NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಚಾಲನಾ ಸಿಬ್ಬಂದಿ ವಿರುದ್ಧ ಮೆಮೊ ನೀಡುವುದಕಷ್ಟೇ ತಮ್ಮ ಕಾರ್ಯ ವ್ಯಾಪ್ತಿಯ ಸೀಮಿತಗೊಳಿಸಿಕೊಂಡ ತನಿಖಾಧಿಕಾರಿಗಳು?!!

ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ವಾಹನ ತಪಾಸಣಾಧಿಕಾರಿಗಳ ಕರ್ತವ್ಯ ವ್ಯಾಪ್ತಿ ಎಷ್ಟಿದೆ ಎಂದರೆ ಅವರಿಗೆ ಕೆಲ ಪ್ರಮುಖ ಅಧಿಕಾರಗಳನ್ನು ನೀಡಲಾಗಿದೆ. ಆದರೆ, ಆ ಅಧಿಕಾರವನ್ನು ಕೇವಲ ಚಾಲನಾ ಸಿಬ್ಬಂದಿಗಳ ಮೇಲೆ ಮಾತ್ರ  ಪ್ರಯೋಗಿಸುವ ಮೂಲಕ ತಾರತಮ್ಯತೆ ಎಸಗುತ್ತಿದ್ದಾರೆ.

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ವಾಹನ ತಪಾಸಣಾಧಿಕಾರಿಗಳ ಕರ್ತವ್ಯ ವ್ಯಾಪ್ತಿ ಎಷ್ಟಿದೆ ಎಂದರೆ ಅವರಿಗೆ ಕೆಲ ಪ್ರಮುಖ ಅಧಿಕಾರಗಳನ್ನು ನೀಡಲಾಗಿದೆ. ಆದರೆ, ಆ ಅಧಿಕಾರವನ್ನು ಕೇವಲ ಚಾಲನಾ ಸಿಬ್ಬಂದಿಗಳ ಮೇಲೆ ಮಾತ್ರ  ಪ್ರಯೋಗಿಸುವ ಮೂಲಕ ತಾರತಮ್ಯತೆ ಎಸಗುತ್ತಿದ್ದಾರೆ.

ಎಷ್ಟರ ಮಟ್ಟಿಗೆ ತಾರತಮ್ಯತೆ ಇದೆ ಎಂದರೆ ಅದನ್ನು ಸ್ವತಃ ನೌಕರರೇ ನೊಂದು ಈ ತಪಾಸಣಾಧಿಕಾರಿಗಳ ಕಾರ್ಯ ವ್ಯಾಪ್ತಿಯ ಬಗ್ಗೆ ವಿವರವಾಗಿ ತಿಳಿಸಿದ್ದಾರೆ. ಆ ಎಲ್ಲ ಪೂರ್ಣ ಮಾಹಿತಿ ನಿಮ್ಮ ವಿಜಯಪಥ ಮೀಡಿಯಾದಲ್ಲಿ ನೀಡಲಾಗುತ್ತಿದೆ. ಇದನ್ನು ತಿಳಿದುಕೊಂಡು ಬಳಿಕ ಲಾಗ್‌ ಶೀಟ್‌ಗಳಲ್ಲಿ ತಪ್ಪದೆ ವಾಹನಗಳಲ್ಲಿ ಕಂಡುಬರುವ ದೋಷಗಳನ್ನು ನಮೂದಿಸಿ.

ಒಂದು ವೇಳೆ ಡಿಪೋಗಳಲ್ಲಿ ಅಧಿಕಾರಿಗಳು ಡಿಎಂ ಡಿಎಂಇ ಸೇರಿದಂತೆ ಇತರೆ ಅಧಿಕಾರಿಗಳು ಮೌಖಿಕವಾಗಿ ಲಾಗ್‌ಶೀಟ್‌ಗಳಲ್ಲಿ ವಾಹನ ದೋಷ ನಮೂದಿಸಬೇಡಿ ಎಂದು ಹೇಳಿದರೆ ತಾವು ಲಿಖಿತವಾಗಿ ಆದೇಶ ಮಾಡಿ ಎಂದು ಧೈರ್ಯದಿಂದ ಕೇಳಿ ಒಂದು ವೇಳೆ ಈ ಅಧಿಕಾರಿಗಳು ಲಿಖಿತವಾಗಿ ನೀಡಿದರೆ ಲಾಗ್‌ಶೀಟ್‌ಗಳಲ್ಲಿ ವಾಹನ ದೋಷವನ್ನು ಬರೆಯಬೇಡಿ ಆದರೆ, ಲಿಖಿತವಾಗಿ ನೀಡಿರುವ ಆದೇಶ ಪ್ರತಿಯೊಂದನ್ನು ಎಲ್ಲರೂ ತಮ್ಮಲ್ಲಿ ಜೋಪಾನವಾಗಿ ಇಟ್ಟುಕೊಳ್ಳಿ.

