ನ್ಯೂಡೆಲ್ಲಿ: ಕುಡಿದ ಮತ್ತಿನಲ್ಲಿ ತಾಯಿ-ಮಗಳನ್ನು ಕೀಚಕರು ಅತ್ಯಾಚಾರ ಮಾಡಿದ್ದು, ಆ ವಿಡಿಯೋ ಮಾಡಿ ವ್ಯಕ್ತಿಯೋರ್ವ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾನೆ.
ಡಿಸೆಂಬರ್ 29 ಮತ್ತು 30ರ ಮಧ್ಯರಾತ್ರಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಈ ವಿಡಿಯೋ ವೈರಲ್ ಆಗಿದೆ. ಇದರ ಆಧಾರದ ಮೇಲೆ ಅತ್ಯಾಚಾರ ಎಸಗಿದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ.
ಸಂತ್ರಸ್ತೆಯರಾದ 35 ವರ್ಷದ ತಾಯಿ ಮತ್ತು 18 ವರ್ಷದ ಅಂಗವಿಕಲ ಮಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದು, ಈ ಇವರು ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.
ಸಂತ್ರಸ್ತ ತಾಯಿ ಮತ್ತು ಮಗಳು ದೆಹಲಿಯಲ್ಲಿ ಬೀದಿಬದಿಯಲ್ಲಿ ರಾತ್ರಿವೇಳೆ ಮಲಗಿದ್ದಾಗ ಅಲ್ಲಿಗೆ ಬಂದ ಇಬ್ಬರು ಕುಡುಕರು ಅತ್ಯಾಚಾರ ಎಸಗಿದ್ದಾರೆ. ಈ ವೇಳೆ ಸಂತ್ರಸ್ತೆಯರನ್ನು ರಕ್ಷಿಸಬೇಕಿದ್ದ ಸ್ಥಳೀಯರು ಅದನ್ನೇ ಮರೆತು ಅತ್ಯಾಚಾರ ಎಸಗುತ್ತಿರುವುದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ.
ಇನ್ನುಕುಡಿದ ಮತ್ತಿನಲ್ಲಿ ಅತ್ಯಾಚಾರ ಎಸಗಿದ ವಾಜಿಪುರದ ಅಮಿತ್ ಮತ್ತು ಜಹಂಗಿರ್ಪುರಿಯ ಸೋನು ಎಂಬ ಕಾಮುಕರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಈ ವಿಡಿಯೋ ಮಾಡಿ ಹರಿಬಿಟ್ಟಿದ್ದ ವ್ಯಕ್ತಿಯನ್ನು ಸಹ ಪೊಲೀಸರು ಹುಡುಕುತ್ತಿದ್ದಾರೆ.