NEWSನಮ್ಮರಾಜ್ಯರಾಜಕೀಯ

ಕುಮಾರಸ್ವಾಮಿ ಅವರನ್ನು ಒಬ್ಬ ಕ್ಲರ್ಕ್ ರೀತಿ ನಡೆಸಿಕೊಂಡಿರಿ: ನಮ್ಮ ಸರ್ಕಾರದ ಬಗ್ಗೆ ನಾತನಾಡುತ್ತೀರ- ಸಿದ್ದು ವಿರುದ್ಧ ಬಿಎಸ್‌ವೈ ಕಿಡಿ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯ ಸರ್ಕಾರ ಅಭಿವೃದ್ಧಿ ಮಾಡುತ್ತಿದೆಯೋ ಇಲ್ಲವೋ ಎಂಬುದರ ಬಗ್ಗೆ ಸಿದ್ದರಾಮಯ್ಯ ಟೀಕೆ ಮಾಡುತ್ತಾರೆ ಎಂದುಕೊಂಡಿದ್ದೆ. ಆದ್ರೆ ಅವರು ಅದನ್ನು ಮೀರಿ ಇದೊಂದು ಸುಳ್ಳಿನಕಂತೆ, ಚುನಾಯಿತ… ಸರ್ಕಾರ ಎಂದೆಲ್ಲ ಹೇಳಿಕೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿಪಕ್ಷ ನಾಯಕರ ಬಿರುದ್ಧ ಕಿಡಿಕಾರಿದ್ದಾರೆ.

ಇಂದು ವಿಧಾನಸಭಾ ಕಲಾಪದ ವೇಳೆ ಮಾತನಾಡಿ, ಮಹುತ ಇಲ್ಲದಿದ್ದರೂ ಕಾಗ್ರೆಸ್‌ನವರು ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದ್ದರು. ಆ ನಿಕಟ ಪೂರ್ವ ಮೈತ್ರಿ ಸರ್ಕಾರದಲ್ಲಿ ಯಾವರೀತಿ ಆಡಳಿತವಾಯಿತು ಎಂದು ನಾನು ಹೇಳಬೇಕಿಲ್ಲ.

ಕುಮಾರಸ್ವಾಮಿ ಒಬ್ಬ ಗುಮಾಸ್ತನಂತೆ ಕಾರ್ಯ ನಿರ್ವಹಿಸಿದ್ದರು. ಆಮಟ್ಟಿಗೆ ನೀವು ಅವರಿಗೆ ಕಿರುಕುಳ ಕೊಟ್ಟಿದ್ದೀರಿ. ಇನ್ನು ನಮ್ಮ ಸರ್ಕಾರದ ಬಗ್ಗೆ ನೀವು ಹೇಳಿಕೆ ನೀಡಿರುವುದರಿಂದ ನಾನು ಮಾತನಾಡುವುದು ಅನಿವಾರ್ಯವಾಗಿದೆ ಎಂದು ಟಾಂಗ್‌ ಕೊಟ್ಟರು.

ಮೈತ್ರಿ ಸರ್ಕಾರದಲ್ಲಿ ಅನೇಕ ಕಿರುಕುಳದಿಂದ ನಾನು ತೊಂದರೆ ಅನುಭವಿಸಿದ್ದೆ ಎಂದು ಸ್ವತಃ ಕುಮಾರಸ್ವಾಮಿ ಹೇಳಿದ್ದಾರೆ. ಅವರನ್ನು ನೀವು ಒಬ್ಬ ಕ್ಲರ್ಕ್ ರೀತಿ ಉಪಯೋಗಿಸಿ ಕೊಂಡಿದ್ದೀರಿ. ಅಲ್ಲದೇ ಬಿಜೆಪಿಗೆ ಅಧಿಕಾರ ಸಿಗಬಾರದು ಎಂಬ ಕಾರಣಕ್ಕೆ ಜೆಡಿಎಸ್ ಜತೆ ಸರ್ಕಾರ ಮಾಡಿದ್ರಿ.

