NWKRTC ಸಂಸ್ಥೆಗೆ ಪ್ರಾಮಾಣಿಕ ಸೇವೆ ಸಲ್ಲಿಸಿ ನೂತನವಾಗಿ ನೇಮಕಗೊಂಡ ದರ್ಜೆ-2ರ ಅಧಿಕಾರಿಗಳಿಗೆ ಎಂಡಿ ಪ್ರಿಯಾಂಗಾ ಕರೆ
NWKRTC ಉಪಾಧ್ಯಕ್ಷ ಸುನೀಲ್ ಜೆ. ಹಣಮನ್ನವರ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಂಗಾ ಅವರು ಜಂಟಿಯಾಗಿ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಅಧಿಕೃತವಾಗಿ ಉದ್ಘಾಟಿಸಿ, ನೂತನ ಅಧಿಕಾರಿಗಳಿಗೆ ಶುಭ ಹಾರೈಸಿದರು.ಸಾಧಕ ಸಿಬ್ಬಂದಿಗೆ ನಗದು ಬಹುಮಾನ ವಿತರಿಸಿದರು.

ಹುಬ್ಬಳ್ಳಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ನೂತನವಾಗಿ ನೇಮಕಗೊಂಡ ವಿವಿಧ ವೃಂದದ ದರ್ಜೆ-2 ಅಧಿಕಾರಿಗಳ ಸ್ವಾಗತ ಮತ್ತು ತರಬೇತಿ ಹಾಗೂ ಪ್ರೇರಣಾ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ ನೀಡಲಾಗಿದೆ.
ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಮೊನ್ನೆ ಹಮ್ಮಿಕೊಂಡಿದ್ದ ಈ ವಿಶೇಷ ಕಾರ್ಯಕ್ರಮವನ್ನು ಗಣ್ಯರು ಜಂಟಿಯಾಗಿ ಉದ್ಘಾಟಿಸಿದರು.
ಉಪಾಧ್ಯಕ್ಷ ಸುನೀಲ್ ಜೆ. ಹಣಮನ್ನವರ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಂಗಾ ಅವರು ಜಂಟಿಯಾಗಿ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಅಧಿಕೃತವಾಗಿ ಉದ್ಘಾಟಿಸಿ, ನೂತನ ಅಧಿಕಾರಿಗಳಿಗೆ ಶುಭ ಹಾರೈಸಿದರು.
ಸಾಧಕ ಸಿಬ್ಬಂದಿಗೆ ಗೌರವ ಮತ್ತು ನಗದು ಬಹುಮಾನ: ಇದೇ ಸಂದರ್ಭದಲ್ಲಿ 01-05-2026 ರಿಂದ 31-05-2026 ರ ಅವಧಿಯಲ್ಲಿ ಶಕ್ತಿಯೇತರ ಸಾರಿಗೆ ಆದಾಯದ ಗುರಿ ಸಾಧನೆ ಹಾಗೂ ಸಂಸ್ಥೆಯ ಪ್ರಮುಖ ಆದಾಯ ಮೂಲವಾದ ಮೈಲೇಜ್ (KMPL) ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಅತ್ಯುತ್ತಮ ಕೊಡುಗೆ ನೀಡಿದ ಸಿಬ್ಬಂದಿಗಳನ್ನು ಗುರುತಿಸಿ ಗೌರವಿಸಲಾಯಿತು.

ಕಳೆದ 2026ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸಂಚಿತ ಸಾಧನೆಯಲ್ಲಿ ಮೈಲೇಜ್ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ನಗದು ಬಹುಮಾನ ಹಾಗೂ ಪ್ರಶಂಸನಾ ಪತ್ರ ನೀಡಿ ಪುರಸ್ಕರಿಸಿದರು.
ಸಂಸ್ಥೆಯ ಏಳಿಗೆಗೆ ನಿಮ್ಮ ಶ್ರಮ ಅತ್ಯಗತ್ಯ ಪ್ರಿಯಾಂಗಾ: ನೂತನ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಅವರು, “ಸಾರ್ವಜನಿಕ ವಲಯದಲ್ಲಿ ಸಾರಿಗೆ ಸಂಸ್ಥೆಯ ಪಾತ್ರ ದೊಡ್ಡದಾಗಿದೆ. ನೂತನವಾಗಿ ಆಯ್ಕೆಯಾದ ದರ್ಜೆ-2 ಅಧಿಕಾರಿಗಳು ಅತ್ಯಂತ ನಿಷ್ಠೆ, ಜವಾಬ್ದಾರಿ ಹಾಗೂ ಕರ್ತವ್ಯ ಪ್ರಜ್ಞೆಯಿಂದ ಕೆಲಸ ಮಾಡಬೇಕು. ಸಂಸ್ಥೆಯ ಏಳಿಗೆಗೆ ನಿಮ್ಮ ಶ್ರಮ ಅತ್ಯಗತ್ಯ” ಎಂದು ಕಿವಿಮಾತು ಹೇಳಿದರು.
