CRIMENEWSದೇಶ-ವಿದೇಶಬೆಂಗಳೂರು

ನಿಗೂಢವಾಗಿ ಮೃತಪಟ್ಟ ಪ್ರತಿಷ್ಠಿತ ಖಾಸಗಿ ಕಂಪನಿಯೊಂದರ ಮಹಿಳಾ ಉದ್ಯೋಗಿ: ಬೆತ್ತಲೆ, ಅರೆಕೊಳೆತ ಸ್ಥಿತಿಯಲ್ಲಿ ಪತ್ತೆ

ಪೂಜಾ ದತ್ತ ಮೂಲತಃ ಜಾರ್ಖಂಡ್‌ನ ಧನಬಾದ್ ಸಮೀಪದ ಹಿರಾಪುರ ನಿವಾಸಿ, ಕೆಲಸದ ನಿಮಿತ್ತ ಆಡುಗೋಡಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ಪ್ರತಿಷ್ಠಿತ ಖಾಸಗಿ ಕಂಪನಿಯೊಂದರ ಮಹಿಳಾ ಉದ್ಯೋಗಿ ನಿಗೂಢವಾಗಿ ಮೃತಪಟ್ಟಿದ್ದು, ಆಡುಗೋಡಿಯ ಮನೆಯೊಂದರಲ್ಲಿ ಬೆತ್ತಲೆ ದೇಹ ಪತ್ತೆಯಾಗಿದೆ.

ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಯುವತಿ 34 ವರ್ಷದ ಪೂಜಾ ದತ್ತ ಎಂದು ತಿಳಿದು ಬಂದಿದೆ. ಈಕೆಯ ಮೃತದೇಹ, ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬಾಡಿಗೆ ಮನೆಯಲ್ಲಿ ಅರೆಕೊಳೆತ ರೀತಿಯಲ್ಲಿ ಪತ್ತೆಯಾಗಿದೆ.

ಪೂಜಾ ದತ್ತ ಮೂಲತಃ ಜಾರ್ಖಂಡ್‌ನ ಧನಬಾದ್ ಸಮೀಪದ ಹಿರಾಪುರ ನಿವಾಸಿಯಾಗಿದ್ದು, ಆಡುಗೋಡಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.

ಮನೆಯಿಂದ ಭಾರಿ ದುರ್ನಾತ ಬರುತ್ತಿದ್ದ ಹಿನ್ನೆಲೆಯಲ್ಲಿ ಅನುಮಾನಗೊಂಡ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಬಾಗಿಲು ಮುರಿದು ನೋಡಿದಾಗ ಭೀಕರ ದೃಶ್ಯ ಕಣ್ಣಿಗೆ ಬಿದ್ದಿದೆ.

ಪೂಜಾ ದತ್ತ ಅವರ ಮೃತದೇಹ ಸಂಪೂರ್ಣವಾಗಿ ಬೆತ್ತಲೆ ಮತ್ತು ಅರೆಕೊಳೆತ ಸ್ಥಿತಿಯಲ್ಲಿದ್ದು, ಸಾವು ಸಂಭವಿಸಿ ಕನಿಷ್ಠ 2-3 ದಿನಗಳು ಕಳೆದಿರಬಹುದು ಎಂದು ಶಂಕಿಸಲಾಗಿದೆ. ಬೆತ್ತಲೆ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿರುವುದು ಮತ್ತು ಮೃತದೇಹ ಕೊಳೆತ ಸ್ಥಿತಿಯಲ್ಲಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಇನ್ನು ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸ್ಥಳಕ್ಕೆ ಆಡುಗೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಪೋಸ್ಟ್‌ಮಾರ್ಟಂಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ.

ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪೂಜಾ ಅವರ ಫೋನ್ ಕರೆಗಳು ಮತ್ತು ಸ್ನೇಹಿತರನ್ನು ವಿಚಾರಣೆ ನಡೆಸುತ್ತಿದ್ದಾರೆ.

Megha
the authorMegha

Leave a Reply

error: Content is protected !!
Latest news
ಬೇಕಾಬಿಟ್ಟಿ ಗ್ಯಾರಂಟಿಗಳ ಕೊಡುವುದರಿಂದ ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ: ಸರ್ಕಾರಗಳಿಗೆ ಎಚ್ಚರಿಕೆ ನೀಡಿ ವಿತ್ತ... ಲಾರಿ ಓವರ್‌ಟೇಕ್‌ ಮಾಡುವ ವೇಳೆ ಚಾಲಕನ ನಿಯಂತ್ರ ಕಳೆದುಕೊಂಡ ಕಾರು ಪಲ್ಟಿ: ದಂಪತಿಗೆ ಗಂಭೀರ ಗಾಯ ಆಸ್ಪತ್ರೆಗೆ ದಾಖಲು ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ, ಆತಂಕಬೇಡ: ಸಿಎಂ ಶಿವಕುಮಾರ್‌ ಭರವಸೆ KSRTC ಕನಕಪುರ ಘಟಕದಲ್ಲಿ ಚಾಲಕನ ಮೇಲೆ ಹಲ್ಲೆ ಮಾಡಿದ ನಾಲ್ವರ ಅಮಾನತು ಸಿಎಂ ತವರಲ್ಲೇ KSRTC ಚಾಲನಕನ ಮೇಲೆ ಹಲ್ಲೆ, ಗೂಂಡಾ ವರ್ತನೆ: ಡಿಎಂ ಎದುರೇ ಘಟಕದಲ್ಲಿ ರೌಡಿಸಂ ನೌಕರನ ವಿರುದ್ಧ ಸಾಬೀತಾಗಿರುವ ದುರ್ನಡತೆಗೆ ಹೋಲಿಸಿದರೆ ಆತನ ವಜಾ ಮಾಡಿರುವುದು ಕಾನೂನುಬಾಹಿರ,ಅತ್ಯಂತ ಕಠಿಣ ಶಿಕ್ಷೆ: ಸು... ತಜ್ಞರ ಸಲಹೆ ಪಡೆದು ಪಾಲಿಕೆ ಆಯವ್ಯಯ ಅನುದಾನ ಬಳಕೆ : GBA ದಕ್ಷಿಣ ಆಯುಕ್ತ BMTC: ಜೂನ್‌ 18ರೊಳಗೆ ನಿವೃತ್ತ ನೌಕರರು ಏ-2018 ರಿಂದ ಜು-2018ರವರೆಗಿನ ತುಟ್ಟಿಭತ್ಯೆ ಪಡೆಯಲು ಬ್ಯಾಂಕ್‌ ಖಾತೆ ವಿವರ ... ಕುಡಿಯುವ ನೀರು ಸಮಸ್ಯೆ ಉಂಟಾದಲ್ಲಿ ಅಧಿಕಾರಿಗಳೇ ಹೊಣೆ: ಸಚಿವ ಖಂಡ್ರೆ ಎಚ್ಚರಿಕೆ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಶಿಕ್ಷಣವೊಂದೇ ಆಯುಧ: ನ್ಯಾ. ಶ್ರೀಶೈಲ್ ಭೀಮಸೇನ ಬಾಗಡಿ