BMTC ನೌಕರರಿಗೆ ಮೇ 19ರಂದು 11 ತಿಂಗಳ ಹಿಂಬಾಕಿ ಪಾವತಿಗೆ ಕ್ರಮ- ಎಂಡಿ ಆದೇಶಕ್ಕೂ ಕಿಮ್ಮತ್ತಿಲ್ಲದರ ಪರಿಣಾಮ ಈ ವಿಳಂಬ!
ಸಾರಿಗೆ ಮೂರು ನಿಗಮಗಳಲ್ಲೂ ಮೇ 11-12ರಂದೇ ಹಿಂಬಾಕಿ ಪಾವತಿಯಾಗಿದೆ ಆದರೆ ಬಿಎಂಟಿಸಿಯಲ್ಲಿ ಎಂಡಿ ಆದೇಶ ಪಾಲಿಸದೆ ಅಧಿಕಾರಿಗಳು/ ಸಿಬ್ಬಂದಿಗಳು ಉದಾಸೀನ ಧೋರಣೆ ತೋರಿಸಿದ್ದಾರೆ. ಇದೇ ಈ ವಿಳಂಬಕ್ಕೆ ಕಾರಣ ಎಂಬ ಆರೋಪ ಕೇಳಿ ಬಂದಿದೆ.

ಬೆಂಗಳೂರು: ಸಾರಿಗೆ ಸಂಸ್ಥೆಗಳ ನೌಕರರಿಗೆ 26 ತಿಂಗಳ ಹಿಂಬಾಕಿ ನೀಡುವ ನಿರ್ಧಾರ ಮಾಡಿ ಏ.29ರಂದು ಮೊದಲ ಹಂತವಾಗಿ ನಾಲ್ಕೂ ನಿಗಮಗಳ ನೌಕರರಿಗೆ 450 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈವರೆಗೂ KSRTC, KKRTC ಮತ್ತು NWKRTC ನೌಕರರ ಬ್ಯಾಂಕ್ ಖಾತೆಗೆ ಈಗಾಗಲೇ ಹಣ ಜಮೆ ಆಗಿದೆ.

ಆದರೆ, ಬೆಂಗಳೂರು ಮಹಾನಗರ ಸಾರಿಗೆ ನಿಗಮದ ನೌಕರರಿಗೆ 11 ತಿಂಗಳ ಹಿಂಬಾಕಿ ಈವರೆಗೂ ಜಮೆ ಆಗಿಲ್ಲ. ಹೀಗಾಗಿ ನೌಕರರು ನಮಗೆ ಯಾವಾಗ ಹಿಂಬಾಕಿ ಬರಲಿದೆ ಎಂಬ ಅಧಿಕೃತ ಮಾಹಿತಿ ಇಲ್ಲದೆ ಗೊಂದಲದಲ್ಲಿದ್ದಾರೆ.
ಹೀಗಾಗಿ ವಿಜಯಪಥ ಸಂಬಂಧಪಟ್ಟ ಸಂಸ್ಥೆಯ ಅಧಿಕಾರಿಗಳನ್ನು ಫೋನ್ ಮೂಲಕ ಸಂಪರ್ಕಿಸಿ ಮಾಹಿತಿ ಪಡೆದುಕೊಂಡಿದ್ದು, ಮೊದಲ ಹಂತದಲ್ಲಿ ಬಿಡುಗಡೆಯಾಗಿರುವ 450 ಕೋಟಿ ರೂ.ಗಳಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (BMTC): 137.24 ಕೋಟಿ ರೂ. ಬಿಡುಗಡೆಯಾಗಿರುವ ಹಣವನ್ನು ನೌಕರರ ಬ್ಯಾಂಕ್ ಖಾತೆಗೆ ಇದೇ ಮೇ 19ರ ಮಂಗಳವಾರ ಪಾವತಿಸಲಾಗುವುದು ಎಂದು ಹೇಳಿದ್ದಾರೆ.
