- ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿಚಾರವಾಗಿ ದೆಹಲಿ ಹೊರವಲಯದಲ್ಲಿ ನಡೆಯುತ್ತಿರುವ ಪ್ರತಿಭಟನೆ ಈಗ ದೇಶ ಮಾತ್ರವಲ್ಲದೇ, ವಿಶ್ವದ ಗಮನ ಸೆಳೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಹೇಳಕೆ ನೀಡಿರುವ ಅವರು, ಕೆನಡಾ ಪ್ರಧಾನಿ ಕಳವಳದ ನಡುವೆಯೇ ಈಗ ಅಮೆರಿಕ, ಬ್ರಿಟನ್ ಸಂಸದರೂ ಕಳವಳ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಏನೋ ಸಮಸ್ಯೆ ಸೃಷ್ಟಿಯಾಗಿದೆ ಎಂಬರ್ಥವನ್ನು ರೈತರ ಈ ಹೋರಾಟ ಹೊಮ್ಮಿಸುತ್ತಿದೆ ಎಂದು ಹೇಳುತ್ತಿದ್ದಾರೆ ಎಂದಿದ್ದಾರೆ.
ಭಾರತ ಗಳಿಸಿಕೊಂಡ ಖ್ಯಾತಿ, ಸ್ಥಾನಮಾನಗಳಿಗೆ ಈ ಹೊಸ ಕಾಯ್ದೆಗಳು, ಅದರ ವಿರುದ್ಧ ನಡೆಯುತ್ತಿರುವ ಹೋರಾಟಗಳು ಚ್ಯುತಿಯುಂಟು ಮಾಡಬಾರದು ಎಂಬುದು ನನ್ನ ಅಭಿಲಾಷೆ. ಮೋದಿ ತಾವು ಪ್ರಧಾನಿಯಾದ ನಂತರ ಸ್ವತಃ ತಾವು ಗಳಿಸಿಕೊಂಡ ಹೆಸರಿಗೂ ಇದು ಕಪ್ಪುಚುಕ್ಕೆಯಾಗಬಹುದು ಎಂಬುದನ್ನು ಅವರು ಗಮನಿಸಬೇಕು. ಅದೇ ಹೊತ್ತಲ್ಲೇ ರೈತರಿಗೆ ಅನಾನುಕೂಲವೂ ಆಗಬಾರದು ಎಂದು ಸಲಹೆ ನೀಡಿದ್ದಾರೆ.
ಕೇಂದ್ರ ಸರ್ಕಾರ ರೈತರಿಗೆ ಕಾರ್ಯಕ್ರಮಗಳ ಮೂಲಕ ಪರೋಕ್ಷ ಸಂದೇಶ ರವಾನಿಸುವ ಬದಲಿಗೆ ಪ್ರಧಾನಿ ನೇತೃತ್ವದಲ್ಲಿ ನಿರ್ಣಾಯಕ ಸಭೆ ನಡೆಸಿ, ಹೋರಾಟ ಅಂತ್ಯಗೊಳಿಸುವುದು ಸೂಕ್ತ. ಇದು ದೇಶದ ಘನತೆ ದೃಷ್ಟಿಯಿಂದ ಅತ್ಯಗತ್ಯವೂ ಹೌದು. ದೇಶದ ಘನತೆಯ ವಿಚಾರದಲ್ಲಿ ಮೋದಿಯವರೂ ಎಚ್ಚರಿಕೆಯಿಂದ ವರ್ತಿಸುತ್ತಾರೆ. ಆದ್ದರಿಂದ ಸಮಸ್ಯೆ ಕೂಡಲೇ ಇತ್ಯರ್ಥವಾಗಲಿ ಎಂದು ಹೇಳಿದ್ದಾರೆ.
ಕಾಯ್ದೆ ಬಗ್ಗೆ ಕೇಂದ್ರ ಸಚಿವ ರಾಜ್‌ನಾಥ್ ಸಿಂಗ್ ಮಾತುಗಳು ಭರವಸೆ ಮೂಡಿಸುವಂತಿವೆ. ಕಾಯ್ದೆಗಳ ಪ್ರಯೋಗಾತ್ಮಕ ಜಾರಿಗೆ ಅವಕಾಶ ನೀಡುವಂತೆ ಅವರು ಕೋರಿದ್ದಾರೆ. ಅಲ್ಲದೆ, ಕಾಯ್ದೆಗಳು ರೈತರಿಗೆ ಸಮಸ್ಯೆ ಸೃಷ್ಟಿಸುವಂತಿದ್ದರೆ ಸರ್ಕಾರ ಅವುಗಳನ್ನು ಹಿಂದಕ್ಕೆ ಪಡೆಯುವುದಾಗಿಯೂ ಅವರು ಆಶ್ವಾಸನೆ ನೀಡಿದ್ದಾರೆ. ರೈತರೂ ಈ ನಿಟ್ಟಿನಲ್ಲಿ ಯೋಚಿಸಬೇಕು.
ಭಾರತೀಯ ಕೃಷಿರಂಗ ವಿಷವರ್ತುಲದಲ್ಲಿದೆ ಎಂಬುದು ಸಾರ್ವತ್ರಿಕ ಆರೋಪ. ಕೃಷಿ ರಂಗದ ಕಲ್ಯಾಣವಾಗುತ್ತದೆ ಎಂದರೆ ಯಾವುದೇ ಪ್ರಯೋಗಕ್ಕೆ ನಾವೂ ಸಿದ್ಧರಿರುವುದು ಅಗತ್ಯ ಕೂಡ. ಹಾಗಾಗಿ ರೈತರು ಕಾಯ್ದೆಗೆ ಅವಕಾಶ ನೀಡುವ ಬಗ್ಗೆಯೂ ಒಮ್ಮೆ ಆಲೋಚಿಸುವುದು ಉಚಿತವೂ ಆಗಿದೆ ಎಂಬುದು ನನ್ನ ಅಭಿಪ್ರಾಯ. ಆದರೆ, ಸರ್ಕಾರ, ಹೋರಾಟಗಾರರ ನಡುವೆ ಸಮನ್ವಯವಿರಲಿ ಎಂದಿದ್ದಾರೆ.
Related
You Might Also Like
ಬಿಜೆಪಿ ಸರ್ಕಾರದಲ್ಲಿ ನಿರಂತರವಾಗಿ ವರ್ಷಕ್ಕೆ ಎರಡೆರಡು ಬಾರಿ ಬಸ್ ಟಿಕೆಟ್ ದರ ಹೆಚ್ಚಳ: ಪಟ್ಟಿ ರಿಲೀಸ್ ಮಾಡಿದ ಸಾರಿಗೆ ಸಚಿವ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ 4 ನಿಗಮಗಳ ಬಸ್ ಪ್ರಯಾಣ ದರದಲ್ಲಿ ಶೇ.15ರಷ್ಟು ಏರಿಕೆ ಮಾಡಿರುವುದನ್ನು ಮೆಜೆಸ್ಟಿಕ್ನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಖಂಡಿಸಿ ಸರ್ಕಾರದ ವಿರುದ್ಧ...
KSRTC: ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ಮರೆತಿದ್ದ ಬಿಜೆಪಿಯವರು ಈಗ ಬಸ್ ದರ ಹೆಚ್ಚಳ ಖಂಡಿಸುತ್ತಾರೆ- ರಾಮಲಿಂಗಾರೆಡ್ಡಿ
ಬೆಂಗಳೂರು: ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಜನರನ್ನು ಹಾಗೂ ಅಭಿವೃದ್ಧಿಯನ್ನು ಮರೆತಿದ್ದರು. ಈಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಸ್ ದರ ಹೆಚ್ಚಳ ಖಂಡಿಸಿ, ಬಿಜೆಪಿಯವರು ಪ್ರತಿಭಟನೆ...
APSRTCಯಲ್ಲೂ ಶಕ್ತಿ ಯೋಜನೆ ಶೀಘ್ರ ಜಾರಿ: ಬೆಂಗಳೂರಿಗೆ ಭೇಟಿ ನೀಡಿದ ಸಾರಿಗೆ ಸಚಿವ ಮಂಡಿಪಲ್ಲಿ ರಾಮಪ್ರಸಾದ್ ರೆಡ್ಡಿ ನಿಯೋಗ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲೂ ‘ಶಕ್ತಿ’ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಕೈಗೊಂಡಿರುವ ಕ್ರಮಗಳ ಕುರಿತು ತಿಳಿದುಕೊಳ್ಳಲು ಆಂಧ್ರಪ್ರದೇಶ ಸರ್ಕಾರದ ಸಚಿವರು ಹಾಗೂ ಅಧಿಕಾರಿಗಳು...
ಜ.19ರಂದು ರೈತರ ಮಕ್ಕಳಿಗಾಗಿ ಉದ್ಯೋಗ ಮೇಳ ಆಯೋಜನೆ- 50 ಕಂಪನಿಗಳು ಭಾಗಿ
ಪಿರಿಯಾಪಟ್ಟಣ್ಣ: ರೈತರ ಮಕ್ಕಳಿಗಾಗಿ ಜನವರಿ 19ರ ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರಿಗೆ ಉದ್ಯೋಗಮೇಳ ಆಯೋಜಿಸಲಾಗಿದೆ ಎಂದು ಒಕ್ಕಲಿಗ ಯುವ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ ನಂಜೇಗೌಡ...
NWKRTC: ಕರ್ತವ್ಯದ ವೇಳೆ ಮಾನಸಿಕ ಚಿತ್ರಹಿಂಸೆ ಅನುಭವಿಸುತ್ತಿರುವ TA, ATI, TI, ATSಗಳು
ಡ್ಯೂಟಿ ಮೇಲೆ ವಂದ ಮಾಡಲಿಕ್ಕೂ ಪರದಾಟ ವಾರಗಟ್ಟಲೇ ಮನೆಯಿಂದ ಹೊಗುಳಿಯುವ ಶಿಕ್ಷೆ ಅನಾರೋಗ್ಯಕ್ಕೊಳಗಾದ ಕುಟುಂಬದವರ ನೋಡಲಾಗದ ಪರಿಸ್ಥಿತಿ 8ಗಂಟೆ ಬದಲಿಗೆ 12-14 ಗಂಟೆಗಳ ಕಾಲ ಡ್ಯೂಟಿ ಹುಬ್ಬಳ್ಳಿ:...
KSRTC 4 ಸಾರಿಗೆ ನಿಗಮಗಳ ಬಸ್ ಪ್ರಯಾಣದ ಟಿಕೆಟ್ ದರ ಹೆಚ್ಚಳ ಕಾಲಕಾಲಕ್ಕೆ ಆಗಬೇಕು: ಸಚಿವ ಚಲುವರಾಯಸ್ವಾಮಿ
ಬೆಂಗಳೂರು: ಡಿಸೇಲ್, ಅಕ್ಕಿ, ಬಟ್ಟೆಗೆ ಜಾಸ್ತಿ ಆದ್ರೆ ದುಡ್ಡು ಕೊಡ್ತೀರಾ.. ಮಟನ್ 100 ರೂ. ಇದ್ದದ್ದು 500 ರೂ. ಆದ್ರೆ ತಗೋತೀರ ಆದರೆ, ಅದೇ ಒಂದು ಸರ್ಕಾರ...
ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿರುವ ರಸ್ತೆಗಳ ಗುರುತಿಸಿ: ತುಷಾರ್ ಗಿರಿನಾಥ್
ಬೆಂಗಳೂರು: ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರ ಮಾಡಲು ಅವಕಾಶವಿರುವ ರಸ್ತೆಗಳನ್ನು ಮಾರ್ಗಸೂಚಿಯ ಅನುಸಾರ ಗುರುತಿಸಲು ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚನೆ...
ಬಿಬಿಎಂಪಿಯ 2025-26ನೇ ಸಾಲಿನ ಬಜೆಟ್‌ಗೆ ಸಲಹೆ ಕೊಡಿ: ಡಾ. ಹರೀಶ್ ಕುಮಾರ್
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2025-26ನೇ ಸಾಲಿನ ಕರಡು ಆಯವ್ಯಯದ ತಯಾರಿಕೆಯ ಸಿದ್ಧತೆ ಕಾರ್ಯ ಪ್ರಗತಿಯಲ್ಲಿದ್ದು, ಅದಕ್ಕಾಗಿ ಅತ್ಯಮೂಲ್ಯವಾದ ಸಲಹೆಗಳನ್ನು ನೀಡುವ ಸಲುವಾಗಿ ನಾಗರೀಕರಿಗೆ 10ನೇ...
ಜ.5ರಂದು ಇಪಿಎಸ್ ಪಿಂಚಣಿದಾರರ 84ನೇ ಮಾಸಿಕ ಸಭೆ: ನಂಜುಂಡೇಗೌಡ
ಬೆಂಗಳೂರು: ಸಸ್ಯಕಾಶಿ ಲಾಲ್ ಬಾಗ್ ಆವರಣದಲ್ಲಿ 84ನೇ ಇಪಿಎಸ್ ಪಿಂಚಣಿದಾರರ ಮಾಸಿಕ ಸಭೆ ಇದೇ ಜನವರಿ 5ರ ಭಾನುವಾರ ಹಮ್ಮಿಕೊಳ್ಳಲಾಗಿದೆ ಎಂದು ಬಿಎಂಟಿಸಿ & ಕೆಎಸ್ಆರ್ಟಿಸಿ ನಿವೃತ್ತ...
ಸೌತೆಕಾಯಿ ಗಲಾಟೆ: ತಂಗಿ ಕುತ್ತಿಗೆ ಕೊಯ್ದು ಭೀಕರವಾಗಿ ಕೊಲೆ ಮಾಡಿದ ಅಣ್ಣ
ಕೊಳ್ಳೇಗಾಲ: ಕೇವಲ ಸೌತೆಕಾಯಿಗಾಗಿ ಅಣ್ಣನೊಬ್ಬ ತನ್ನ ತಂಗಿಯ ಕುತ್ತಿಗೆಯನ್ನು ಕತ್ತಿಯಿಂದ ಕೊಯ್ದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಈದ್ಗಾ ಮೊಹಲ್ಲದಲ್ಲಿ ನಡೆದಿದೆ....
ಜ.19-BMTC ನೌ.ಸ.ಸಂ.ಚುನಾವಣೆ: ಭ್ರಷ್ಟ, ಕಮಿಷನ್ ಮುಕ್ತ 20 ಭರವಸೆಗಳ ಪ್ರಣಾಳಿಕೆ ಬಿಡುಗಡೆ ಮಾಡಿದ ಸಾಮಾನ್ಯ ನೌಕರರ ತಂಡ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೌಕರರ ಸಹಕಾರ ಸಂಘದ ಚುನಾವಣೆ ಇದೇ ಜನವರಿ 19 ರಂದು ನಡೆಯಲಿದ್ದು, ಈಗಾಗಲೇ ಚುನಾವಣಾ ಕಾವು ಏರುತ್ತಿದೆ, ನೌಕರರ ಸಂಘಟನೆಗಳ...
ಬನ್ನೂರು- ಭತ್ತ ಖರೀದಿ ಕೇಂದ್ರ ತೆರೆದು ನೋಂದಣಿಯಲ್ಲೆ ಕಾಲಹರಣ: ಸಿಟ್ಟಿಗೆದ್ದ ರೈತರಿಂದ ರಸ್ತೆಗೆ ಭತ್ತ ಸುರಿದು ಪ್ರತಿಭಟನೆ
ಬನ್ನೂರು: ಸರ್ಕಾರ ಭತ್ತ ಖರೀದಿ ಕೇಂದ್ರ ತೆರೆದು ಖರೀದಿ ಮಾಡದೆ ಕೇವಲ ನೋಂದಣಿ ಪ್ರಕ್ರಿಯೆಯಲ್ಲೆ ಕಾಲಹರಣ ಮಾಡಿದ ಕಾರಣ ಭತ್ತ ಬೆಳೆಗಾರ ರೈತರು ಸಂಕಷ್ಟಕ್ಕೆ ಸಿಲುಕಿ ನಷ್ಟ...