ನ್ಯೂಡೆಲ್ಲಿ: ಕರ್ನಾಟಕ ಹೈಕೋರ್ಟ್‌ನ ನಾಲ್ವರು ಹೆಚ್ಚುವರಿ ನ್ಯಾಯಾಧೀಶರನ್ನು ಕಾಯಂ ನ್ಯಾಯಾಧೀಶರನ್ನಾಗಿ ನೇಮಿಸುವ ಪ್ರಸ್ತಾಪಕ್ಕೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಅನುಮೋದನೆ ನೀಡಿದೆ.
ರಾಜ್ಯ ಹೈಕೋರ್ಟ್ ನ ಕಾಯಂ ನ್ಯಾಯಾಧೀಶರಾಗಿ ನೇಮಕಗೊಂಡಿರುವ ಹೆಚ್ಚುವರಿ ನ್ಯಾಯಾಧೀಶರೆಂದರೆ ನ್ಯಾಯಮೂರ್ತಿಗಳಾದ ಸಿಂಗಾಪುರಂ ರಾಘವಾಚಾರ್ ಕೃಷ್ಣಕುಮಾರ್, ಅಶೋಕ್ ಸುಭಾಷ್‌ಚಂದ್ರ ಕಿಣಗಿ, ಸೂರಜ್ ಗೋವಿಂದರಾಜ್ ಮತ್ತು ಸಚಿನ್ ಶಂಕರ್ ಮಗದಂ.
2020 ರ ಡಿಸೆಂಬರ್ 16 ರಂದು ನಡೆದ ಸಭೆಯಲ್ಲಿ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನೇತೃತ್ವದ ಕೊಲೆಜಿಯಂ ಈ ಪ್ರಸ್ತಾಪವನ್ನು ಅಂಗೀಕರಿಸಿತ್ತು. ಇದನ್ನು ಬುಧವಾರ ಸುಪ್ರೀಂ ಕೋರ್ಟ್ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.
ಬೊಬ್ಡೆ ಜತೆಗೆ ನ್ಯಾಯಮೂರ್ತಿಗಳಾದ ಎನ್.ವಿ.ರಮಣ, ಆರ್.ಎಫ್. ನಾರಿಮನ್, ಯು.ಯು. ಲಲಿತ್ ಮತ್ತು ಎ.ಎಂ. ಖಾನ್ವಿಲ್ಕರ್ ಅವರು ಕೊಲೆಜಿಯಂನ ಭಾಗವಾಗಿದ್ದರು.