NEWSದೇಶ-ವಿದೇಶ

ಬಂಡವಾಳ ಹೂಡಿಕೆಗೆ ಭಾರತ ಪ್ರಶಸ್ತ ಸ್ಥಳ: ಪ್ರಧಾನಿ ಮೋದಿ

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ದೇಶದ ನಗರ ಪ್ರದೇಶಗಳಲ್ಲಿ ಬಂಡವಾಳ ಹೂಡುವಂತೆ ಹೂಡಿಕೆದಾರರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಮೂರನೇ ವಾರ್ಷಿಕ ಬ್ಲೂಮ್​ಬರ್ಗ್ ನ್ಯೂ ಎಕನಾಮಿ ಫೋರಂ ಉದ್ದೇಶಿಸಿ ವಿಡಿಯೋ ಕಾನ್ಫೆರೆನ್ಸಿಂಗ್ ಮೂಲಕ ಮಾತನಾಡಿದ ಪ್ರಧಾನಿ, ಕೊರೊನಾ ವೈರಸ್ ಪಿಡುಗಿನಿಂದ ಚೇತರಿಸಿಕೊಂಡು ಆರ್ಥಿಕತೆಯ ಪುನರ್ನಿರ್ಮಾಣಕ್ಕೆ ಪ್ರಯತ್ನಿಸುತ್ತಿರುವ ಭಾರತದಲ್ಲಿ ಬಂಡವಾಳ ಹೂಡಿಕೆಗೆ ವಿಪುಲ ಅವಕಾಶಗಳಿವೆ ಎಂದು ಹೇಳಿದರು.

ಭಾರತವನ್ನು ಜಾಗತಿಕ ಹೂಡಿಕೆಗೆ ಆದ್ಯತಾ ಸ್ಥಳವನ್ನಾಗಿ ಮಾಡುವ ನಿಟ್ಟಿನಲ್ಲಿ ಏನು ಕ್ರಮ ಬೇಕಾದರೂ ಕೈಗೊಳ್ಳಲು ಸಿದ್ಧವಿರುವ ಸರ್ಕಾರ ಇಲ್ಲಿದೆ ಹೀಗಾಗಿ ನೀವು ನಗರೀಕರಣ ಕಾರ್ಯಗಳಿಗೆ ಹೂಡಿಕೆ ಮಾಡುವ ಉದ್ದೇಶ ಹೊಂದಿದ್ದರೆ ಭಾರತದಲ್ಲಿ ಆಕರ್ಷಕ ಅವಕಾಶಗಳಿವೆ. ಸಂಚಾರ ಸೌಕರ್ಯಕ್ಕೆ ಹೂಡಿಕೆ ಮಾಡಬೇಕೆಂದಿದ್ದರೆ ಅದಕ್ಕೂ ಭರ್ಜರಿ ಅವಕಾಶಗಳಿವೆ. ನಾವೀನ್ಯತೆ (Innovation) ವಲಯದಲ್ಲಿ ಹೂಡಿಕೆ ಮಾಡುವುದಿದ್ದರೆ ಪ್ರಶಸ್ತ ಸ್ಥಳವಾಗಿದೆ. ಸುಸ್ಥಿರ ಪರಿಹಾರದಲ್ಲೂ ಹೂಡಿಕೆಗೆ ದೇಶ ಹೇಳಿ ಮಾಡಿಸಿದ ಸ್ಥಳವಾಗಿದೆ. ಒಂದು ಒಳ್ಳೆಯ ಪ್ರಜಾಪ್ರಭುತ್ವ ವ್ಯವಸ್ಥೆ ಅಡಿಯಲ್ಲೇ ಈ ಎಲ್ಲಾ ಅವಕಾಶಗಳಿವೆ. ವ್ಯವಹಾರ ಸ್ನೇಹಿ ವಾತಾವರಣ ಹಾಗೂ ವಿಶಾಲ ಮಾರುಕಟ್ಟೆ ಇಲ್ಲಿದೆ ಎಂದು ಮೋದಿ ತಿಳಿಸಿದರು.

ಒಂದು ಸಮಾಜವಾಗಿ ಹಾಗೂ ವ್ಯವಹಾರವಾಗಿ ಜನರೇ ನಮ್ಮ ಅತಿದೊಡ್ಡ ಸಂಪನ್ಮೂಲ ಎಂಬುದು ಕೋವಿಡ್ ಸಂಕಷ್ಟದ ಪರಿಸ್ಥಿತಿ ವೇದ್ಯಗೊಳಿಸಿದೆ. ಇಂಥ ಪ್ರಮುಖ ಮತ್ತು ಮೂಲಭೂತ ಸಂಪನ್ಮೂಲವನ್ನು ಉಳಿಸಿ ಪೋಷಿಸಲು ಅನುವಾಗುವಂತೆ ವಿಶ್ವದ ನವನಿರ್ಮಾಣ ಆಗಬೇಕಿದೆ” ಎಂದು ಅಭಿಪ್ರಾಯ ಪಟ್ಟರು.