ಇನ್ನು ವಾಹನ ತಪಾಸಣೆ ಮಾಡಲು ಬರುವವರು ಸಾಮಾನ್ಯವಾಗಿ ಸಹಾಯಕ ಸಂಚಾರ ಅಧೀಕ್ಷಕರು (ATS) ಮತ್ತು ಸಂಚಾರಿ ನಿರೀಕ್ಷಕರು(TI) ಅಥವಾ ಸಹಾಯಕ ಸಂಚಾರಿ ನಿರೀಕ್ಷಕರು(ATI) ಮುಖ್ಯವಾಗಿ ಟಿಕೆಟ್ ತಪಾಸಣೆ (Line Checking) ಮಾಡುವ ಜವಾಬ್ದಾರಿ ಹೊಂದಿದ್ದಾರೆ. ಆದರೆ, ನಿಗಮದ ನಿಯಮಾವಳಿಗಳ ಪ್ರಕಾರ, ಅವರು ಕೇವಲ ಟಿಕೆಟ್ ಮಾತ್ರವಲ್ಲದೆ, ವಾಹನದ ಸುರಕ್ಷತೆ ಮತ್ತು ಚಾಲಕ, ನಿರ್ವಾಹಕರ ಶಿಸ್ತನ್ನು ಗಮನಿಸುವ ಅಧಿಕಾರವನ್ನೂ ಹೊಂದಿದ್ದಾರೆ.

ಇತ್ತೀಚೆಗೆ ಒಂದು ವಾಹನವನ್ನು ಹ್ಯಾಂಡ್ ಬ್ರೇಕ್ ಹಾಕದೆ ಚಾಲಕ ನಿಲ್ದಾಣದಲ್ಲಿ ನಿಲುಗೆ ಮಾಡಿ ಇಳಿದಿದ್ದ ಎಂದು ಆರೋಪಿಸಿ ಅಪರಾಧ ಜ್ಞಾಪನಾ ಪತ್ರದಲ್ಲಿ (Memo)”ಹ್ಯಾಂಡ್ ಬ್ರೇಕ್ ಹಾಕದಿರುವ ಬಗ್ಗೆ”ಉಲ್ಲೇಖಿಸಿರುವುದು ಸುರಕ್ಷತೆಯ ದೃಷ್ಟಿಯಿಂದ ಮಾಡಿರಬಹುದು. ಆದರೆ, ಇಲ್ಲಿ ನೌಕರರ ವಾದ, ವಾಹನದಲ್ಲಿರುವ ಇತರ ಪ್ರಮುಖ ದೋಷಗಳನ್ನು ಕಡೆಗಣಿಸಿ ಕೇವಲ ಹ್ಯಾಂಡ್ ಬ್ರೇಕ್ ಬಗ್ಗೆ ಮೆಮೊ ನೀಡುವುದು ತಾರತಮ್ಯದಂತೆ ಭಾಸವಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಾಹನದಲ್ಲಿ ಆಗುತ್ತಿರುವ ತಾಂತ್ರಿಕ ದೋಷಗಳ ಗಂಭೀರತೆ ನೀವು ಪಟ್ಟಿ ಮಾಡಿರುವ ದೋಷಗಳು ಹ್ಯಾಂಡ್ ಬ್ರೇಕ್ ಸಮಸ್ಯೆಗಿಂತಲೂ ಹೆಚ್ಚು ಅಪಾಯಕಾರಿಯಾಗಿವೆ. ಅವುಗಳಲ್ಲಿ ಬ್ರೇಕ್ ಸರಿಯಾಗಿ ಹಿಡಿಯದಿರುವುದು: ಇದು ನೇರವಾಗಿ ಪ್ರಯಾಣಿಕರ ಪ್ರಾಣಕ್ಕೆ ಸಂಚಕಾರ ತರುವಂತದ್ದು.

