ಇಂದು KSRTC ನೂತನ ಎಂಡಿಯಾಗಿ ಅಧಿಕಾರ ವಹಿಸಿಕೊಂಡ ಶಿವಕುಮಾರ್
ಸಂಸ್ಥೆಯ ನೂತನ ಎಂಡಿ ಶಿವಕುಮಾರ್ ಅವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯನ್ನು ಇಂದು ಜೂನ್ 19ರ ಪೂರ್ವಾಹ್ನದಂದು ವಹಿಸಿಕೊಂಡಿರುತ್ತೇನೆ. ಎಲ್ಲ ಗೌಪ್ಯ ಮತ್ತು ಅರೆ ಸರ್ಕಾರಿ ಪತ್ರಗಳನ್ನು ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಇಂದು ಮಧ್ಯಾಹ್ನ ಕೆ.ಬಿ.ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡರು.
ಸಂಸ್ಥೆಯ ನೂತನ ಎಂಡಿ ಶಿವಕುಮಾರ್ ಅವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯನ್ನು ಇಂದು ಜೂನ್ 19ರ ಪೂರ್ವಾಹ್ನದಂದು ವಹಿಸಿಕೊಂಡಿರುತ್ತೇನೆ. ಎಲ್ಲ ಗೌಪ್ಯ ಮತ್ತು ಅರೆ ಸರ್ಕಾರಿ ಪತ್ರಗಳನ್ನು ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು ಎಂದು ಅಧಿಕಾರ ಸ್ವೀಕರಿಸಿದ ಬಳಿಕ ಸರ್ಕಾರದ ಅಧಿಸೂಚನೆ ಅನ್ವಯ ಸಂಬಂಧಪಟ್ಟವರಿಗೆ ಸೂಚನೆ ನೀಡಿದ್ದಾರೆ.
ಇನ್ನು ಅಧಿಕಾರ ಸ್ವೀರಿಸಿದ ಸಂಬಂಧ ಪ್ರಧಾನ ಮಹಾಲೇಖಪಾಲರು(ಎ& ಇ), ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿಗಳು, ಸಾರಿಗೆ ಸಚಿವರ ಆಪ್ತ ಕಾರ್ಯದರ್ಶಿಗಳು, ಸಂಸ್ಥೆಯ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ಕಾರದ ಕಾರ್ಯದರ್ಶಿಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ.
ಅಲ್ಲದೆ ಸರ್ಕಾರದ ಕಾರ್ಯದರ್ಶಿಗಳು, ಸಾರಿಗೆ ಇಲಾಖೆ, ಜತೆಗೆ ರಸ್ತೆ ಸಾರಿಗೆಯ ಸಹೋದರ ನಿಗಮಗಳಾದ ಬಿಎಂಟಿಸಿ, ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು. ನಿರ್ದೇಶಕರು(ಸಿ&ಜಾ), ಕೇಂದ್ರ ಕಚೇರಿ, ಕರಾರಸಾ ನಿಗಮ.
ಜತೆಗೆ ಎಲ್ಲ ಸಾರಿಗೆ ಇಲಾಖಾ ಮುಖ್ಯಸ್ಥರು, ಎಲ್ಲ ಹಿರಿಯ/ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಕಾರ್ಯ ವ್ಯವಸ್ಥಾಪಕರು. ಪ್ರಾದೇಶಿಕ ಕಾರ್ಯಾಗಾರಗಳು. ಪ್ರಾಂಶುಪಾಲರುಗಳು – ಕೇಂದ್ರೀಯ / ಪ್ರಾದೇಶಿಕ ತರಬೇತಿ ಕೇಂದ್ರಗಳಿಗೆ ಮಾಹಿತಿಗೆ ಪ್ರತಿಗಳನ್ನು ಕಳುಹಿಸಿದ್ದಾರೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಎಂಡಿ ಆಗಿದ್ದಾಗ ಒಂದೂದಿನವೂ ನೌಕರರ ಸಮಸ್ಯೆ ಆಲಿಸಲು ಈ ಎಂಡಿ ಶಿವಕುಮಾರ್ ಅವರು ಡಿಪೋಗಳಿಗೆ ಭೇಟಿ ನೀಡಿಲ್ಲ. ಇನ್ನು ನೂತನ ಎಂಡಿಯಾಗಿ ಕೆಎಸ್‌ಆರ್ಟಿಸಿ ಸಂಸ್ಥೆಯ ಇಂದಿನಿಂದ ಅಧಿಕಾರ ವಹಿಸಿಕೊಂಡಿದ್ದು, ಈ ಸಂಸ್ಥೆಯ ನೌಕರರಿಗೆ ಡಿಪೋಮಟ್ಟದಲ್ಲಿ ಉಂಟಾಗುವ ಸಮಸ್ಯೆ ಹಾಗೂ ಒತ್ತಡಗಳನ್ನು ಕಡಿಮೆ ಮಾಡಿ ಅವರು ಪಾಡಿಗೆ ಅವರು ಪ್ರಾಮಾಣಿಕವಾಗಿ ಡ್ಯೂಟಿ ಮಾಡುವುದಕ್ಕೆ ಅಧಿಕಾರಿಗಳು ಅವಕಾಶ ಮಾಡಿಕೊಡುವಂತ ವಾತಾವರಣವನ್ನು ನಿರ್ಮಾಣ ಮಾಡಿದರೆ ಸಾರ್ಥಕವಾದೀತು.