2022ರ ಒಳಗೆ ದೇಶದಲ್ಲಿ ಒಂದು ಸಾವಿರ ಕಿಲೋಮೀಟರ್​ಗಳ ಮೆಟ್ರೋ ರೈಲು ವ್ಯವಸ್ಥೆ ರೂಪಿಸುತ್ತಿದ್ದೇವೆ. ನೂರು ಸ್ಮಾರ್ಟ್ ಸಿಟಿ ಯೋಜನೆಗಳು ಎರಡನೇ ಹಂತ ಪ್ರವೇಶಿಸಿವೆ. ಈ ಸ್ಮಾರ್ಟ್ ನಗರಗಳು 2 ಲಕ್ಷ ಕೋಟಿ ರೂಪಾಯಿಯಷ್ಟು ಮೌಲ್ಯದ ಕಾಮಗಾರಿ ಯೋಜನೆಗಳನ್ನ ಸಿದ್ಧಗೊಳಿಸಿವೆ. 1.4 ಲಕ್ಷ ಕೋಟಿಯಷ್ಟು ಯೋಜನೆಗಳು ಬಹುತೇಕ ಮುಕ್ತಾಯಗೊಂಡಿವೆ” ಎಂದು ಹೂಡಿಕೆದಾರರಿಗೆ ಪ್ರಧಾನಿ ಮಾಹಿತಿ ನೀಡಿದರು.

ಹೀಗೆ ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ, ಸ್ಟಾರ್ಟಪ್ ಇಂಡಿಯಾ, ಅಗ್ಗದ ಗೃಹ ವ್ಯವಸ್ಥೆ, ರಿಯಲ್ ಎಸ್ಟೇಟ್ ಕಾಯ್ದೆ, ಮೆಟ್ರೋ ರೈಲು, ಸ್ಮಾರ್ಟ್ ಸಿಟಿ ಮೊದಲಾದ ಯೋಜನೆಗಳನ್ನು ಮೋದಿ ಇದೇ ವೇಳೆ ಪ್ರಸ್ತಾಪಿಸಿದರು.

Leave a Reply

error: Content is protected !!
LATEST
ಆಟೋಟದಲ್ಲಿ ಕೂಟದ ಕಟ್ಟಾಳುಗಳು ಬ್ಯುಸಿ: ನೌಕರರು ನಂಬಿ 4ವರ್ಷ ಕಳೆದರೂ ಈಡೇರೇಯಿಲ್ಲ ಬೇಡಿಕೆ - ದಿಕ್ಕು ತಪ್ಪುತ್ತಿದೆಯೇ ... BMTC ಬಸ್‌-ಟ್ರಕ್‌-ಇನೋವಾ ಕಾರು ನಡುವೆ ಸರಣಿ ಅಪಘಾತ: ಇಬ್ಬರು ಮೃತ, ಬಸ್‌ ಚಾಲಕನ ಸ್ಥಿತಿ ಗಂಭೀರ KSRTC: ಕೂಟದ ಅಜೆಂಡ ದಿಕ್ಕು ತಪ್ಪುತ್ತಿದೆಯೇ - ಸರಿ ಸಮಾನ ವೇತನದ ಪಾಡೇನು? 8ಕಿಮೀ BMTC ಬಸ್‌ ಹಿಂಬಾಲಿಸಿಕೊಂಡು ಬಂದು ಚಾಲಕನ ಮೇಲೆ ಹಲ್ಲೆಮಾಡಿ ಪೊಲೀಸರ ಅತಿಥಿಯಾದ ಬೈಕ್‌ ಸವಾರ ಸರಿ ಸಮಾನ ವೇತನಕ್ಕೆ ಅಡ್ಡಗಾಲು ಹಾಕುವುದನ್ನು ಈಗಲಾದರೂ ಬಿಡಿ- ಸಾರಿಗೆ ಅಧಿಕಾರಿಗಳು-ನೌಕರರ ಆಗ್ರಹ ತೆರಿಗೆ ಬಾಕಿ ಉಳಿಸಿಕೊಂಡಿರುವ ವಸತಿಯೇತರ ಕಟ್ಟಡಗಳಿಗೆ ಬೀಗಹಾಕಿ ವಸೂಲಿ ಮಾಡಿ: ತುಷಾರ್ ಗಿರಿನಾಥ್ ಅಂಗನವಾಡಿ ನೌಕರರ ಸರ್ಕಾರಿ ನೌಕರರಾಗಿ ಪರಿಗಣಿಸಿ: ಹೈಕೋರ್ಟ್ ತೀರ್ಪಿನಿಂದ ಕರ್ನಾಟಕದ ಅಂಗನವಾಡಿ ನೌಕರರಿಗೂ ಬಲ ವೀರವನಿತೆ ಒನಕೆ ಓಬವ್ವ ಜಯಂತಿ: ಮಹಿಳೆಯರು ಶೌರ್ಯ, ಧೈರ್ಯ ಬೆಳೆಸಿಕೊಳ್ಳಿ-ಸಚಿವ ಮುನಿಯಪ್ಪ ಮೈಸೂರಿನಲ್ಲಿ ಸಚಿವರಿಗೆ ಕಪಾಳ ಮೋಕ್ಷ: ಎಚ್‌ಡಿಕೆ ಆರೋಪ ಸುಳ್ಳು ಎಂದ ಡಿಸಿಎಂ ಶಿವಕುಮಾರ್‌ ಮುಡಾ ಪ್ರಕರಣದ ಹೈಕೋರ್ಟ್‌ ತೀರ್ಪಿನ ಬಗ್ಗೆ ಆಕ್ಷೇಪಾರ್ಹ ಹೇಳಿಕೆ: ಸಚಿವ ಜಮೀರ್‌ ವಿರುದ್ಧ ಕ್ರಮಕ್ಕೆ ರಾಜ್ಯಾಪಾಲರ ಸೂಚನ...