NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ನಿವೃತ್ತರಾದ 25ದಿನದೊಳಗೆ ಭವಿಷ್ಯ ನಿಧಿ ಪಾವತಿಸದಿದ್ದರೆ ಸಂಬಂಧಿಸಿದ ಅಧಿಕಾರಿಗಳೇ ವಿಳಂಬದ ಬಡ್ಡಿ ಬರಿಸಬೇಕು- ಪಿಎಫ್‌ ಕಾರ್ಯದರ್ಶಿ ಆದೇಶ

ಇನ್ನು ಮುಂದೆ ಪ್ರತಿ ಮಾಹೆಯ 15ನೇ ತಾರೀಖಿನೊಳಗೆ ಭ.ನಿ./ ಐ.ಭ.ನಿ ಅಂತಿಮ ಅಭ್ಯರ್ಥನಗಳನ್ನು ಮಂಜೂರಾತಿಗಾಗಿ ನ್ಯಾನ ಮಂಡಳಿಗೆ ಸಲ್ಲಿಸಬೇಕು. ಅಲ್ಲದೆ 25ನೇ ತಾರೀಖಿನೊಳಗೆ ಅಭ್ಯರ್ಥನಗಳನ್ನು ಪಾವತಿ ಮಾಡಲು ಕ್ರಮ ಕೈಗೊಳ್ಳುವುದು ಎಂದು ತಾಕೀತು ಮಾಡಿದ್ದಾರೆ.

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಅಧಿಕಾರಿಗಳು/ ನೌಕರರಿಗೆ ತ್ವರಿತವಾಗಿ ಭವಿಷ್ಯ ನಿಧಿ/ ಐಚ್ಛಿಕ ಭವಿಷ್ಯ ನಿಧಿಯ ಅಂತಿಮ ಅಭ್ಯರ್ಥನಗಳನ್ನು ತ್ವರಿತವಾಗಿ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಭವಿಷ್ಯ ನಿಧಿ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ಈ ಸಂಬಂಧ ಇಂದು ಆದೇಶ ಹೊರಡಿಸಿರುವ ಅವರು, ಇನ್ನು ಮುಂದೆ ಪ್ರತಿ ಮಾಹೆಯ 15ನೇ ತಾರೀಖಿನೊಳಗೆ ಭ.ನಿ./ ಐ.ಭ.ನಿ ಅಂತಿಮ ಅಭ್ಯರ್ಥನಗಳನ್ನು ಮಂಜೂರಾತಿಗಾಗಿ ನ್ಯಾನ ಮಂಡಳಿಗೆ ಸಲ್ಲಿಸಬೇಕು. ಅಲ್ಲದೆ 25ನೇ ತಾರೀಖಿನೊಳಗೆ ಅಭ್ಯರ್ಥನಗಳನ್ನು ಪಾವತಿ ಮಾಡಲು ಕ್ರಮ ಕೈಗೊಳ್ಳುವುದು ಎಂದು ತಾಕೀತು ಮಾಡಿದ್ದಾರೆ.

ಇನ್ನು ಒಂದು ವೇಳೆ ಸಾರಿಗೆ ಸಂಸ್ಥೆಗಳ ವಿಭಾಗಗಳಿಂದ ಅನಗತ್ಯವಾಗಿ ವಿಳಂಬ ಉಂಟಾದಲ್ಲಿ ನಿವೃತ್ತ ನೌಕರರು/ ನಾಮಿನಿದಾರರಿಂದ ಬರುವ ದೂರುಗಳಿಗೆ ಹಾಗೂ ಅದರಿಂದ ನ್ಯಾಸ ಮಂಡಳಿಗೆ ಉಂಟಾಗುವ ಆರ್ಥಿಕ ನಷ್ಟಗಳಿಗೆ ಸಂಬಂಧಪಟ್ಟವರನ್ನು ನೇರ ಹೊಣೆಗಾರರನ್ನಾಗಿಸಲಾಗುವುದೆಂದು ಕಾರ್ಯದರ್ಶಿ ಸ್ಪಷ್ಟವಾಗಿ ತಿಳಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ. ಭ.ನಿ ನಿಯಮಾವಳಿ ಅನುಸಾರ ಭ/ ಐ.ಭ ನಿಧಿ ಅಂತಿಮ ಅಭ್ಯರ್ಥನಗಳನ್ನು ನಿವೃತ್ತಿ ನಂತರದ ಮಾಹೆಯ 20ನೇ ತಾರೀಖಿನೊಳಗಾಗಿ ಪಾವತಿಸಬೇಕಿದೆ. ತಪ್ಪಿದಲ್ಲಿ ಪಾವತಿ ಮಾಡುವವರೆಗೆ ವಿಳಂಬ ಬಡ್ಡಿ ಸೇರಿಸಿ ಅಭ್ಯರ್ಥನವನ್ನು ಪಾವತಿ ಮಾಡಬೇಕಾಗಿದೆ.

