NEWSನಮ್ಮಜಿಲ್ಲೆರಾಜಕೀಯ

ಬನ್ನೂರು: ಒಂದೂವರೆ ವರ್ಷದಿಂದ ನನೆಗುದಿಗೆ ಬಿದ್ದಿದ್ದ ಮನೆಮನೆ ಕಸ ಸಂಗ್ರಹ ವಾಹನಗಳು ಸಾರ್ವಜನಿಕ ಸೇವೆಗೆ ಮುಕ್ತ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬನ್ನೂರು:  ಮನೆಮನೆ ಕಸ ಸಂಗ್ರಹಣೆ ವಾಹನಗಳಿಗೆ ಬನ್ನೂರು ಪುರಸಭಾ ಅಧ್ಯಕ್ಷರು ಹಾಗೂ ಶಾಸಕರು ಚಾಲನೆ ನೀಡಿದರು.

ಕಳೆದ ಒಂದೂವರೆ ವರ್ಷದ ಹಿಂದೆಯೇ 5 ಹೊಸ ವಾಹನಗಳನ್ನು  ಖರೀದಿಸಿ ತಂದಿದ್ದರೂ  ಹಲವಾರು ಕಾರಣಗಳಿಂದ ಈ ವಾಹನಗಳನ್ನು ಉಪಯೋಗಿಸಿಕೊಳ್ಳಲು ಆಗದ ಕಾರಣ ಅವು ತುಕ್ಕುಹಿಡಿಯುತ್ತ ನಿಂತಿದ್ದವು.

ಆ ಎಲ್ಲ ಸಮಸ್ಯೆಯನ್ನು ನಿವಾರಿಸಿದ  ಪುರಸಭೆ ಅಧ್ಯಕ್ಷೆ ಭಾಗ್ಯಶ್ರಿಕೃಷ್ಣ  ಶಾಸಕ ಅಶ್ವಿ‌ನ್ ಕುಮಾರ್ ಅವರ ನೇತೃತ್ವದಲ್ಲಿ ಬುಧವಾರ ಕಸದ ವಾಹನಗಳಿಗೆ ಚಾಲನೆನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷರು ಸ್ವಚ್ಛಭಾರತ್ ಹಾಗೂ 14ನೇ ಹಣಕಾಸು ಆಯೋಗದ 26ಲಕ್ಷ ರೂ.ಗಳ ಅನುದಾನದಿಂದ ಒಂದೂವರೆ ವರ್ಷದ ಹಿಂದೆಯೇ ಖರೀದಿಸಿದ್ಧ ಈ ವಾಹನಗಳು ಅಂದಿನಿಂದಲೂ ಪುರಸಭೆ ಆವರಣದಲ್ಲೇ ಬಳಕೆಗೆ ಬಾರದೆ ನಿಂತ್ತಿದ್ದವು. ಈಗ ಅವುಗಳ ಸದುಪಯೋಗಕ್ಕೆ ಮುಕ್ತಗೊಳಿಸಲಾಗಿದೆ.

ಹೀಗಾಗಿ ಬನ್ನೂರಿನಲ್ಲಿ ಕಸದ ಸಮಸ್ಯೆ ಪರಿಹರಿಸಲು ಈ ವಾಹನಗಳು ಸಹಕಾರಿಯಾಗಲಿವೆ. ಇನ್ನು ಪುರಸಭೆ ನಿವಾಸಿಗಳು ಕಸವನ್ನು ಎಲ್ಲೆಂದರಲ್ಲಿ ಬಿಸಾಡದೆ. ಕಸ ಸಂಗ್ರಹ ವಾಹನಕ್ಕೆ ನೀಡಬೇಕು ಎಂದು ಮನವಿ ಮಾಡಿದರು.

ಇನ್ನು ಈ ವಾಹನಗಳ ಮನೆ ಬಳಿ ಬಂದಾಗ ಕಸ ಹಾಕುವಂತೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದು ಭಾಗ್ಯಶ್ರೀ ಕೃಷ್ಣ ತಿಳಿಸಿದರು.

ಪುರಸಭೆ ಮುಖ್ಯಧಿಕಾರಿ ಸ್ವಾಮಿ, ಉಪಧ್ಯಾಕ್ಷೆ ಶೋಭಾ, ಸದಸ್ಯರಾದ ಮಹೇಶ್, ಅನಂತಮೂರ್ತಿ, ಆನಂದ್, ಶೃತಿ, ಕೃಷ್ಣೆಗೌಡ, ಶಾಂತ ರಾಜು, ಸೌಮ್ಯರಾಣಿ, ಫೀರ್ ಖಾನ್, ನಂಜುಂಡಸ್ವಾಮಿ, ಶ್ರೀನಿವಾಸ್, ನಾಗರತ್ನ, ದಿವ್ಯ, ಫಿರ್ದೋಶ್, ಲೋಕಾಂಭಿಕಾ, ಪುಷ್ಪಾವತಿ, ಮೂರ್ತಿ, ಶಿವಣ್ಣ, ಚಲುವರಾಜು, ವಿಜಯಕುಮಾರ್, ಸುರೇಶ್ ಹಾಗೂ ಅಧಿಕಾರಿಗಳು ಇದ್ದರು.

Leave a Reply

error: Content is protected !!
LATEST
ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ...