ಮೈಸೂರು: ವಿಶೇಷ ಮೀಸಲು ಪೊಲೀಸ್ ಕಾನ್‌ಸ್ಟೆಬಲ್ (ಕೆಎಸ್‍ಆರ್‌ಪಿ/ಐಆರ್‌ಪಿ ) (ಪುರುಷ & ಮಹಿಳಾ) ಹುದ್ದೆಗಳ ನೇಮಕಾತಿಗಾಗಿ ನವೆಂಬರ್ 22 ರಂದು (ಭಾನುವಾರ) ಲಿಖಿತ ಪರೀಕ್ಷೆ ನಡೆಯಲಿದೆ.
ಮೈಸೂರು ನಗರದಲ್ಲಿ ಒಟ್ಟು 7,460 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದು, ನಗರದ ಜೆ.ಎಲ್.ಪುರಂನಲ್ಲಿರುವ ಎಸ್.ಬಿ.ಆರ್.ಆರ್. ಮಹಾಜನ ಪಿಯು ಕಾಲೇಜು, ಮಹಾಜನ ಪಬ್ಲಿಕ್ ಸ್ಕೂಲ್, ಎಸ್.ಬಿ.ಆರ್.ಆರ್. ಮಹಾಜನ ಫಸ್ಟ್‌ಗ್ರೇಡ್ ಕಾಲೇಜು, ಶ್ರೀ ಸತ್ಯ ಸಾಯಿಬಾಬ ನರ್ಸರಿ, ಹೈ ಪ್ರೈಮರಿ, ಪ್ರೈಮರಿ, ವಿವೇಕಾನಂದ ಕಾಂಪೋಸೈಟ್ ಜೈನಿಯಲ್ ಕಾಲೇಜ್, ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ಮಹಿಳಾ ವಾಣಿಜ್ಯ ಕಾಲೇಜು, ಗೋಕುಲಂನಲ್ಲಿರುವ ವಿದ್ಯಾವರ್ಧಕ ಪಾಲಿಟೆಕ್ನಿಕಲ್ ಕಾಲೇಜು, ಕುವೆಂಪುನಗರದಲ್ಲಿರುವ ಜ್ಞಾನಗಂಗಾ ವಿದ್ಯಾಪೀಠ, ಕಾವೇರಿ ಸ್ಕೂಲ್, ಸರ್ಕಾರಿ ಪಿಯು ಕಾಲೇಜು, ವಿಜಯ ವಿಠಲ ವಿದ್ಯಾಶಾಲ, ವಿಜಯ ವಿಠಲ ಕ್ಯಾಂಪೋಸೈಟ್ ಪಿ.ಯು.ಕಾಲೇಜು, ಜೆ.ಎಲ್.ಬಿ. ರಸ್ತೆಯಲ್ಲಿರುವ ಮಹಾರಾಣಿ ಮಹಿಳಾ ಕಲಾ ಕಾಲೇಜುಗಳು ಪರೀಕ್ಷಾ ಕೇಂದ್ರಗಳಾಗಿದೆ.
ಅಭ್ಯರ್ಥಿಗಳು ಕರೆಪತ್ರದ ಜೊತೆಗೆ ಭಾವಚಿತ್ರವಿರುವ ಗುರುತಿನ ಪತ್ರದೊಂದಿಗೆ 90 ನಿಮಿಷ ಮುಂಚಿತವಾಗಿ ಪರೀಕ್ಷಾ ಕೇಂದ್ರಗಳಲ್ಲಿ ಹಾಜರಾಗುವುದು. ಕೋವಿಡ್-19 ಸಂಬಂಧವಾಗಿ ಅಭ್ಯರ್ಥಿಗಳು ತಪ್ಪದೇ ಮಾಸ್ಕ್ ಧರಿಸಿ ಬುರುವುದು ಮತ್ತು ಜೊತೆಯಲ್ಲಿ ಪ್ಯಾಕೇಟ್ ಹ್ಯಾಂಡ್ ಸ್ಯಾನಿಟೈಸೆರ್ ತರುವಂತೆ ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ತಿಳಿಸಿದ್ದಾರೆ.