ರಿಮೋಲ್ಡ್ ಟೈಯರುಗಳ ಬಳಕೆ: ಮುಂದಿನ ಚಕ್ರಗಳಿಗೆ ಮತ್ತು ಹಿಂದಿನ ಚಕ್ರಗಳಿಗೆ ರಿಮೋಲ್ಡ್ ಟೈರ್ ಹಾಕಿ, ಅದರಲ್ಲಿ ಸುಮಾರು 100 ಪ್ರಯಾಣಿಕರನ್ನು ತುಂಬಿಕೊಂಡು ಹೋಗಬೇಕು, ಇದರಿಂದ ಅತಿಯಾದ ಬೇಸಿಗೆಯಲ್ಲಿ ಟೈರ್ ಬ್ಲಾಸ್ಟ್ ಆಗಿ ಅನಾಹುತ ಸಂಭವಿಸುತ್ತಿವೆ.

ಎಕ್ಸೆಲ್ ಬೋಲ್ಟ್ ಲೂಸ್ ಆಗಿ ಆಯಿಲ್ ಸೋರಿಕೆ ಆಗುತ್ತಿರುವ ಚಕ್ರವನ್ನು ತನಿಖಾಧಿಕಾರಿಗಳು ಗಮನಿಸುವುದಿಲ್ಲ? ಗೆರ್ ಗಳು ಸ್ಲಿಪ್ ಆಗುತ್ತಿದ್ದರೂ ಅದನ್ನು ತನಿಖಾಧಿಕಾರಿಗಳು ಗಮನಿಸುವುದಿಲ್ಲ. ವಾಹನದ ಬ್ಯಾಟರಿ ಮತ್ತು ಸ್ಟಾರ್ಟರ ಬಗ್ಗೆ ಕೂಡ ತನಿಖಾಧಿಕಾರಿಗಳು ಗಮನಿಸುವುದಿಲ್ಲ?

ಹೆಡ್ ಲೈಟ್ ಮತ್ತು ಹಾರನ್: ರಾತ್ರಿ ವೇಳೆ ಮತ್ತು ತಿರುವುಗಳಲ್ಲಿ ಚಾಲನೆ ಮಾಡುವಾಗ ಹೆಡ್ ಲೈಟ್ ಮತ್ತು ಹಾರನ್ ಅತಿ ಅವಶ್ಯಕವಾದರೂ ಇವುಗಳ ಬಗ್ಗೆ ಯಾರು ಗಮನಿಸುವುದಿಲ್ಲ. ಸೈಡ್ ಮಿರರ್-ಚಾಲಕನಿಗೆ ಹಿಂದಿನ ವಾಹನಗಳ ಚಲನವಲನ ತಿಳಿಯಲು ಇದು ಕಣ್ಣಿದ್ದಂತೆ. ಹೆಚ್ಚಿನ ಪ್ರಯಾಣಿಕರು (Overload) ಇದು ವಾಹನದ ಇಂಜಿನ್ ಮತ್ತು ಟೈರ್ ಮೇಲೆ ಒತ್ತಡ ಹೇರುವುದಲ್ಲದೆ ಅಪಘಾತಕ್ಕೆ ದಾರಿಯಾಗುತ್ತದೆ. ಆದರೂ ಈ ಬಗ್ಗೆ ಈ ತನಿಖಾಧಿಕಾರಿಗಳು ಗಮನಿಸುವುದಿಲ್ಲ?

ಇದಕ್ಕೆ ಇರುವ ಪರಿಹಾರ ಮತ್ತು ಕಾನೂನು ಕ್ರಮಗಳು: ಅಧಿಕಾರಿಗಳು ಕೇವಲ ಚಾಲಕರ ಮೇಲೆ ದೋಷ ಹೊರಿಸುವ ಬದಲು, ಘಟಕದ ನಿರ್ವಹಣಾ ಲೋಪಗಳ ಕಡೆಗೆ ಗಮನ ಹರಿಸುವುದು ಮುಖ್ಯ.

ಚಾಲನಾ ಸಿಬ್ಬಂದಿ ಈ ಕ್ರಮಗಳನ್ನು ಕೈಗೊಳ್ಳಬಹುದು: ಚಾಲನಾ ಸಿಬ್ಬಂದಿಗಳಾದ ನಿಮಗೆ ನೀಡುವ ಮೆಮೊಗೆ ಉತ್ತರಿಸುವಾಗ, “ವಾಹನದಲ್ಲಿ ಈಗಾಗಲೇ ಇರುವ ತಾಂತ್ರಿಕ ದೋಷಗಳ ಬಗ್ಗೆ ನಾನು ಲಾಲ್‌ಶೀಟ್‌ನಲ್ಲಿ ನಮೂದಿಸಿದ್ದರೂ ಸಹ, ಅವುಗಳನ್ನು ಸರಿಪಡಿಸದೆ ಕರ್ತವ್ಯಕ್ಕೆ ಕಳುಹಿಸಲಾಗಿದೆ” ಎಂದು ಸ್ಪಷ್ಟವಾಗಿ ಉಲ್ಲೇಖಿಸಿ.