ನಿಷ್ಠೆಯಿಂದ ಕೆಲಸ ಮಾಡಿ ಉಪಾಧ್ಯಕ್ಷ ಸುನೀಲ್ ಅಣಮನ್ನವರ: ನಂತರ ಮಾತನಾಡಿದ ಸಂಸ್ಥೆಯ ಉಪಾಧ್ಯಕ್ಷ ಸುನೀಲ್ ಚೇ ಅಣಮನ್ನನವರ್ ಅವರು, “ಸಂಸ್ಥೆಗೆ ಬರುವ ಪ್ರತಿಯೊಬ್ಬ ಅಧಿಕಾರಿಯೂ ಸಾರ್ವಜನಿಕರ ಸೇವೆಯನ್ನು ದೇವರ ಸೇವೆಯೆಂದು ಭಾವಿಸಬೇಕು. ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಸಂಸ್ಥೆಯು ಮತ್ತಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದ ಅವರು ಸಾಧನೆ ಮಾಡಿದ ಸಿಬ್ಬಂದಿ ಇತರರಿಗೂ ಪ್ರೇರಣೆಯಾಗಬೇಕು” ಎಂದು ತಿಳಿಸಿದರು.
ಸಂಸ್ಥೆಯ ಮುಖ್ಯ ಸಿಂಬ್ಬಂದಿ ವ್ಯವಸ್ಥಾಪಕ ಶಶಿಧರ ಮರಿದೇವರಮಠ ಅವರು ಸ್ವಾಗತಿಸಿದರು. ಮುಖ್ಯ ಸಂಚಾರ ವ್ಯವಸ್ಥಾಪಕರಾದ ವಿವೇಕಾನಂದ ವಿಶ್ವಜ್ಞ, ಮುಖ್ಯ ಭದ್ರತಾ ಮತ್ತು ಜಾಗ್ರತಾ ಅಧಿಕಾರಿಗಳಾದ ಗಣೇಶ ರಾಥೋಡ್, ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ಸಿ.ಇ.ಶ್ರೀನಿವಾಸ ಮೂರ್ತಿ, ಮುಖ್ಯ ಕಾನೂನು ಆಧಿಕಾರಿ ಶ್ಯಾಮಲಾ ಕೆ ಎನ್, ಮುಖ್ಯ ಯೋಜನಾ ಮತ್ತು ಅಂಕಿಸಂಖ್ಯಾಧಿಕಾರಿ ಬೋರಯ್ಯ ಎಂ, ಮುಖ್ಯ ಗಣಕ ವ್ಯವಸ್ಥಾಪಕ ಶೀನಾಥ ಜಿ, ಮುಖ್ಯ ಲೆಕ್ಕಾಧಿಕಾರಿ ಕೆ.ಎನ್. ಜಗದಂಬಾ, ಉಪ ಮುಖ್ಯ ಸಂಚಾರ ವ್ಯವಸ್ಥಾಪಕ ಶಶಿಧರ ಚನ್ನಪಗೌಡರ ಸೇರಿದಂತೆ ಎಲ್ಲ ವಿಭಾಗಗಳ ವಿಭಾಗೀಯ ನಿಯಂತ್ರಣಾಧಿಕಾರಿಗಳು ಹಾಗೂ ಎಲ್ಲ ವಿಭಾಗೀಯ ಸಂಚಾರ ಅಧಿಕಾರಿಗಳು ಸಂಸ್ಥೆಯ ಅಧಿಕಾರಿ, ಸಿಂಬ್ಬಂದಿಗಳು ಹಾಗೂ ನೂತನವಾಗಿ ನೇಮಕಗೊಂಡ ದರ್ಜೆ-2 ಅಧಿಕಾರಿಗಳು ಉಪಸ್ಥಿತರಿದ್ದರು.







