ಬನ್ನೂರು: ಕಳೆದ 2018ರಿಂದ ನೆನಗುದಿಗೆ ಬಿದ್ದಿದ್ದ ಬನ್ನೂರು ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನವೆಂಬರ್ 10ರಂದು ಚುನಾವಣೆ ನಡೆಯಲಿದೆ.
ಪುರಸಭೆಯ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡದ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿದೆ. ಹೀಗಾಗಿ 15ನೇ ವಾರ್ಡ್ನ ಕಾಂಗ್ರೆಸ್ ಪುರಸಭೆ ಸದಸ್ಯೆ ಭಾಗ್ಯಶ್ರೀ ಕೃಷ್ಣ ಮೀಸಲಾತಿಯಡಿ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗುವುದು ಬಹುತೇಕ ಖಚಿತವಾಗಿ, ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗದ ಮಹಿಳಾ ಮೀಸಲಾತಿ ಇರುವುದು 12 ಜನ ಜೆಡಿಎಸ್ ಸದಸ್ಯರ ದೊಡ್ಡ ಪಡೆಯಿರುವ ಜೆಡಿಎಸ್ನ ಮಹಿಳಾ ಸದಸ್ಯರೊಬ್ಬರು ಆಯ್ಕೆಆಗಲಿದ್ದಾರೆ.
ಒಟ್ಟು 23 ಸದಸ್ಯರಿರುವ ಬನ್ನೂರು ಪುರಸಭೆಯಲ್ಲಿ 12 ಜೆಡಿಎಸ್, 7 ಕಾಂಗ್ರೆಸ್, ಇಬ್ಬರು ಬಿಜೆಪಿ ಮತ್ತು ಇಬ್ಬರು ಪಕ್ಷೇತರ ಸದಸ್ಯೆರಿದ್ದಾರೆ. ಇವರಲ್ಲಿ ಕಾಂಗ್ರೆಸ್ನ ಭಾಗ್ಯಶ್ರೀ ಕೃಷ್ಣ ಒಬ್ಬರೆ ಪರಿಸಶಿಷ್ಟ ಪಂಗಡದ ಮಹಿಳಾ ಸದಸ್ಯರಾಗಿರುವುದರಿಂದ ಇವರು ಅಧ್ಯಕ್ಷರಾಗಿ ಅವಿರೋಧ ಆಯ್ಕೆ ಆಗುವುದು ಬಹುತೇಕ ಖಚಿತವಾಗಿದೆ.
ಇನ್ನು ಜೆಡಿಎಸ್ನಲ್ಲಿ ಮೂವರು ಮಹಿಳಾ ಸದಸ್ಯರಿದ್ದು, ಅವರಲ್ಲಿ ಪಕ್ಷದ ವರಿಷ್ಠರು ಯಾರನ್ನು ಸೂಚಿಸುತ್ತಾರೋ ಅವರೇ ಉಪಾಧ್ಯಕ್ಷರಾಗಲಿದ್ದಾರೆ ಎಂದು ಪುರಸಭೆ ಜೆಡಿಎಸ್ ಸದಸ್ಯರೊಬ್ಬರು ತಿಳಿಸಿದ್ದಾರೆ.
ತಿ.ನರಸೀಪುರ ತಾಲೂಕು ಬನ್ನೂರು ಪುರಸಭೆ ಕಚೇರಿ ಸಭಾಂಗಣದಲ್ಲಿ ನವೆಂಬರ್ 10 ರಂದು ಮಧ್ಯಾಹ್ನ 12ಗಂಟೆಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ಸಭೆಯನ್ನು ಕರೆಯಲಾಗಿದ್ದು, ಈ ಸಭೆಗೆ ನಿಗಧಿಪಡಿಸಿದ ದಿನದಂದು ಎಲ್ಲಾ ಸದಸ್ಯರು ಹಾಜರಾಗಬೇಕು ಎಂದು ಚುನಾವಣಾಧಿಕಾರಿಯೂ ಆದ ತಹಸೀಲ್ದಾರ್ ತಿಳಿಸಿದ್ದಾರೆ.
ಬನ್ನೂರು ಪುರಸಭೆಯಲ್ಲಿ ಸದಸ್ಯ ಪಟ್ಟಿ
1.ಜೆ.ಡಿ.ಎಸ್ -ಭಾಗ್ಯ, 2.ಕಾಂಗ್ರೆಸ್-ಮಹೇಶ್, 3.ಜೆ.ಡಿ.ಎಸ್-ಆನಂದ್, 4.ಕಾಂಗ್ರೆಸ್-ಶೃತಿ, 5.ಜೆ.ಡಿ.ಎಸ್-ಕೃಷ್ಣೆಗೌಡ, 6.ಜೆ.ಡಿ.ಎಸ್- ಸೌಮ್ಯರಾಣಿ, 7.ಜೆ.ಡಿ.ಎಸ್- ನಂಜುಂಡಸ್ವಾಮಿ
8.ಜೆ.ಡಿ.ಎಸ್-ಶ್ರೀನಿವಾಸ್, 9.ಕಾಂಗ್ರೆಸ್-ಅನಂತಮೂರ್ತಿ, 10.ಜೆ.ಡಿ.ಎಸ್-ಶೋಭಾ, 11.ಬಿಜೆಪಿ-ನಾಗರತ್ನ, 12.ಜೆ.ಡಿ.ಎಸ್-ದಿವ್ಯಾ, 13.ಜೆ.ಡಿ.ಎಸ್- ಫಿರ್ದೋಶ್, 14.ಕಾಂಗ್ರೆಸ್-ಫೀರ್ ಖಾನ್, 15.ಕಾಂಗ್ರೆಸ್-ಭಾಗ್ಯಶ್ರಿ, 16.ಪಕ್ಷೇತರ-ಲೋಕಾಂಭಿಕಾ, 17.ಕಾಂಗ್ರೆಸ್-ಪುಷ್ಪಾವತಿ, 18.ಕಾಂಗ್ರೆಸ್-ಮೂರ್ತಿ, 19.ಜೆ.ಡಿ.ಎಸ್- ಶಾಂತ ರಾಜು, 20.ಬಿಜೆಪಿ-ಶಿವಣ್ಣ, 21.ಜೆ.ಡಿ.ಎಸ್-ಚಲುವರಾಜು, 22.ಜೆ.ಡಿ.ಎಸ್-ವಿಜಯಕುಮಾರ್, 23.ಪಕ್ಷೇತರ -ಸುರೇಶ್.