CRIMENEWS

BMTC ಘಟಕ 29: ಡಿಪೋ ಆವರಣದಲ್ಲಿ ಎಲೆಕ್ಟ್ರಿಕ್ ಬಸ್ ಡಿಕ್ಕಿ- ಚಾಲಕನಿಗೆ ತೀವ್ರ ಗಾಯ

​ಘಟಕದ ಆವರಣದಲ್ಲಿ ಬರುತ್ತಿದ್ದ ಚಾಲಕನಿಗೆ ಅತೀ ವೇಗವಾಗಿ ಬಂದ ಬಸ್‌ ಚಾಲಕನಿಗೆ ನಿಯಂತ್ರಣ ತಪ್ಪಿ ಜೋರಾಗಿ ಡಿಕ್ಕಿ ಹೊಡೆದಿದೆ. ಪರಣಾಮ ಮತ್ತೊಬ್ಬ ಚಾಲಕನ ಬಲಗೈ ಮೊಳಸಂದು ಕಿತ್ತು ಬಂದಿದ್ದು, ಭಾರಿ ರಕ್ತಸ್ರಾವವಾಗಿ.

ವಿಜಯಪಥ ಸಮಗ್ರ ಸುದ್ದಿ

​ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಘಟಕ-29ರಲ್ಲಿ ನಿನ್ನೆ ರಾತ್ರಿ ಭೀಕರ ಅಪಘಾತವೊಂದು ಸಂಭವಿಸಿದ್ದು, ಚಾಲಕರೊಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

​ಘಟಕದ ಆವರಣದಲ್ಲಿ ಬರುತ್ತಿದ್ದ ಚಾಲಕನಿಗೆ ಅತೀ ವೇಗವಾಗಿ ಬಂದ ಬಸ್‌ ನಿಯಂತ್ರಣ ತಪ್ಪಿ ಜೋರಾಗಿ ಡಿಕ್ಕಿ ಹೊಡೆದಿದೆ. ಪರಣಾಮ  ನಡೆದುಕೊಂಡು ಬರುತ್ತಿದ್ದ ಚಾಲಕನ ಬಲಗೈ ಮೊಳಸಂದು ಕಿತ್ತು ಬಂದಿದ್ದು, ಭಾರಿ ರಕ್ತಸ್ರಾವವಾಗಿ.

ಅಪಘಾತದ ತೀವ್ರತೆಗೆ ಚಾಲಕನ ಬಲಗೈ ಮೊಳಸಂದಿಗೆ ಗಂಭೀರ ಪೆಟ್ಟಾಗಿದ್ದು, ಮೂಳೆ ಮುರಿತ ಸಂಭವಿಸಿದೆ. ಘಟನೆಯ ಬೆನ್ನಲ್ಲೇ ತೀವ್ರ ರಕ್ತಸ್ರಾವ ಉಂಟಾಗಿದ್ದು, ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ಕೊಡಿಸಲಾಗಿದೆ.

​ರಾತ್ರಿ ಪಾಳಿಯ ಕರ್ತವ್ಯದ ವೇಳೆ ಈ ದುರ್ಘಟನೆ ನಡೆದಿದ್ದು, ಬಸ್ ಚಾಲನೆ ಮಾಡುವಾಗ ನಿರ್ಲಕ್ಷ್ಯ ವಹಿಸಲಾಗಿದೆಯೇ ಅಥವಾ ಬ್ರೇಕ್ ವೈಫಲ್ಯ ಕಾರಣವೇ ಎಂಬ ಬಗ್ಗೆ ತನಿಖೆ ನಡೆಯಬೇಕಿದೆ.

ಇತ್ತ ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಘಟಕದ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳುತ್ತಿದ್ದಾರೆ.

Deva
the authorDeva

Leave a Reply

error: Content is protected !!
Latest news
ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತರಿಗೆ 6 ಕೋಟಿ ರೂ. ಭಾರಿ ನಗದು ಬಹುಮಾನ: ಕ್ರೀಡಾಪಟುಗಳ ಬದುಕಿಗೆ ಭರವಸೆ ನೀಡಿದ ಸಿಎಂ BMTC: ಮಹಿಳಾ ಕಂಡಕ್ಟರ್‌ಗಳಿಗೆ ಶೇ.33ರಷ್ಟು ಮುಂಬಡ್ತಿ ಮೀಸಲಾತಿ ಅಸಾಧ್ಯ- ಸಂಸ್ಥೆ ನಿಯಮದಲ್ಲೂ ಇಲ್ಲ ಅವಕಾಶ ಎಂದ ಸಿಪಿಎ... ಶಕ್ತಿಯೋಜನೆಗಾಗಿ ರಾಜಸ್ಥಾನದ ಆಧಾರ್‌ ಕಾರ್ಡ್‌ಗೆ ಬೆಂಗಳೂರು ನಿವಾಸಿ ಎಂಬ ನಕಲಿ ಕಾರ್ಡ್‌ ಸೃಷ್ಟಿಸಿಕೊಂಡು ಮಹಿಳೆ ಓಡಾಟ! BMTC ಘಟಕ 29: ಡಿಪೋ ಆವರಣದಲ್ಲಿ ಎಲೆಕ್ಟ್ರಿಕ್ ಬಸ್ ಡಿಕ್ಕಿ- ಚಾಲಕನಿಗೆ ತೀವ್ರ ಗಾಯ ತಿ.ನರಸೀಪುರ: ಯುವಕನ ಕಿರುಕುಳದಿಂದ ಮದುವೆ ನಿಶ್ಚಯವಾಗಿದ್ದ ಯುವತಿ ಜತೆಗೆ ಅಪ್ಪಅಮ್ಮ ಆತ್ಮಹತ್ಯೆ ತಿ.ನರಸೀಪುರ: ವಿದ್ಯುತ್‌ ಖಾಸಗೀಕರಣ ವಿರೋಧಿಸಿ ರೈತರ ಪ್ರತಿಭಟನೆ ತಹಸೀಲ್ದಾರ್‌ಗೆ ಮನವಿ ಚಾಲನೆಯಲ್ಲಿದ್ದ ಬಸ್‌ನ ಸ್ಟೇರಿಂಗ್‌ ಹಿಡಿದ ಕುಡುಕ- ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಬಸ್‌ ಡಿಕ್ಕಿ, 11 ಮಂದಿಗೆ ಗಂಭೀರ... KSRTC: ಶೇ.44 ರಷ್ಟು ಬಸ್‌ ಪ್ರಯಾಣ ದರ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಗೃಹಜ್ಯೋತಿಯಿಂದ ಸರ್ಕಾರಿ ನೌಕರರ ಹೊರಗಿಡಲು ಸರ್ಕಾರದ ಚಿಂತನೆ ಸರ್ಕಾರಿ ನೌಕರಿ ಮಹಿಳೆಯರಿಗೆ ಇನ್ನು ಮುಂದೆ ಸಿಗಲ್ವ ಶಕ್ತಿ ಯೋಜನೆಯ ಉಚಿತ ಪ್ರಯಾಣ?