NEWSದೇಶ-ವಿದೇಶರಾಜಕೀಯ

ಟಿವಿಕೆ ಸರ್ಕಾರ ರಚನೆಗೆ ಸಂಖ್ಯಾಬಲದ ಅಡ್ಡಿ: ರಾಜ್ಯಪಾಲರ ಪವರ್ ಏನು, ಸುಪ್ರೀಂಕೋರ್ಟ್ ವಕೀಲರಾದ ಶಿವರಾಜು ಏನು ಹೇಳುತ್ತಾರೆ?

ಸರಳ ಬಹುಮತಕ್ಕೆ ಬೇಕಾದ ಸಂಖ್ಯಾಬಲದ ಕೊರತೆಯನ್ನು ಎದುರಿಸುತ್ತಿರುವ ಟಿವಿಕೆ ಪಾರ್ಟಿಯ ನಾಯಕ ದಳಪತಿ ಜೋಸೆಫ್ ವಿಜಯ್, ರಾಜ್ಯಪಾಲರಾದ ವಿಶ್ವನಾಥ್ ಅರ್ಲೇಕರ್ ಅವರನ್ನು ಭೇಟಿಯಾಗಿ ಹಕ್ಕು ಮಂಡಿಸಿದ್ದಾರೆ. ಆದರೆ, ರಾಜ್ಯಪಾಲರು ನಿಮಗೆ ಬಹುಮತವಿಲ್ಲ, ಸರ್ಕಾರ ರಚಿಸಲು ಆಹ್ವಾನಿಸಲು ಸಾಧ್ಯವಿಲ್ಲ, ಬೇಕಾಗಿರುವ ಬೆಂಬಲ ತೆಗೆದುಕೊಂಡು ಬನ್ನಿ ಎಂದು ವಾಪಸ್ ಕಳುಹಿಸಿದ್ದಾರೆ. ಭಾರತದ ಸಂವಿಧಾನದಲ್ಲಿ ರಾಜ್ಯಪಾಲರಿಗೆ ಇರುವ ಬೌಂಡರಿ ಏನು ಎಂಬುದರ ಬಗ್ಗೆ ಸುಪ್ರೀಂ ಕೋರ್ಟ್‌ ವಕೀಲ ಎಚ್‌.ಬಿ.ಶಿವರಾಜು ಏನು ಹೇಳಿದ್ದಾರೆ ನೋಡೋಣ ಬನ್ನಿ.

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು/ ಚೆನ್ನೈ: ಸರ್ಕಾರ ರಚಿಸಲು ಜೋಸೆಫ್ ವಿಜಯ್ ಹಕ್ಕು ಮಂಡಿಸಿದರೂ, ರಾಜ್ಯಪಾಲರಾದ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಇದಕ್ಕೆ ಒಪ್ಪದೇ, 118 ಶಾಸಕರ ಬೆಂಬಲ ತೆಗೆದುಕೊಂಡು ಬರುವಂತೆ ಸೂಚಿಸಿದ್ದಾರೆ. ಜತೆಗೆ, ಹಳೆಯ ವಿಧಾನಸಭೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ವಿಸರ್ಜಿಸಿದ್ದಾರೆ. ಈ ನಡುವೆ, ವಿಜಯ್’ಗೆ ಬೆಂಬಲ ಸಾಬೀತು ಪಡಿಸಲು ಹೇಳುವ ಕಾನೂನು ರಾಜ್ಯಪಾಲರಿಗೆ ಇದೆಯೇ ಎನ್ನುವುದು ಚರ್ಚೆಯಲ್ಲಿದೆ.