ವಾಹನದಲ್ಲಿ ಬ್ರೇಕ್, ಲೈಟ್ ಅಥವಾ ಹಾರನ್ ಇಲ್ಲದಿದ್ದರೆ, ಅದನ್ನು ಚಲಾಯಿಸುವುದು ಅಪಾಯಕಾರಿ ಎಂದು ಘಟಕ ವ್ಯವಸ್ಥಾಪಕರಿಗೆ (depot Manager) ಲಿಖಿತವಾಗಿ ಮಾಹಿತಿ ನೀಡಿ. ವಾಹನದ ನಿರ್ವಹಣೆಗಾಗಿ ಎನೆಲ್ಲ ಕೆಲಸ ಕಾರ್ಯಗಳು ಆಗಿವೆ ಮತ್ತು ಯಾವೆಲ್ಲ ಬಿಡಿಭಾಗಗಳನ್ನು ಬದಲಾಯಿಸಲಾಗಿದೆ ಎಂಬ ಮಾಹಿತಿಯನ್ನು ನೀವು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಬಹುದು. ಇದು ನಿರ್ವಹಣೆಯಲ್ಲಿನ ಪಾರದರ್ಶಕತೆಯನ್ನು ಬಯಲಿಗೆಳೆಯಲು ಸಹಾಯ ಮಾಡುತ್ತದೆ.

ಸಾರಿಗೆ ಸಂಸ್ಥೆಯು ಕೇವಲ ದಂಡ ವಿಧಿಸುವಲ್ಲಿ ಆಸಕ್ತಿ ತೋರಿಸದೆ, ಚಾಲಕನಿಗೆ ಸುಸ್ಥಿತಿಯಲ್ಲಿರುವ ವಾಹನವನ್ನು ನೀಡುವುದು ಅದರ ಪ್ರಾಥಮಿಕ ಕರ್ತವ್ಯವಾಗಿದೆ. ಅಧಿಕಾರಿಗಳು ಸುರಕ್ಷತೆಯ ದೃಷ್ಟಿಯಿಂದ ಹ್ಯಾಂಡ್ ಬ್ರೇಕ್ ಬಗ್ಗೆ ಮೆಮೊ ನೀಡುತ್ತಿದ್ದಾರೆ, ಅಷ್ಟೇ ಗಂಭೀರತೆಯನ್ನು ವಾಹನದ ಇತರ ತಾಂತ್ರಿಕ ದೋಷಗಳನ್ನು ಸರಿಪಡಿಸುವಲ್ಲಿಯೂ ತೋರಿಸಬೇಕಾದ್ದು ನ್ಯಾಯಯುತವಾಗಿದೆ.

ಹೀಗಾಗಿ ಚಾಲನಾ ಸಿಬ್ಬಂದಿ ನಿಮ್ಮ ಲಾಗ್ ಶೀಟ್‌ನಲ್ಲಿ ಕರ್ತವ್ಯ ಮುಗಿಸಿ ಬಂದಾಗ ವಾಹನದ ಪ್ರತಿಯೊಂದು ದೋಷವನ್ನು ವಿವರವಾಗಿ ದಾಖಲಿಸಲು ಮರೆಯಬೇಡಿ, ಅದು ನಿಮಗೆ ಸಮಸ್ಯೆ ಆದಾಗ ಅಥವಾ ದೋಷಾರೋಪಣಾ ಪತ್ರ ನೀಡಿದಾಗ ಮುಂದಿನ ಕಾನೂನು ಹೋರಾಟದಲ್ಲಿ ದೊಡ್ಡ ರಕ್ಷಣೆಯಾಗುತ್ತದೆ.

