ರಾಯಚೂರು: ಹಿಂದೆ ಬಿ.ಎಸ್. ಯಡಿಯೂರಪ್ಪ ಚೆಕ್ ಮೂಲಕ ಲಂಚ ಪಡೆದರೆ ಅವರ ಮಗ ಈಗ ಆರ್ ಟಿಜಿಎಸ್ ಮೂಲಕ ಲಂಚ ಪಡೆಯುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಭತ್ತಕ್ಕೆ ಬೆಂಬಲಬೆಲೆ ಘೋಷಿಸುವಂತೆ ಆಗ್ರಹಿಸಿ ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ಇಂದು ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ರ‍್ಯಾಲಿಯಲ್ಲಿ ಮತ್ತು ಬಹಿರಂಗ ಸಮಾವೇಶದಲ್ಲಿ ಮಾತನಾಡಿದರು.
ಸಾಮಗ್ರಿ ಖರೀದಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ 2020 ಲಂಚ ಪಡೆದಿದ್ದಾರೆ ನಿಯಂತ್ರಣದಲ್ಲಿಮಸ್ಕಿಯಲ್ಲಿ ನಡೆದ ಕಾಂಗ್ರೆಸ್ ಬಹಿರಂಗ ಸಮಾವೇಶದಲ್ಲಿ ಮಾತನಾಡಿ ಸಾಮಗ್ರಿ ಖರೀದಿಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ 2ಸಾವಿರ ಕೋಟಿ ರೂ. ಲಂಚ ಪಡೆದಿದ್ದಾರೆ. ಕೋವಿಡ್ ನಿಯಂತ್ರಣ ನೆಪದಲ್ಲಿ ಹಣ ಲೂಟಿ ಮಾಡುತ್ತಿದ್ದಾರೆ. ಇವರನ್ನು ಮನುಷ್ಯರು ಎನ್ನಬೇಕೋ ಅಥವಾ ರಾಕ್ಷಸರು ಎನ್ನಬೇಕೋ ಎಂದು ಪ್ರಶ್ನಿಸಿದ ಅವರು, ಇವರೆಲ್ಲ ಮನುಷ್ಯತ್ವ ಇಲ್ಲದವರು ಎಂದು ಕಿಡಿಕಾರಿದರು.
ಭತ್ತಕ್ಕೆ ಬೆಂಬಲ ಬೆಲೆ ಕೊಡಲೇಬೇಕು. ಬೆಂಬಲ ಬೆಲೆ ನಿಮ್ಮಪ್ಪನ ಮನೆಯಿಂದ ಕೊಡುತ್ತೀಯ ಯಡಿಯೂರಪ್ಪ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ ಅವರು, ಈ ಕುರಿತು ಡಿಸೆಂಬರ್ ನಡೆಯುವ ಅಧಿವೇಶನದಲ್ಲಿ ಪ್ರಶ್ನಿಸುತ್ತೇನೆ. ಕನಿಷ್ಠ 500 ರೂ. ಬೆಂಬಲ ಬೆಲೆ ನೀಡಲೇಬೇಕು. ಕೊಡದಿದ್ದಲ್ಲಿ ಅಧಿವೇಶನದಲ್ಲಿ ಕಾಂಗ್ರೆಸ್ ಹೋರಾಟ ಮಾಡಲಿದೆ ಎಂದರು.
ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಬಿಜೆಪಿಗೆ ಎಚ್ಚರಿಕೆ ನೀಡಬೇಕೆಂದು ಮತದಾರರಿಗೆ ಕರೆ ಕೊಟ್ಟವರು. ದೇಶದಲ್ಲಿ ಅತಿ ಹೆಚ್ಚು ಸುಳ್ಳು ಹೇಳಿದ ಪ್ರಧಾನಿ ನರೇಂದ್ರ ಮೋದಿ. ಕೋವಿಡ್ -19 ಪ್ರಣಯಕ್ಕೆ ಔಷಧ ಕಂಡು ಹಿಡಿಯುವುದು ಬಿಟ್ಟು ದೀಪ ಹಚ್ಚಿ, ಗಂಟೆ ಬಾರಿಸಿದರೆ ಸೋಂಕು ಹೋಗುತ್ತದೆ ಎಂದು ಹೇಳಿದರು ಇದೇ ಅವರ ಆಡಳಿತ ವೈಕರಿ ಎಂದು ವ್ಯಂಗ್ಯವಾಡಿದರು
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕ ಬಸವನಗೌಡ ದದ್ದಲ್ ಮತ್ತು ನೂರಾರು ಕಾರ್ಯಕರ್ತರು ಇದ್ದರು.