ಟನ್ ಕಬ್ಬಿಗೆ 4500 ರೂ. ನಿಗದಿಗೊಳಿಸಿ: ಕೇಂದ್ರ ಸರ್ಕಾರಕ್ಕೆ ಅತ್ತಹಳ್ಳಿ ದೇವರಾಜ್ ಆಗ್ರಹ
ಕಬ್ಬಿನಿಂದ ಸಕ್ಕರೆ ಎಥಾನಾಲ್, ವಿದ್ಯುತ್, ಕಾಂಪೋಸ್ಟ್ ಗೊಬ್ಬರ ಇನ್ನು ಇತರ ಉತ್ಪನ್ನಗಳನ್ನು ಉತ್ಪಾದಿಸುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ನಿರಂತರವಾಗಿ ವಂಚನೆ ಮಾಡುತ್ತಿವೆ. ಸರ್ಕಾರದ ಆದೇಶಗಳನ್ನು ವಾಮ ಮಾರ್ಗದಲ್ಲಿ ನಿರ್ಲಕ್ಷಿಸುತ್ತಿವೆ- ಅತ್ತಹಳ್ಳಿ ದೇವರಾಜ್

ಮೈಸೂರು: ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಕಬ್ಬಿನ FRP ಬೆಲೆ ಒಂದು ಟನ್ ಕಬ್ಬಿಗೆ 3650 ರೂ. ಬೆಲೆ ನಿಗದಿ ಪಡಿಸಿದ್ದು ಕಬ್ಬು ಬೆಳೆಗಾರ ರೈತರಿಗೆ ನ್ಯಾಯ ಸಮ್ಮತವಲ್ಲ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘ ಖಂಡಿಸುತ್ತದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ಹೇಳಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೇಂದ್ರ ಸಚಿವ ಸಂಪುಟ ನಿನ್ನೆ ತೀರ್ಮಾನಿಸಿ ಘೋಷಣೆ ಮಾಡಿರುವ 2026- 27ನೇ ಸಾಲಿಗೆ 10.25 ಸಕ್ಕರೆ ಇಳುವವರಿ ಟನ್ ಕಬ್ಬಿಗೆ 3650 ರೂ. ರೈತರ ಉತ್ಪಾದನ ವೆಚ್ಚಕಿಂತ ಕಡಿಮೆಯಾಗಿದೆ ಎಂದು ಕಿಡಿಕಾರಿದ್ದಾರೆ.
ಇನ್ನು ಕರ್ನಾಟಕ ಸರ್ಕಾರ 4450 ರೂ. ನಿಗದಿ ಮಾಡಬೇಕೆಂದು ವರದಿ ನೀಡಿದೆ ಇದನ್ನು ಗಮನಿಸಿ ಹೆಚ್ಚುವರಿ ಬೆಲೆ ನಿಗದಿ ಮಾಡಬೇಕಾಗಿತ್ತು. ಇದು ರೈತರನ್ನು ಕಬ್ಬು ಬೆಳೆಯಿಂದ ಒಕ್ಕಲಿಬಿಸುವ ಕಾರ್ಯವಾಗಿದೆ. ಕೂಡಲೇ ಎಫ್ಆರ್ಪಿ ದರ ಪುನರ್ ಪರಿಸಿಲಿಸಿ ಟನ್ ಕಬ್ಬಿಗೆ 4500 ರೂ. ನಿಗದಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಕಬ್ಬಿನಿಂದ ಸಕ್ಕರೆ ಎಥಾನಾಲ್, ವಿದ್ಯುತ್, ಕಾಂಪೋಸ್ಟ್ ಗೊಬ್ಬರ ಇನ್ನು ಇತರ ಉತ್ಪನ್ನಗಳನ್ನು ಉತ್ಪಾದಿಸುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ನಿರಂತರವಾಗಿ ವಂಚನೆ ಮಾಡುತ್ತಿವೆ. ಸರ್ಕಾರದ ಆದೇಶಗಳನ್ನು ವಾಮ ಮಾರ್ಗದಲ್ಲಿ ನಿರ್ಲಕ್ಷಿಸುತ್ತಿವೆ ಎಂದು ಆರೋಪಿಸಿದ್ದಾರೆ.
ಇನ್ನು ಕಬ್ಬಿನ ಹಣ ಪಾವತಿ ಸಕಾಲಕ್ಕೆ ಸಮರ್ಪಕವಾಗಿ ಮಾಡುತ್ತಿಲ್ಲ. ಇಂತಹ ವಿಚಾರದಲ್ಲಿ ಕೇಂದ್ರ ಸರ್ಕಾರ ಸಕ್ಕರೆ ನಿಯಂತ್ರಣ ಕಾಯ್ದೆ 1966 ತಿದ್ದುಪಡಿ ಮಾಡಬೇಕು. ಈ ಮೂಲಕ ಕಾನೂನು ಉಲ್ಲಂಘಿಸುವ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಶಿಕ್ಷೆ ನೀಡುವ ಕಠಿಣ ಕಾಯ್ದೆ ಜಾರಿಗೆ ತರಬೇಕು ಎಂದು ಅತ್ತಹಳ್ಳಿ ದೇವರಾಜ್ ಒತ್ತಾಯಿಸಿದ್ದಾರೆ.
Related