ಈ ಸಂಬಂಧ ಕೇಂದ್ರ ಕಚೇರಿಯಲ್ಲಿ ಬಿಎಂಟಿಸಿ ಎಂಡಿ ಅಧ್ಯಕ್ಷತೆಯಲ್ಲಿ ನಿಗಮದ ಎಲ್ಲ ವಿಭಾಗಗಳ ಅಧಿಕಾರಿಗಳ ಸಭೆ ಕಳೆದ 6ದಿನಗಳ ಹಿಂದೆಯೇ ನಡೆದಿದ್ದು, ಈ ಸಭೆಯಲ್ಲಿ ಮೊದಲ ಹಂತದಲ್ಲಿ ಬಿಡುಗಡೆಯಾಗಿರುವ 450 ಕೋಟಿ ರೂಪಾಯಿಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (BMTC): 137.24 ಕೋಟಿ ರೂ. ಸಿಕ್ಕಿದೆ. ಈ ಹಣದಲ್ಲಿ ಎಲ್ಲ ನೌಕರರಿಗೂ ಹಿಂಬಾಕಿ ಪಾವತಿಸಬೇಕಿದ್ದು, ಪ್ರತಿ ನೌಕರರಿಗೂ 11 ತಿಂಗಳ ಹಿಂಬಾಕಿ ಪಾವತಿ ಇದರಿಂದ ಸಾಧ್ಯವಾಗಲಿದೆ.
ಹೀಗಾಗಿ ಮೇ 19ರಂದು ಎಲ್ಲ ನೌಕರರ ಬ್ಯಾಂಕ್ ಖಾತೆಗೆ ಪಾವತಿಸುವಂತೆ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ ಉಳಿದ 15 ತಿಂಗಳ ವೇತನ ಹಿಂಬಾಕಿಯನ್ನು ಎರಡನೇ ಹಂತದಲ್ಲಿ 7 ಅಥವಾ 8 ತಿಂಗಳ ಹಿಂಬಾಕಿ ಪಾವತಿಸಲಾಗುವುದು ಆ ಬಳಿಕ ಮೂರನೇ ಹಂತದಲ್ಲಿ ಉಳಿದ ತಿಂಗಳುಗಳ ಹಿಂಬಾಕಿ ಪಾವತಿಸಲು ಕ್ರಮ ತೆಗೆದುಕೊಳ್ಳುವ ಬಗ್ಗೆ ತೀರ್ಮಾನಿಸಲಾಗಿದೆ.
ಆದರೆ, ಮೊದಲ ಹಂತವಾಗಿ ಸರ್ಕಾರ 450 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದ್ದು, ಇನ್ನುಳಿದ ಹಣವನ್ನು ಸರ್ಕಾರ ಯಾವಾಗ ಬಿಡುಗಡೆ ಮಾಡುತ್ತದೋ ಆಗ ಅದನ್ನು ಸಹ ತಕ್ಷಣವೇ ನೌಕರರ ಬ್ಯಾಂಕ್ ಖಾತೆಗೆ ಜಮಾ ಮಾಡುವುದಾಗಿ ಸಭೆಯಲ್ಲಿ ಚರ್ಚೆಯಾಗಿದೆ.