ಹೀಗಾಗಿ ನಿವೃತ್ತಿ/ ವಜಾ/ ಸ್ವ-ನಿವೃತ್ತಿ/ ನಿಧನ ಹೊಂದಿರುವ ನೌಕರರುಗಳ ಭವಿಷ್ಯ ನಿಧಿ ಅಂತಿಮ ಅಭ್ಯರ್ಥನಗಳನ್ನು ಯಾವುದೇ ವಿಳಂಬವಿಲ್ಲದೆ ಸಕಾಲದಲ್ಲಿ ಮಂಜೂರಾತಿಗಾಗಿ ಸಲ್ಲಿಸುವಂತೆ ಹಲವಾರು ಬಾರಿ ಪತ್ರಗಳ ಮುಖೇನ ಸೂಚನೆ ನೀಡಲಾಗಿದೆ. ಆದರೆ, ಈ ಅಭ್ಯರ್ಥನಗಳನ್ನು ನೌಕರರಿಗೆ / ನಾಮಿನಿದಾರರಿಗೆ ಪಾವತಿಸಲು ವಿಳಂಬವಾಗುವುದಲ್ಲದೇ, ಭ.ನಿ ನಿಯಮಾನುಸಾರ ವಿಳಂಬ ಬಡ್ಡಿ ಪಾವತಿಸಬೇಕಿರುವುದರಿಂದ ನ್ಯಾಸ ಮಂಡಳಿಗೆ ಹೆಚ್ಚುವರಿ ಆರ್ಥಿಕ ಹೊರೆ ಉಂಟಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಸಾರಿಗೆ ಸಂಸ್ಥೆಯ ಕೆಲವು ವಿಭಾಗಗಳಿಂದ ನಿವೃತ್ತ ನೌಕರರು ಅಂತಿಮ ಅಭ್ಯರ್ಥನ ಪಾವತಿಗಳಲ್ಲಿ ವಿಳಂಬವಾಗಿರುವುದರಿಂದ ಹೆಚ್ಚುವರಿಯಾಗಿ ವಿಳಂಬಿತ ಅವಧಿಗೆ ಬಡ್ಡಿ ಪಾವತಿಸುವಂತೆ ನ್ಯಾಸ ಮಂಡಳಿಗೆ ಮನವಿ ಸಲ್ಲಿಸುತ್ತಿದ್ದಾರೆ. ಅಲ್ಲದೆ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಅರ್ಜಿ ಸಲ್ಲಿಸುತ್ತಿದ್ದಾರೆ.

ಹೀಗಾಗಿ ಈ ವಿಷಯದ ಬಗ್ಗೆ ಮಂಡಳಿ ಕಾರ್ಮಿಕ ಧರ್ಮದರ್ಶಿಗಳು ಭ.ನಿ. ನ್ಯಾಸ ಮಂಡಳಿಯ 274 ನೇ ಸಭೆಯಲ್ಲಿ ನಿವೃತ್ತಿ ಹೊಂದುವ ನೌಕರರಿಗೆ ನಿವೃತ್ತಿ ಹೊಂದಿದ ನಂತರದ ಮಾಹೆಯ 25ನೇ ತಾರೀಖಿನ ನಂತರ ಇತ್ಯರ್ಥವಾಗುವ ಅಭ್ಯರ್ಥನಗಳಿಗೆ ಬಡ್ಡಿ ಪಾವತಿಸಲಾಗುತ್ತಿಲ್ಲವೆಂದು ಅಧ್ಯಕ್ಷರ ಗಮನಕ್ಕೆ ತಂದಿದ್ದು, ಅದಕ್ಕೆ KSRTC ವ್ಯವಸ್ಥಾಪಕ ನಿರ್ದೇಶಕರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ನಿಗದಿತ ಅವಧಿಯೊಳಗೆ ಪಾವತಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಾಗಿ ಆದೇಶಿಸಿದ್ದಾರೆ.

