ಕೊಪ್ಪಳ: ಬಸವಕಲ್ಯಾಣ ಮತ್ತು ಮಸ್ಕಿ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಉಪಯೋಗಿಸಿ ಇವಿಎಂ ಇಲ್ಲದೆ ಗೆದ್ದು ತೋರಿಸಲಿ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಬಿಜೆಪಿಗೆ ಬಹಿರಂಗ ಸವಾಲು ಎಸೆದಿದ್ದಾರೆ.
ಕೊಪ್ಪಳ ಜಿಲ್ಲೆಯ ಕಾರಟಗಿಯ ಸ್ವಗೃಹದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿ,ನನಗೆ ಇವಿಎಂ ಯಂತ್ರದ ಮೇಲೆ ವಿಶ್ವಾಸವಿಲ್ಲ. ಚುನಾವಣೆಗಳು ಜನರ ತೀರ್ಪಾಗಬೇಕೇ ಹೊರತು ಯಂತ್ರಗಳ ತೀರ್ಪಾಗಬಾರದು. ಜತೆಗೆ ಬಿಜೆಪಿ ಮತ್ತು ವಿಜಯೇಂದ್ರ ಬಳಿ ಹಣ ಅಧಿಕಾರ ಇದೆ ಹೀಗಾಗಿ ಗೆಲ್ಲುತ್ತಾರೆ. ನಾನೊಬ್ಬ ದೇಶದ ಪ್ರಜೆಯಾಗಿ ಇವಿಎಂ ಯಂತ್ರಗಳ ಮೇಲೆ ಸಂಶಯ ವ್ಯಕ್ತಪಡಿಸುತ್ತಿದ್ದೇನೆ ಎಂದು ಹೇಳಿದರು.
ರಾಜ್ಯದಲ್ಲಿ ಗ್ರಾಪಂ, ಜಿಪಂ, ತಾಪಂ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುತ್ತಾರೆ. ಆದರೆ ಎಂಪಿ ಎಂಎಲ್ಎ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು ತಾಕತ್ತಿದ್ದರೆ ಇವಿಎಂ ಯಂತ್ರ ಇಲ್ಲದೆ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು.