- ಸೂಕ್ತ ವ್ಯವಸ್ಥೆ ಮಾಡದೆ ಬಿಟ್ಟಿ ಸಲಹೆ ಕೊಟ್ಟ ಎಂಡಿ ಅಕ್ರಮ... NWKRTC: ಬ್ಯಾಡಗಿ ಬಸ್‌ ನಿಲ್ದಾಣದಲ್ಲಿ ಎರಡು ಬಸ್‌ಗಳ ಮಧ್ಯೆ ಸಿಲುಕಿದ ಕಾಲೇಜು ವಿದ್ಯಾರ್ಥಿ- ಚಿಂತಾಜನಕ ಸ್ಥಿತಿ ಸಾರಿಗೆ ನೌಕರರ ಮುಷ್ಕರ: ಆತ್ಮಹತ್ಯೆಗೆ ಯತ್ನಿಸಿದ ನರಸಂಪೇಟೆ ಡಿಪೋ ಚಾಲಕ ಶಂಕರ್ ಗೌಡ್ ಚಿಕಿತ್ಸೆ ಫಲಿಸದೆ ಮೃತ