ತಮಿಳುನಾಡಿನಲ್ಲಿ ಎರಡು ದ್ರಾವಿಡ ಪಾರ್ಟಿಗಳ ಪ್ರಾಬಲ್ಯವನ್ನು ಮುರಿದು, 108 ಸ್ಥಾನವನ್ನು ಗೆದ್ದಿರುವ ಟಿವಿಕೆ ಪಾರ್ಟಿಗೆ, ಇನ್ನೂ ಹನ್ನೊಂದು ಸ್ಥಾನದ ಅವಶ್ಯಕತೆಯಿದೆ. 108 ಸ್ಥಾನ ಗೆದ್ದಿದ್ದರೂ, ವಿಜಯ್ ಎರಡು ಸ್ಥಾನದಲ್ಲಿ ಗೆದ್ದಿರುವ ಹಿನ್ನೆಲೆಯಲ್ಲಿ, ಪ್ರಾಕ್ಟಿಕಲ್ ಆಗಿ, ವಿಜಯ್’ಗೆ ಇನ್ನೂ ಹನ್ನೊಂದು ಸ್ಥಾನದ ಅವಶ್ಯಕತೆಯಿದೆ. ಹಾಗಾಗಿ, ಇಷ್ಟು ಶಾಸಕರ ಬೆಂಬಲ ಸದ್ಯಕ್ಕೆ ನಿಮಗಿಲ್ಲ, ಹಾಗಾಗಿ, ಸರ್ಕಾರ ರಚಿಸಲು ಆಹ್ವಾನಿಸಲು ಸಾಧ್ಯವಿಲ್ಲ ಎಂದು ರಾಜ್ಯಪಾಲರು ಹೇಳಿದ್ದಾರೆ. ಹಾಗಾದರೆ, ಮುಂದೇನು?

ಸದನದಲ್ಲಿ ಬಹುಮತ ಸಾಬೀತು ಮಾಡಲು ರಾಜ್ಯಪಾಲರು ಸೂಚಿಸಬಹುದು: ಸರ್ಕಾರ ರಚಿಸಲು ಹಕ್ಕುಮಂಡನೆ ಮಾಡುವ ಪಾರ್ಟಿಗೆ ಸರಳ ಬಹುಮತಕ್ಕೆ ಬೇಕಾದ ನಂಬರ್ ಇದೆಯೋ, ಇಲ್ಲವೋ ಎನ್ನುವುದನ್ನು ಖಚಿತ ಪಡಿಸಿಕೊಳ್ಳುವ ಸಾಂವಿಧಾನಿಕ ಹಕ್ಕು ರಾಜ್ಯಪಾಲರಿಗಿದೆ. ಇದನ್ನು ಸಂವಿಧಾನದ ಆರ್ಟಿಕಲ್ 164ರ ಅಡಿಯಲ್ಲಿ ನಿರ್ಧರಿಸಲಾಗಿದೆ. ಸದನದಲ್ಲಿ ಬಹುಮತವನ್ನು ಸಾಬೀತು ಪಡಿಸಲು (Floor Test) ರಾಜ್ಯಪಾಲರು ಸೂಚಿಸಬಹುದು. ಆದರೆ, ಪ್ರಮಾಣವಚನ ಬೋಧಿಸಲು ಇದು ಅಡ್ಡಿಯಾಗಬಾರದು. ಒಂದು ವೇಳೆ, ಪ್ರಮಾಣವಚನ ಬೋಧಿಸದೇ ಇದ್ದಲ್ಲಿ, ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದಾಗಿದೆ. ಇದಕ್ಕೆ, ಹಿಂದಿನ ಎಸ್ಆರ್ ಬೊಮ್ಮಾಯಿ ಕೇಸ್ ಒಂದು ನಿದರ್ಶನವಾಗಿದೆ ಎಂದು ಶಿವರಾಜು ಹೇಳಿದ್ದಾರೆ.

ಏನಿದು ಎಸ್ಆರ್ ಬೊಮ್ಮಾಯಿ ಪ್ರಕರಣ, 1994ರ ವಿದ್ಯಮಾನ ಏನು?: 1994ರಲ್ಲಿ ದೇಶದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದ ನಮ್ಮ ಕರ್ನಾಟಕದ ಎಸ್.ಆರ್.ಬೊಮ್ಮಾಯಿ ಪ್ರಕರಣ ಮತ್ತು ಇಂದಿನ ತಮಿಳುನಾಡಿನ ಪ್ರಕರಣಕ್ಕೆ ನಿದರ್ಶನವಾಗಬಹುದು. ಎಸ್.ಆರ್.ಬೊಮ್ಮಾಯಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣವು ಸರ್ವೋಚ್ಚ ನ್ಯಾಯಾಲಯಾದ ಮೆಟ್ಟಲೇರಿತ್ತು. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ, ನಿರ್ದಿಷ್ಟ ಅವಧಿಯಲ್ಲಿ (7 – 15 ದಿನದೊಳಗೆ) ಬಹುಮತವನ್ನು ಸಾಬೀತು ಮಾಡಲು ರಾಜ್ಯಪಾಲರು ಸೂಚಿಸಬೇಕು. ಇದು, ಸದನದಲ್ಲಿ ನಡೆಯುವ ಪ್ರಕ್ರಿಯೆ ಎಂದು ಸರ್ವೋಚ್ಚ ನ್ಯಾಯಾಲಯ ಸ್ಪಷ್ಟವಾಗಿ ಈ ಪ್ರಕರಣದಲ್ಲಿ ಆದೇಶವನ್ನು ನೀಡಿತ್ತು.