ಇನ್ನು ಈ ಮೊದಲೇ ತಿಳಿಸಿರುವಂತೆ ಡಿಪೋಗಳಲ್ಲಿ ಕೆಲ ಅಧಿಕಾರಿಗಳು ತಮ್ಮ ತಪ್ಪನ್ನು ಮುಚ್ಚಿಹಾಕಿಕೊಳ್ಳುವ ಸಲುವಾಗಿ ಲಾಗ್‌ಶೀಟ್‌ನಲ್ಲಿ ವಾಹನಗಳ ದೋಷ ನಮೂದಿಸದಂತೆ ಮೌಖಿಕವಾಗಿ ಆದೇಶ ಮಾಡುತ್ತಾರೆ. ಆದರೆ, ಈ ಆದೇಶಕ್ಕೆ ಯಾವುದೇ ಬೆಲೆ ಇರುವುದಿಲ್ಲ. ನೌಕರರು ನಿಯಮ ಬದ್ದವಾಗಿ ಏನು ಮಾಡಬೇಕೋ ಅದನ್ನು ಮಾಡಿ ನಿಮ್ಮನ್ನು ನೀವು ರಕ್ಷಣೆ ಮಾಡಿಕೊಳ್ಳಬೇಕಿದೆ.

Megha
the authorMegha

Leave a Reply

error: Content is protected !!
Latest news
KSRTC: ಚಾಲನಾ ಸಿಬ್ಬಂದಿ ವಿರುದ್ಧ ಮೆಮೊ ನೀಡುವುದಕಷ್ಟೇ ತಮ್ಮ ಕಾರ್ಯ ವ್ಯಾಪ್ತಿಯ ಸೀಮಿತಗೊಳಿಸಿಕೊಂಡ ತನಿಖಾಧಿಕಾರಿಗಳು?... ಸಾರಿಗೆ ನೌಕರರು: ಅಗ್ರಿಮೆಂಟ್ ಬೇಕು ಎನ್ನುವವರೇ ಒಮ್ಮೆ ನೋಡಿ ಇನ್ನಾದರೂ ಸರಿ ಸಮಾನ ವೇತನ ಕೇಳಲು ಮುಂದಾಗಿ..! ನಾಳೆ ಇಪಿಎಸ್-95, ಬಿಎಂಟಿಸಿ ‍& ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘದ ಮಾಸಿಕ ಸಭೆಯ ಶತದಿನೋತ್ಸವ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗೆ 993 ರೂ. ಹೆಚ್ಚಳ- ಭಾರೀ ಏರಿಕೆ ಮೇ 1ರಿಂದಲೇ ಜಾರಿ KSRTC: ಮೇ 4ರಂದು ಸರ್ಕಾರದ ವಿಳಂಬ ನೀತಿ ಖಂಡಿಸಿ ಸಾರಿಗೆ ನೌಕರರ ಒಕ್ಕೂಟದಿಂದ ಧರಣಿ ಸರ್ಕಾರದ ಧೋರಣೆ ಖಂಡಿಸಿ ರಾಜ್ಯ ಸಾರಿಗೆ ನೌಕರರಿಂದ ಕರಾಳ ಕಾರ್ಮಿಕ ದಿನಾಚರಣೆ- ಡ್ಯೂಟಿ ಮೇಲೆ ಮೌನ ಪ್ರತಿಭಟನೆ GBA ದಕ್ಷಿಣ: ಮಳೆ ಬಂದಾಗ ಹೆಚ್ಚು ನೀರು ನಿಲ್ಲುವ ಪ್ರದೇಶಗಳಿಗೆ ಆಯುಕ್ತ ರಮೇಶ್ ಭೇಟಿ ಸರ್ಕಾರ ಸಾರಿಗೆ ನೌಕರರ ಏಳಿಗೆ ಬಗ್ಗೆ ಯೋಚಿಸಲೂ ಆಗದಂತಹ ನಿಕೃಷ್ಟ ಹಂತ ತಲುಪಿರುವುದು ದುರಂತವೇ ಸರಿ: ವಿಪಕ್ಷ ನಾಯಕ ಆರ್‌... KKRTC: ಭ್ರಷ್ಟ ಅಧಿಕಾರಿಗಳ ವಿರುದ್ಧ ಎಂಡಿಗೆ ಲಿಖಿತ ದೂರು ಕೊಟ್ಟು 3 ತಿಂಗಳುಗಳು ಕಳೆದರೂ ಯಾವುದೇ ಕ್ರಮವಿಲ್ಲ ಏಕೆ- ಯಾ... KSRTC- ನಮ್ಮ ಹೋರಾಟ ಕಡೆಗಣಿಸುತ್ತಿದ್ದೀರಿ ಇದು ನಿಮಗೆ ಸಲ್ಲ- ಮುಂದಿನ ದಿನಗಳಲ್ಲಿ ತಕ್ಕಪಾಠ ಕಲಿಸುತ್ತೇವೆ ಕೇಂದ್ರ ಸರ್...