ಆದ್ದರಿಂದ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಇನ್ನು ಮುಂದೆ ಪ್ರತಿ ಮಾಹೆಯ 15 ನೇ ತಾರೀಖಿನೊಳಗೆ ಭ.ನಿ./ ಐ.ಭ.ನಿ ಅಂತಿಮ ಅಭ್ಯರ್ಥನಗಳನ್ನು ಮಂಜೂರಾತಿಗಾಗಿ ನ್ಯಾನ ಮಂಡಳಿಗೆ ಸಲ್ಲಿಸುವಂತೆ, ಹಾಗೂ 25ನೇ ತಾರೀಖಿನೊಳಗೆ ಅಭ್ಯರ್ಥನಗಳನ್ನು ಪಾವತಿ ಮಾಡಲು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ವಿಭಾಗಗಳಿಂದ ಅನಗತ್ಯವಾಗಿ ವಿಳಂಬ ಉಂಟಾದಲ್ಲಿ ನಿವೃತ್ತ ನೌಕರರು/ ನಾಮಿನಿದಾರರಿಂದ ಬರುವ ದೂರುಗಳಿಗೆ ಹಾಗೂ ಅದರಿಂದ ನ್ಯಾಸ ಮಂಡಳಿಗೆ ಉಂಟಾಗುವ ಆರ್ಥಿಕ ನಷ್ಟಗಳಿಗೆ ಸಂಬಂಧಪಟ್ಟವರನ್ನು ನೇರ ಹೊಣೆಗಾರರನ್ನಾಗಿಸಲಾಗುವುದೆಂದು ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ.

Megha
the authorMegha

Leave a Reply

error: Content is protected !!
Latest news
ಟಿವಿಕೆ ಸರ್ಕಾರ ರಚನೆಗೆ ಸಂಖ್ಯಾಬಲದ ಅಡ್ಡಿ: ರಾಜ್ಯಪಾಲರ ಪವರ್ ಏನು, ಸುಪ್ರೀಂಕೋರ್ಟ್ ವಕೀಲರಾದ ಶಿವರಾಜು ಏನು ಹೇಳುತ್ತಾ... ರಾಜೀನಾಮೆ ನೀಡದೇ ಹೈಡ್ರಾಮಾ ಮಾಡಿದ್ದ ಮಮತಾ ಬ್ಯಾನರ್ಜಿ- ಸರ್ಕಾರ ವಜಾಗೊಳಿಸಿದ ರಾಜ್ಯಪಾಲ KSRTC: ನಿವೃತ್ತರಾದ 25ದಿನದೊಳಗೆ ಭವಿಷ್ಯ ನಿಧಿ ಪಾವತಿಸದಿದ್ದರೆ ಸಂಬಂಧಿಸಿದ ಅಧಿಕಾರಿಗಳೇ ವಿಳಂಬದ ಬಡ್ಡಿ ಬರಿಸಬೇಕು- ಪ... ಅನ್ನದಾತರಿಗೆ ಸಾಲ ಕೊಡಲು ಸಿಬಿಲ್ ಸ್ಕೋರ್ ತಾಳೆ ಹಾಕುವ ಪದ್ಧತಿ ಕೈಬಿಡಬೇಕು: ಆರ್‌ಬಿಐ ಅಧಿಕಾರಿಗಳಿಗೆ ಕುರುಬೂರು ಶಾಂತಕ... ಬಸ್–ತೈಲ ಟ್ಯಾಂಕರ್ ನಡುವೆ ಡಿಕ್ಕಿ: 16 ಮಂದಿ ಸಜೀವ ದಹನ, ಕ್ಷಣಾರ್ಧದಲ್ಲಿ ಹೊತ್ತಿ ಉರಿದ ವಾಹನಗಳು KSRTC ಸಂಸ್ಥೆಯ ನೌಕರರ ಬಾಳು ಹಸನು ಮಾಡಲು ಸಂಘಟನೆಗಳ ನಾಯಕರು ಒಗ್ಗಟ್ಟಾಗಿ: ಜೀವನ್ ಮಾರ್ಟಿಸ್ ಮನವಿ ಟನ್‌ ಕಬ್ಬಿಗೆ 4500 ರೂ. ನಿಗದಿಗೊಳಿಸಿ: ಕೇಂದ್ರ ಸರ್ಕಾರಕ್ಕೆ ಅತ್ತಹಳ್ಳಿ ದೇವರಾಜ್ ಆಗ್ರಹ ಟನ್‌ ಕಬ್ಬಿಗೆ 3650 ರೂ. ಎಫ್ಆರ್‌ಪಿ ದರ ಘೋಷಣೆ ಮಾಡಿರುವ ಕೇಂದ್ರ ಸರ್ಕಾರದ ನಡೆ ಸಲ್ಲ- 4500 ರೂ. ನಿಗದಿಗೊಳಿಸಬೇಕು: ಕ... KKRTC ವಿಜಯಪುರ: ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರಬರ ಭ್ರಷ್ಟಾಚಾರ ಸಾಬೀತು- ಆದರೂ ಕ್ರಮ ತೆಗೆದುಕೊಳ್ಳದ ಎಂಡ... KSRTC: ಪಲ್ಲಕ್ಕಿಯಲ್ಲಿ ಆಕಸ್ಮಿಕ ಬೆಂಕಿ- ಧಗಧಗಿಸಿದ ಬಸ್‌- ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