ಸಂವಿಧಾನ ಏನು ಹೇಳುತ್ತೆ, ರಾಜ್ಯಪಾಲರಿಗೆ ಅಧಿಕಾರದ ಬೌಂಡರಿ ಏನು?: ಸರ್ಕಾರದ ಸಂಖ್ಯಾಬಲದ ಪರೀಕ್ಷೆ ಸದನದಲ್ಲಿ ನಡೆಯಬೇಕೇ ಹೊರತು ರಾಜಭವನದಲ್ಲಿ ಅಲ್ಲ ಎಂದು ಸುಪ್ರೀಂ, ಬೊಮ್ಮಾಯಿ ಪ್ರಕರಣದಲ್ಲಿ ಹೇಳಿತ್ತು. ಒಂದು ವೇಳೆ, ಹಕ್ಕು ಮಂಡನೆ ಮಾಡುವ ಪಾರ್ಟಿಯು ಕೊಡುವ ಶಾಸಕರ ಬೆಂಬಲದ ಪತ್ರದ ಬಗ್ಗೆ ರಾಜ್ಯಪಾಲರಿಗೆ ಮನವರಿಕೆ ಆಗದೇ ಇದ್ದಲ್ಲಿ, ಶಾಸಕರ ಭೌತಿಕ ಪರಿಶೀಲನೆ (Physical Verification) ನಡೆಸುವ ಅಥವಾ ವೈಯಕ್ತಿಕ ಬೆಂಬಲ ಪತ್ರವನ್ನು ರಾಜ್ಯಪಾಲರು ಕೇಳಬಹುದು. ಹಾಗಾಗಿ, ಸದ್ಯದ ತಮಿಳುನಾಡು ಕೇಸಿನಲ್ಲಿ, ರಾಜ್ಯಪಾಲರು, ಟಿವಿಕೆ ಯಾವಯಾವ ಪಾರ್ಟಿಗಳ ಜತೆ ಹೊಂದಾಣಿಕೆಯನ್ನು ಮಾಡಿಕೊಳ್ಳುತ್ತಿದೆಯೋ, ಆ ಪಾರ್ಟಿಗಳ ನಾಯಕರ ಸಹಿ ಇರುವ ಅಧಿಕೃತ ದಾಖಲೆ ಬರುವವರೆಗೆ ರಾಜ್ಯಪಾಲರು ಕಾಯಬಹುದು ಎಂದು ಹೇಳಿದ್ದಾರೆ.

ಇನ್ನು ಈ ನಡುವೆ ಎಐಎಡಿಎಂಕೆಯ 47 ಶಾಸಕರ ಪೈಕಿ, 30 ಶಾಸಕರು ಟಿವಿಕೆಗೆ ಬೆಂಬಲಿಸಲು ಸಿದ್ದವಿದ್ದರೂ, ಬುಧವಾರ (ಮೇ 6) ತಡರಾತ್ರಿ, ತಡರಾತ್ರಿ ಪಾರ್ಟಿ ಇದಕ್ಕೆ ಸ್ಪಷ್ಟನೆಯನ್ನು ನೀಡಿದೆ. ನಮ್ಮ ಯಾವ ಶಾಸಕರೂ, ಟಿವಿಕೆಗೆ ಹೋಗುವುದಿಲ್ಲ ಎಂದು ಹೇಳಿದೆ. ಕಾಂಗ್ರೆಸ್ಸಿನ ಐದು ಶಾಸಕರ ಬೆಂಬಲದ ನಂತರವೂ, ವಿಜಯ್’ಗೆ ಇನ್ನೂ, ಆರು ಶಾಸಕರ ಬೆಂಬಲದ ಅವಶ್ಯಕತೆಯಿದೆ. ಹಾಗಾಗಿ, ಪ್ರಮಾಣವಚನ ಕಾರ್ಯಕ್ರಮ ಮುಂದಕ್ಕೆ ಹೋಗಿದೆ. ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು, ಟಿವಿಕೆಯ ಎಲ್ಲ ಶಾಸಕರನ್ನು ಚೆನ್ನೈ ಹೊರವಲಯದ ಐಷಾರಾಮಿ ಮಾಮಲ್ಲಪುರಂನಲ್ಲಿರುವ ಫೋರ್ ಪಾಯಿಂಟ್ಸ್ ರೆಸಾರ್ಟಿಗೆ ಸ್ಥಳಾಂತರಿಸಲಾಗಿದೆ.

