NEWSನಮ್ಮರಾಜ್ಯರಾಜಕೀಯ

ಭೂ ಅಕ್ರಮ- ಎಚ್‌ಡಿಕೆ, ಅವರ ಸಂಬಂಧಿಕರನ್ನು ಜೈಲಿಗೆ ಅಟ್ಟಬೇಕು: ಎಸ್‌.ಆರ್.ಹಿರೇಮಠ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ರಾಮನಗರ: ಬಿಡದಿ ಹೋಬಳಿ ಕೇತಗಾನಹಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಅವರ ಸಂಬಂಧಿಕರ ವಶದಲ್ಲಿರುವ ಗೋಮಾಳವನ್ನು ಸರ್ಕಾರ ಸ್ವಾಧೀನ ವಶಕ್ಕೆ ಪಡೆಯಬೇಕು ಮತ್ತು ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ ಜೈಲಿಗೆ ಅಟ್ಟಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖಂಡ ಎಸ್‌.ಆರ್.ಹಿರೇಮಠ ಒತ್ತಾಯಿಸಿದರು.

ದಲಿತರ ಜಮೀನು ಹಿಂದಕ್ಕೆ ಪಡೆಯುವಂವಂತೆ ಆಗ್ರಹಿಸಿ ಇಲ್ಲಿನ ಹಳೇ ಬಸ್ ನಿಲ್ದಾಣ ವೃತ್ತದಲ್ಲಿ ಶನಿವಾರ ನಡೆದ ಧರಣಿಯಲ್ಲಿ ಮಾತನಾಡಿದರು.

ಎಚ್‌ಡಿಕೆ ಕುಟುಂಬದವರು ಹೊಂದಿರುವ ಜಮೀನಿಗೆ ಯಾವುದಕ್ಕೂ ಅಧಿಕೃತ ಮಂಜೂರು ಆದೇಶ ಇಲ್ಲ. ಅದು ತುಳಿತಕ್ಕೆ ಒಳಗಾದ ದಲಿತರಿಗೆ ಸರ್ಕಾರ ಮಂಜೂರು ಮಾಡಿದ್ದ ಗೋಮಾಳ. ಇದನ್ನು ಖರೀದಿಸಲು ಕಾನೂನಿನಲ್ಲಿ ಅವಕಾಶ ಇಲ್ಲ. ಈ ಬಗ್ಗೆ ಹೈಕೋರ್ಟ್‌ 2020ರ ಜನವರಿ 14ರಂದು ಆದೇಶ ನೀಡಿ, ಲೋಕಾಯುಕ್ತ ವರದಿ ಅನ್ವಯ ಮೂರು ತಿಂಗಳಲ್ಲಿ ಜಮೀನು ವಶಕ್ಕೆ ಪಡೆಯಲು ಆದೇಶಿಸಿತ್ತು. ಆದರೆ, ಕುಮಾರಸ್ವಾಮಿ ಪ್ರಭಾವ ಬಳಸಿ ಅದಕ್ಕೆ ಅವಕಾಶ ನೀಡಿಲ್ಲ ಎಂದು ದೂರಿದರು.

ಇನ್ನು ಕುಮಾರಸ್ವಾಮಿ, ಅವರ ಚಿಕ್ಕಮ್ಮ ಸಾವಿತ್ರಮ್ಮ, ಮಾಜಿ ಸಚಿವ ಡಿ.ಸಿ. ತಮ್ಮಣ್ಣ, ಅವರ ಪತ್ನಿ ಪ್ರಮೀಳಾ, ಅವರ ಮೂರು ಮಕ್ಕಳ ಹೆಸರಿನಲ್ಲಿ ಇಲ್ಲಿ ಇನ್ನೂರು ಎಕರೆಗೂ ಹೆಚ್ಚು ಜಮೀನಿದೆ. ಇದರಲ್ಲಿ 110 ಎಕರೆಗೂ ಹೆಚ್ಚು ಜಮೀನು ಗೋಮಾಳ. ಇದನ್ನು ಕಾನೂನಾತ್ಮಕವಾಗಿ ಪರಭಾರೆ ಮಾಡಿದ್ದಲ್ಲಿ ಅವರು ಸರ್ಕಾರದ ಮುಂದೆ ದಾಖಲೆ ಇಡಬೇಕು ಎಂದು ಆಗ್ರಹಿಸಿದರು.

ಈ ಜಮೀನನ್ನು ನ್ಯಾಯಬದ್ಧವಾಗಿ ಖರೀದಿಸಿದ್ದೇವೆ ದಾಖಲೆಗಳು ಬೆಂಕಿಯಿಂದ ಹಾಳಾಗಿದ್ದರಲ್ಲಿ ನಮ್ಮ ಪಾತ್ರ ಇಲ್ಲ ಎಂದು ಎಚ್‌ಡಿಕೆ ಆಣೆ ಮಾಡಲಿ ಎಂದು ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಮುಖಂಡ ರವಿಕೃಷ್ಣ ರೆಡ್ಡಿ ಸವಾಲು ಹಾಕಿದರು.

ಧರಣಿ ನಿರತ ಜನಾಂದೋಲನಗಳ ಮಹಾ ಮೈತ್ರಿ-ಕರ್ನಾಟಕ, ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ, ಜನಸಂಗ್ರಾಮ ಪರಿಷತ್, ದಲಿತ ಸಂಘರ್ಷ ಸಮಿತಿ, ಶ್ರೀ ಲಕ್ಷ್ಮೀದೇವಿ ಪೂಜಮ್ಮ ಭೂ ಸಂತ್ರಸ್ತರ ಹೋರಾಟ ಸಮಿತಿಯ ಸದಸ್ಯರು ಈ ಸಂಬಂಧ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕಾನೂನು ರೀತಿ ಖರೀದಿಸಿದ್ದರೂ ಸಲ್ಲದ ಆರೋಪ
ಕೇತಗಾನಹಳ್ಳಿ ಜಮೀನು ವಿಚಾರದಲ್ಲಿ ಈಗಾಗಲೇ ಹಲವು ಬಾರಿ ಸ್ಪಷ್ಟನೆ ನೀಡಿದ್ದೇನೆ. ಆದರೂ ರವಿಕೃಷ್ಣ ರೆಡ್ಡಿ, ಹಿರೇಮಠ್ ಮೊದಲಾದವರು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಈ ಭೂಮಿಯನ್ನು ಕಾನೂನು ರೀತಿ ಖರೀದಿಸಿದ್ದರೂ ಸಲ್ಲದ ಆರೋಪ ಮಾಡುತ್ತಿದ್ದಾರೆ. ಈ ಭೂಮಿಯನ್ನು ಬಡವರಿಗೆ ಹಂಚಿ ನೆಮ್ಮದಿಯಾಗಿರಬೇಕು ಎನ್ನುವಷ್ಟು ಬೇಸರ ತರಿಸಿದ್ದಾರೆ ಎಂದು ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

Leave a Reply

error: Content is protected !!
LATEST
ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ...