- ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಯುವಕರು ಮತ್ತು ಹೆಂಡತಿ ಬಿಟ್ಟವರನ್ನೇ ಗುರಿಯಾಗಿಸಿ ಮ್ಯಾಟ್ರಿಮೊನಿ ಮೂಲಕ ಪರಿಚಯಿಸಿಕೊಂಡು ನಂತರ ಹನಿಟ್ರ್ಯಾಪ್ ದಂಧೆಯಲ್ಲಿ ತೊಡಗಿ ವಂಚನೆ ಮಾಡುತ್ತಿದ್ದ ಮಾಡರ್ನ್ ಟೀಚರ್ ಒಬ್ಬರು ತಾವೇಕೊಟ್ಟ ದೂರಿನಲ್ಲಿ ಸಿಲುಕಿ ಈಗ ಕಂಬಿ ಹಿಂದೆ ಬಂಧಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹನಿ ಟ್ರ್ಯಾಪ್ ದಂಧೆ ನಡೆಸುತ್ತಿದ್ದ ಈ ಟೀಚರ್ ಆ ಮೂಲಕ ಲಕ್ಷಾಂತರ ರೂ.ಗಳನ್ನು ಅಮಾಯಾಕರಿಂದ ಪೀಕಿದ್ದಾಳೆ. ಅಲ್ಲದೆ, ಅವರ ಜೊತೆಗಿನ ಖಾಸಗಿ ದೃಶ್ಯಗಳನ್ನು ಚಿತ್ರಿಸಿಕೊಂಡು ತಾನೇ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಳು. ಅದಕ್ಕೆ ಒಪ್ಪದಿದ್ದರೆ ಆಕೆ ಜತೆ ಸಲ್ಲಾಪವಾಡಿದರಿಗೆ ಅತ್ಯಾಚಾರದ ಆರೋಪ ಮಾಡುವ ಮಾಡುವ ಮೂಲಕ ಬೆದರಿಕೆ ಒಡ್ಡುತ್ತಿದ್ದಳು.
ಅವಿವಾಹಿತರು ಮತ್ತು ವಿಚ್ಛೇದಿತರನ್ನು ಮ್ಯಾಟ್ರಿಮೊನಿಯಲ್ಲೇ ಗಾಳ ಹಾಕಿ, ಬಲೆಗೆ ಕೆಡವಿಕೊಳ್ಳುತ್ತಿದ್ದ ಈ ಮಾಜಿ ಟೀಚರ್ ತಾನು ನೀಡಿದ ದೂರಿನಿಂದಾಗಿ ತಾನೇ ಸಿಕ್ಕಿ ಹಾಕಿಕೊಂಡು, ಜೈಲಿನ ಕಂಬಿ ಎಣಿಸುತ್ತಿದ್ದಾಳೆ. ದೂರು ನೀಡಿ ಸಿಕ್ಕಿಹಾಕಿಕೊಂಡ ಮಾಜಿ ಹೈಟೆಕ್ ಹನಿಟ್ರ್ಯಾಪ್ ಟೀಚರ್ ಕವಿತಾ ಇಂದಿರಾನಗರ ಠಾಣಾ ಪೊಲೀಸರ ಬಲೆಗೆ ಬಿದ್ದಿದ್ದಾಳೆ.
ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಕವಿತಾ ಕಾರಣಾಂತರಗಳಿಂದ ಆ ವೃತ್ತಿಯನ್ನು ಕಳೆದುಕೊಂಡಿದ್ದಾಳೆ. ಬಳಿಕ ಹನಿ ಟ್ರ್ಯಾಪ್ ದಂಧೆಗಿಳಿದಿದ್ದ ಕವಿತಾ ಮ್ಯಾಟ್ರಿಮೋನಿಯಲ್ಲಿ ಅವಿವಾಹಿತ ಹಾಗೂ ವಿಚ್ಛೇದಿತ ಪುರುಷರನ್ನು ಪರಿಚಯಿಸಿಕೊಳ್ಳುತ್ತಿದ್ದಳು. ಬಳಿಕ ಅವರೊಂದಿಗಿನ ಖಾಸಗಿ ಕ್ಷಣಗಳನ್ನು ಚಿತ್ರಿಸಿಕೊಂಡು ಹಣಕ್ಕಾಗಿ ಡಿಮ್ಯಾಂಡ್ ಮಾಡುತ್ತಿದ್ದಳು.
ಡಿ. 22ರಂದು ಯುವಕನೊಬ್ಬನ ವಿರುದ್ಧ ಕವಿತಾ ಅತ್ಯಾಚಾರದ ಆರೋಪ ಮಾಡಿದ್ದಳು. ಸಂತ್ರಸ್ತ ಯುವಕ ಅತ್ಯಾಚಾರವೆಸಗಿ ವಿಡಿಯೋ ಚಿತ್ರೀಕರಿಸಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಳು. ಅಷ್ಟೇ ಅಲ್ಲದೆ, ಪೊಲೀಸರನ್ನು ಕರೆಸಿ ಅವರ ಸಮ್ಮುಖದಲ್ಲೇ ಆ ಯುವಕನ ಜೊತೆಗಿನ ಖಾಸಗಿ ವಿಡಿಯೋವನ್ನು ಡಿಲೀಟ್ ಮಾಡಿಸಿದ್ದಳು.
ಅದಾದ ಬಳಿಕ ಡಿ. 31ರಂದು ಮತ್ತೆ ಅದೇ ಯುವಕನ ವಿರುದ್ಧ ಎರಡನೇ ಬಾರಿ ದೂರು ನೀಡಿದ್ದಳು. ಇದರಿಂದ ಅನುಮಾನಗೊಂಡ ಪೊಲೀಸರು ವಿಚಾರಣೆ ಮಾಡಿದಾಗ ಹನಿಟ್ರ್ಯಾಪ್ ಪ್ರಕರಣ ಬೆಳಕಿಗೆ ಬಂದಿದೆ. ಹೀಗೆ ತಾನು ನೀಡಿದ ದೂರಿನಿಂದ ಕವಿತಾ ತಾನೇ ಸಿಕ್ಕಿಹಾಕಿಕೊಂಡಿದ್ದಾಳೆ.
ಈಕೆ ಮತ್ತೆ ಪೊಲೀಸರಿಗೆ ದೂರು ನೀಡದಿರಲು 2 ಲಕ್ಷ ರೂಪಾಯಿ ಕೊಡುವಂತೆ ಯುವಕನ ಬಳಿ ಡಿಮ್ಯಾಂಡ್ ಮಾಡಿದ್ದಳು. ಆದರೆ ಆ ಯುವಕ ಹಣ ನೀಡಲು ನಿರಾಕರಿಸಿದ್ದರಿಂದ ಆತನ ವಿರುದ್ಧ ದೂರು ನೀಡಿದ್ದಳು. ಇದೆಲ್ಲವನ್ನು ಗಮನಿಸಿದ ಪೊಲೀಸರು ಈಕೆಯ ವಂಚನೆ ಜಾಲವನ್ನು ಭೇದಿಸುವಲ್ಲಿ ಸಫಲರಾಗಿದ್ದು ಸದ್ಯ ಈಗ ಕಂಬಿ ಎಣಿಸುತ್ತಿದ್ದಾಳೆ.
Bikagitha madam