Deva
the authorDeva

Leave a Reply

error: Content is protected !!
Latest news
ಜೀವನದಲ್ಲಿ ದಿನಂಪ್ರತಿ ಯೋಗಾಭ್ಯಾಸ ಅಳವಡಿಸಿಕೊಳ್ಳಿ: ಡಿಸಿ ಡಾ. ಅನುರಾಧ ಕರೆ ಕೆರೆಗೆ ವೈದ್ಯಕೀಯ ತ್ಯಾಜ್ಯ ಹಾಕಿದ ಆರೋಪ: ಡಾಕ್ಟರ್ ವಿರುದ್ಧ ಎಫ್‌ಐಆರ್ ದಾಖಲು ಬಿಡದಿ ಟೌನ್‌ಶಿಪ್ ವಿರುದ್ಧ ಜೆಡಿಎಸ್‌ ಬೃಹತ್‌ ಪಾದಯಾತ್ರೆ- ಇದು ಕೇವಲ ಭಾಷಣಕ್ಕಷ್ಟೇ ಅಲ್ಲ: ನಿಖಿಲ್ ಕುಮಾರಸ್ವಾಮಿ ಎಚ್... ನಿಂತಿರುವ ಕಾಲೇಜು ವಿದ್ಯಾರ್ಥಿ ಚುನಾವಣೆ ಇದೇ ವರ್ಷದಿಂದ ಮತ್ತೆ ಆರಂಭ: ಸಿಎಂ ಡಿಕೆಶಿ ಅಪ್ಪ ಅಂದ್ರೆ ಭಯ- ಧೈರ್ಯ ಅಪ್ಪ ಅಂದ್ರೆ ಭವಿಷ್ಯದ ಗುರು ಅಪ್ಪ ಅಂದ್ರೆ ಆಲದ ಮರ ಇದಾವುದು ಅಲ್ಲ ಪದಗಳಿಗೆ ನಿಲುಕದ ದೈವ ಗ್ರಾಚ್ಯುಟಿ ಸೇರಿ 10 ಆದಾಯಗಳ ಮೇಲೆ ಸರ್ಕಾರ ಯಾವುದೇ ತೆರಿಗೆ ವಿಧಿಸಲ್ಲ KSRTC: ಅತೀ ಶೀಘ್ರದಲ್ಲೇ ಶೇ.15ರಿಂದ 20ರಷ್ಟು ಬಸ್‌ ಪ್ರಯಾಣ ದರ ಏರಿಕೆ- ಸುಳಿವುಕೊಟ್ಟ ಮುಖ್ಯಮಂತ್ರಿ ಡಿಕೆಶಿ ವಿದ್ಯುತ್‌ ಖಾಸಗೀಕರಣ ನಿಲ್ಲಿಸಲು ಆಗ್ರಹಿಸಿ ಅತ್ತಹಳ್ಳಿ ದೇವರಾಜ್ ನೇತೃತ್ವದಲ್ಲಿ ಪ್ರತಿಭಟನೆ NWKRTC: ಡೋರ್‌ ಹಾಕದಿದ್ದರೆ, ಚಾಲಕರ ಬಳಿ ಕುಳಿತಿದ್ದರೆ ಕಂಡಕ್ಟರ್‌ ವಿರುದ್ಧ ಪ್ರಕರಣ ದಾಖಲಿಸಿ- ತನಿಖಾಧಿಕಾರಿಗಳಿ ಡಿಸ... 4-6 ತಿಂಗಳಿನಲ್ಲಿ ಬೆಂಗಳೂರಿನ ರಸ್ತೆಗಳಿಗೆ ಹೊಸ ಲುಕ್‌: ಸಚಿವ ಕೃಷ್ಣ ಬೈರೇಗೌಡ