Vijayapatha – ವಿಜಯಪಥ
Saturday, November 2, 2024
CrimeNEWSನಮ್ಮಜಿಲ್ಲೆ

ಪರಪುರಷರೊಂದಿಗೆ ಪಾರ್ಟಿಗಳಲ್ಲಿ ಡಾನ್ಸ್‌ ಮಾಡುವಂತೆ ಪತಿ ಕಿರುಕುಳ: ನೊಂದ ಪತ್ನಿ ಆತ್ಮಹತ್ಯೆ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಪತಿಯ ಕಿರುಕುಳದಿಂದ ನೊಂದ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ವರ್ತೂರಿನಲ್ಲಿ ನಡೆದಿದೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ವರ್ತೂರು ನಿವಾಸಿ ಪದ್ಮಾವತಿ (39) ಆತ್ಮಹತ್ಯೆ ಮಾಡಿಕೊಂಡವರು. ಪದ್ಮಾವತಿಯ ಪತಿ ಭಾಸ್ಕರ್ ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್. ಆದರೆ ಆತ ನೀಡುತ್ತಿದ್ದ ಕಿರುಕುಳವನ್ನು ಸಹಿಸಲಾಗದೆ ಆಕೆ ತನ್ನ ಪ್ರಾಣವನ್ನೇ ತೆತ್ತಿದ್ದಾಳೆ.

ಈಕೆ 15 ವರ್ಷದ ಹಿಂದೆ ಸಾಫ್ಟ್ ವೇರ್ ಇಂಜಿನಿಯರ್ ಭಾಸ್ಕರ್ ನನ್ನು ಮದುವೆಯಾಗಿದ್ದರು. ಈ ದಂಪತಿಗೆ 11 ವರ್ಷದ ಗಂಡು ಮಗುವಿದೆ.

ಭಾಸ್ಕರ್ ಮೋಜು- ಮಸ್ತಿ ಅಂತ ತೇಲಾಡುತ್ತಿದ್ದ. ಅಲ್ಲದೆ ಪಾರ್ಟಿಗಳಿಗೂ [ಪತ್ನಿಯನ್ನು ಕರೆದುಕೊಂಡು ಹೋಗಿ, ಡಾನ್ಸ್‌ ಮಾಡುವಂತೆ ಆಕೆಗೆ ಚಿತ್ರಹಿಂಸೆ ನೀಡುತ್ತಿದ್ದ ಎನ್ನಲಾಗಿದೆ.

ಇನ್ನು ಈ ಕರಾತಕ ಬೇರೆಯವರ ಜತೆ ಡಾನ್ಸ್‌ ಮಾಡುತ್ತಿದ್ದಲ್ಲದೇ ತನ್ನ ಪತ್ನಿಯನ್ನು ಪರಪುರುಷರೊಂದಿಗೆ ಡಾನ್ಸ್‌ ಮಾಡುವಂತೆ ಪಾರ್ಟಿಗಳಲ್ಲಿ ತಾಕೀತು ಮಾಡುತ್ತಿದ್ದ, ಒಂದು ವೇಳೆ ಒಪ್ಪದಿದ್ದರೆ ನಿಂದಿಸುತ್ತಿದ್ದ ಎಂಬ ಆರೋಪ ಭಾಸ್ಕರನ ವಿರುದ್ಧ ಕೇಳಿ ಬಂದಿದೆ.

ಪತಿ ಈ ರೀತಿ ನೀಡುತ್ತಿದ್ದ ಮಾನಸಿಕ ಕಿರುಕುಳ ಸಹಿಸಲಾಗದೇ ಬೇಸತ್ತ ಪದ್ಮಾವತಿ ಈ ಮೊದಲು ಮೂರು ಬಾರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು, ಆದರೆ ನಾಲ್ಕನೇ ಬಾರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ವರ್ತೂರ್ ಠಾಣೆಯ ಪೊಲೀಸರು ಭಾಸ್ಕರ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Leave a Reply

error: Content is protected !!
LATEST
ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