ಬಾಗಲಕೋಟೆ: ವಲಸೆ ಕುಟುಂಬಗಳಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ಆಹಾರ ಭದ್ರತೆ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಒಂದು ದೇಶ ಒಂದು ಪಡಿತರ ಚೀಟಿ ಯೋಜನೆಯನ್ನು 2019 ನವೆಂಬರ ಮಾಹೆಯಿಂದ ಜಾರಿಗೆ ಬಂದಿದೆ. ಇದರ ಉದ್ದೇಶ ಯಾವುದೇ ಭಾಗದಲ್ಲಿ ಪಡಿತರ ಪಡೆಯಲು ಅವಕಾಶ ಕಲ್ಪಿಸುವುದಾಗಿದೆ.
ನ್ಯಾಯಬೆಲೆ ಅಂಗಡಿಯವರು ಯಾವುದೇ ಪಡಿತರ ಚೀಟಿದಾರರ ಪೋರ್ಟಬಿಲಿಟಿಯ ಪಡಿತರ ಬಯಸಿದಾಗ, ಪಡಿತರ ವಿತರಿಸುವುದು ಮುಖ್ಯವಾಗುತ್ತದೆ. ಆದ್ದರಿಂದ ನ್ಯಾಯಬೆಲೆ ಅಂಗಡಿಗಳು ಎಲ್ಲ ಪೋರ್ಟಬಿಲಿಟಿ ಬೇಡಿಕೆಗಳನ್ನು ಕಡ್ಡಾಯವಾಗಿ ಪರಿಗಣಿಸಿಬೇಕು.
ಇನ್ನು ಮುಂದೆ ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳು ಪೋರ್ಟಬಿಲಿಟಿಯಡಿ ಪಡಿತರ ವಿತರಿಸಿದ ಪ್ರಗತಿ ಪರಿಶೀಲನೆ ಮಾಡಲಾಗುತ್ತದೆ. ಈ ಯೋಜನೆ ಬಗ್ಗೆ ಉತ್ತಮ ಪ್ರಗತಿ ಸಾಧಿಸಿದ ನ್ಯಾಯಬೆಲೆ ಅಂಗಡಿಗಳಿಗೆ ಮೆಚ್ಚುಗೆ ಪತ್ರ ನೀಡಲಾಗುವುದು. ಆದ್ದರಿಂದ ಪಡಿತರ ಚೀಟಿದಾರರು ತಮಗೆ ಹತ್ತಿರವಿರುವ ಅಥವಾ ತಾವು ವಾಸಿಸುತ್ತಿರುವ ಪಟ್ಟಣ, ಗ್ರಾಮದ ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್ ನೀಡಿ ಪಡಿತರ ಪಡೆದುಕೊಳ್ಳಲು ಸಾರ್ವಜನಿಕರಿಗೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.