ಅಧಿಕಾರಿಗಳ ತಾಳಕ್ಕೆ ಕುಣಿಯುವ ಎಂಡಿ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಎಂಡಿಯಾಗಿರುವ ಶಿವಕುಮಾರ್ ಅವರ ಆದೇಶವನ್ನು ನಿಗಮದ ಅಧಿಕಾರಿಗಳು ಪಾಲಿಸುವಲ್ಲಿ ಉದಾಸೀನತೆ ತೋರಿತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಕಾರಣ ಇವರು ಸಂಸ್ಥೆಗೆ ಎಂಡಿ ಆಗಿ ಬಂದಾಗಿನಿಂದ ಈವರೆಗೂ ಸಂಸ್ಥೆಯ ನೌಕರರಿಗೆ ಸಂಬಂಧಪಟ್ಟ ಯಾವೊಂದು ಸಮಸ್ಯೆಯನ್ನು ಆಲಿಸುವ ಸೌಜನ್ಯ ತೋರಿಸಿಲ್ಲ ಬದಲಿಗೆ ಕೆಲ ಅಧಿಕಾರಿಗಳು ಒಪ್ಪಿಸುವ ವರದಿಯನ್ನಷ್ಟೇ ಕೇಳಿ ಕೊಂಡು ದಿನ ದೂಡುತ್ತಿದ್ದಾರೆ ಎಂದು ಕೆಲ ಅಧಿಕಾರಿಗಳೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಪ್ರಮುಖವಾಗಿ ಸಾರಿಗೆ ನಿಗಮಗಳ ಮೂರು ಸಂಸ್ಥೆಗಳಲ್ಲೂ ನೌಕರರಿಗೆ ಹಿಂಬಾಕಿಯನ್ನು ಈಗಾಗಲೇ ಅವರ ಬ್ಯಾಂಕ್ ಖಾತೆಗಳಿಗೆ ಹಾಕಲಾಗಿದೆ. ಆದರೆ, ಬಿಎಂಟಿಸಿಯಲ್ಲಿ ಆ ಕೆಲಸ ಇನ್ನೂ ಆಗಿಲ್ಲ ಕಾರಣ ಎಂಡಿ ತನ್ನ ಕರ್ತವ್ಯವನ್ನು ಸರಿಯಾಗಿ ಮಾಡುತ್ತಿಲ್ಲ. ಇದರಿಂದ ಅಧಿಕಾರಿಗಳು ಇವರ ಹಿಡಿತದಲ್ಲಿ ಇಲ್ಲದಿರುವುದರಿಂದ ಈ ರೀತಿ ವಿಳಂವಾಗುತ್ತಿದೆ. ಇಂಥ ಎಂಡಿ ಸಂಸ್ಥೆಗೆ ಬೇಕ ಎಂದು ಪ್ರಶ್ನಿಸುತ್ತಿದ್ದಾರೆ.
ಕಳೆದ 2025ರ ಅಕ್ಟೋಬರ್‌ನಲ್ಲಿ ಸಂಸ್ಥೆಯ ಎಂಡಿಯಾಗಿ ಅಧಿಕಾರ ವಹಿಸಿಕೊಂಡಿರುವ ಇವರು ಈವರೆಗೂ ನೌಕರರಿಗೆ ಅನುಕೂಲಕರವಾಗುವ ಅಥವಾ ನೌಕರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಎಲ್ಲಿಯೂ ಹೇಳಿಕೆ ನೀಡಿಲ್ಲ. ಜತೆಗೆ ಅವರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ನಿಟ್ಟಿನಲ್ಲೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂಬ ಆರೋಪವಿದೆ.
ಪ್ರಸ್ತುತ ತಾಜಾ ನಿದರ್ಶನ ಎಂಬಂತೆ ಹಿಂಬಾಕಿ ಹಣವನ್ನು ನೌಕರರ ಬ್ಯಾಂಕ್ ಖಾತೆಗೆ ಜಮಾ ಮಾಡುವುದಕ್ಕೆ ಬೇಕಾದ ಮಾಹಿತಿಯನ್ನು ಸಂಬಂಧಪಟ್ಟ ಸಿಬ್ಬಂದಿ/ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಸಂಗ್ರಹಿಸಿ ಕೊಡದೆ ಉದಾಸೀನತೆಯಿಂದ ನಡೆದುಕೊಂಡಿರುವುದಕ್ಕೇ ಈ ರೀತಿ ವಿಳಂಬವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಇನ್ನಾದರು ತಾವು ಒಬ್ಬ ಉನ್ನತ ಸ್ಥಾನದಲ್ಲಿರುವ ಭಾಆಸೆ ಅಧಿಕಾರಿಯಾಗಿರುವುದರಿಂದ ನಿಮ್ಮ ವ್ಯಾಪ್ತಿ ತುಂಬ ವಿಸ್ತರಿಸಿರುವುದರಿಂದ ಕೆಲ ಹಂತದ ಅಧಿಕಾರಿಗಳ ಕೈ ಗೊಂಬೆಯಾಗಬೇಡಿ ಎಂಬುವುದು ವಿಜಯಪಥದ ಕಳಕಳಿಯಾಗಿದೆ.
Related