ಆದರೆ ಕೊನೆಗೆ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿ ಅವರಿಗೆ ಅಧಿಕಾರ ಮಾಡಲು ಬಿಡದೆ ಎಷ್ಟು ತೊಂದರೆ ಕೊಟ್ಟಿದ್ದೀರಿ ಎಂಬುದನ್ನು ನಾನು ನೋಡಿದ್ದೇನೆ. ಹೀಗಿದ್ದರೂ ನೀವು ನಮ್ಮ ಪಕ್ಷದ, ಆಡಳಿತದ ಬಗ್ಗೆ ಮಾತನಾಡುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಅಧಿಕಾರ ಸಿಕ್ಕಾಗ, ಹಳೆಯದು ಮತ್ತು ದ್ವೇಷದ ರಾಜಕಾರಣ ಮರೆತು, ಒಳ್ಳೆಯದನ್ನು ಮಾಡಬೇಕು ಎಂಬುದು ರಾಜಧರ್ಮ ಎಂದು ನಾನು ಭಾವಿಸಿದ್ದೇನೆ. ಇದರ ಜತೆಗೆ ಸವಾಲುಗಳೇ ನನ್ನನ್ನು ಗಟ್ಟಿಗೊಳಿಸುತ್ತಿವೆ. ಹೀಗಾಗಿ ನೇಕಾರರ ಸಾಲ ಮನ್ನಾ ಮಾಡಿದ್ದೇವೆ. ಇನ್ನು ರೈತ ಮತ್ತೆ ನೇಕಾರ ನಮ್ಮ ಎರಡು ಕಣ್ಣುಗಳಂತೆ.

ನೇಕಾರ್ ಸಮ್ಮಾನ್ ಯೋಜನೆ ಚಾಲನೆಗೆ ಸವಾಲುಗಳನ್ನು ಎದುರಿಸೋಕೆ ನನಗೆ ಎಲ್ಲಿಲ್ಲದ ಉತ್ಸಾಹ ಇದೆ. ಹಲವು ಸವಾಲು ಅನೇಕ ವರ್ಷಗಳಿಂದಲೂ ಎದುರಿಸಿದ್ದೇನೆ. ಪ್ರತಿಯೊಂದು ಸವಾಲನ್ನೂ ಸ್ವಯಂ ಶಕ್ತಿಯಿಂದ ಎದುರಿಸಿಕೊಂಡು ಬಂದಿದ್ದೇನೆ ಎಂದು ಹೇಳಿದರು.

ಸರ್ಕಾರ ರಚನೆ ಸಂದರ್ಭದಲ್ಲಿ ರಾಜ್ಯದಲ್ಲಿ ಭೀಕರ ನೆರೆ ಹಾವಳಿ ಉಂಟಾಗಿತ್ತು. ಆ ವೇಳೆ ನಾನು ಸಂಪುಟ ರಚನೆ ಮಾಡಲು ಸಾಧ್ಯವಾಗಲಿಲ್ಲ. ಆದರೂ ನಾನೊಬ್ಬನೇ ಓಡಾಡಿ ದೇವರು ಮೆಚ್ಚುವ ರೀತಿ ಪ್ರವಾಹ ಪರಿಹಾರ ಕೆಲಸ ಮಾಡಿದ್ದೇನೆ.ನೆರೆ ಸಂತ್ರಸ್ತರ ನೆರವಿಗೆ ಪ್ರಾಮಾಣಿಕ ಕೆಲಸ ಮಾಡಿದ್ದೇನೆ.

ಅಂದು ನಾನು ಧೃತಿಗೆಡಲಿಲ್ಲ. ನೆರೆಯಿಂದ 1.33 ಲಕ್ಷ ಮನೆಗಳು ಕುಸಿದು ಹೋದವು. ಆ ವೇಳೆ ಸಂತ್ರಸ್ತರಿಗೆ ಎಲ್ಲರೀತಿಯಲ್ಲೂ ರಕ್ಷಣೆ ಮಾಡುವ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖನಾದೆ ಎಂದು ಸಿದ್ದರಾಮಯ್ಯ ಅವರ ಟೀಕೆಗೆ ತಿರುಗೇಟು ನೀಡಿದರು.

Leave a Reply

error: Content is protected !!
LATEST
ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ...