ವಿಜಯಪಥ ಸಮಗ್ರ ಸುದ್ದಿ
ಹಾವೇರಿ: ರಾಣೇಬೆನ್ನೂರ ಕ್ಷೇತ್ರದ ಅಭಿವೃದ್ಧಿಗೆ ವಿವಿಧ ಇಲಾಖೆಗಳಿಗೆ ರೂ.382.98 ಕೋಟಿ ಅನುದಾನ ನೀಡಲಾಗಿದೆ. ರಾಣೇಬೆನ್ನೂರ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲಾಗುವುದು ಎಂದು ನೂತನ ಸಚಿವ ಆರ್.ಶಂಕರ್ ಹೇಳಿದರು.
ಸಚಿವರಾದ ನಂತರ ಮೊದಲಬಾರಿಗೆ ಶುಕ್ರವಾರ ರಾಣೇಬೆನ್ನೂರ ನಗರಕ್ಕೆ ಆಗಮಿಸಿ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನನಗೆ ರಾಜ್ಯ ಒಂದು ಕಣ್ಣಾದರೆ ರಾಣೇಬೆನ್ನೂರು ಕ್ಷೇತ್ರ ಇನ್ನೊಂದು ಕಣ್ಣಾಗಿದೆ. ಎರಡು ಕಣ್ಣುಗಳ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ಕೊರೊನಾ ಹಿನ್ನೆಲೆಯಲ್ಲಿ ಅಭಿವೃದ್ಧಿ ಕುಂಟಿತಗೊಂಡಿದ್ದು, ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಲಾಗುವುದು ಎಂದು ತಿಳಿಸಿದರು.
ತಾಲೂಕಿನ ಜನರ ಸಹಕಾರದಿಂದ ಮೂರನೇ ಬಾರಿಗೆ ಸಚಿವನಾಗಿದ್ದು, ಈ ಭಾಗದ ಜನರ ಆಶೋತ್ತರಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು. ಮಾಧ್ಯಮಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ದರಾಜ ಕಲಕೋಟಿ ಇತರರು ಉಪಸ್ಥಿತರಿದ್ದರು.
ಇದನ್ನೆಲ್ಲ ಯಾವುದು ಉಪಯೋಗಿಸುತ್ತೀರಾ ಅಥವಾ ಎಲ್ಲ ಬೋಕಸ್ ಹೋಗುತ್ತಾ.ಬರಿ ಬಾಯಿ ಮಾತು ಅನ್ಸುತ್ತೆ ಅಷ್ಟೇ ಅಭಿವೃದ್ಧಿಕಾರ್ಯ ಒಂದು ಆಗಲ್ಲ