ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಜೀವನ ಒಂದು ಹೋರಾಟ ಅದರಲ್ಲಿ ಗೆಲುವು ಸೋಲು, ಸಂತೋಷ -ದುಃಖ ಎರಡು 70:30 ರಂತಿದ್ದರೆ ಮಾನವ ಜನ್ಮತಳೆದಿದ್ದಕ್ಕೂ ಸಾರ್ಥಕವಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ಇದಕ್ಕೆ ಇಂಬು ನೀಡುವಂತೆ ವಿವಾಹವಾದ ದಂಪತಿ ಸರಿ ಸಮಾನವಾಗಿ ಜೀವನ ನಡೆಸಿದರೆ. ಆಗ ಅವರ ಜೀವನ ಒಂದು ರೀತಿಯ ಸ್ವರ್ಗದಂತೆಯೇ ಸರಿ.
ಇನ್ನು ಅವರು ಕೂಲಿ ಮಾಡಲಿ, ಇಲ್ಲ ತಿಂಗಳಿಗೇ ಲಕ್ಷಾಂತರ ರೂಪಾಯಿ ಸಂಪಾದಿಸಲಿ ಬಾಳಿನ ದೋಣಿ ತೂತು ಬಿದ್ದರೆ ಆ ಲಕ್ಷ ಕೂಡ ಮನಸ್ಸಿನ ನೆಮ್ಮದಿಯನ್ನು ಕೊಡಲು ಸಾಧುವಿಲ್ಲ. ಇನ್ನು ಕೋಟಿಗೊಬ್ಬರಿಗೆ ಸಿಗುವ ಐಪಿಎಸ್ – ಐಎಫ್‌ಎಸ್ ಹುದ್ದೆಗಳಲ್ಲಿ ಇರುವವರು ತಮ್ಮ ಸಂಸಾರದ ನೊಗವನ್ನು ಸಮನಾಂತರವಾಗಿ ಎಳೆಯಲು ಸಾಧ್ಯವಾಗದೆ. ಒಬ್ಬರನ್ನೊಬ್ಬರು ನಿಂದಿಸಿಕೊಂಡು ಮೂರನೆಯವರ ಬಳಿಗೆ ಹೋಗಿ ನ್ಯಾಯ ಕೇಳಿದರೆ ಹೇಗಿರುತ್ತೆ?
ನೊಂದ ಸಾವಿರಾರು ಜನರಿಗೆ ನ್ಯಾಯ ಒದಗಿಸಬೇಕಾದವರೆ ಈರೀತಿ ಮತ್ತೊಬ್ಬರ ಬಳಿ ನ್ಯಾಯಕೇಳಲು ಹೋದರೆ ಅವರ ಬಗ್ಗೆ ನಮ್ಮ ನಮಸ್ಸಿನಲ್ಲಿ ಮೂಡುವ ಭಾವನೆಯಾದರು ಹೇಗಿರುತ್ತೆ. ಹೌದು! ಪತ್ನಿ ಐಪಿಎಸ್ ಪತಿ ಐಎಫ್‌ಎಸ್ ಆದರೆ ಅವರ ಸಂಸಾರ ಮಾತ್ರ ಒಡೆದ ಮಡಿಕೆಯಾಗಿದೆ. ಅದನ್ನು ಸರಿಪಡಿಸಿಕೊಳ್ಳುವ ಹೋರಾಟದಲ್ಲಿ ಪತ್ನಿ ಕಳೆದ 10 ವರ್ಷಗಳಿಂದ ಶ್ರಮಿಸಿದ್ದಾರೆ. ಆದರೂ ಅದು ಸಾಧ್ಯವಾಗದ್ದಕ್ಕೆ ಈಗ ಪೊಲೀಸ್‌ಠಾಣೆ ಮೆಟ್ಟಿಲೇರಿದ್ದಾರೆ.
ಜೀವನದಲ್ಲಿ ಕೌಟುಂಬಿಕ ಕಲದಿಂದ ಬೇಸತ್ತ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ಅವರು ಇಂದು ಪೊಲೀಸ್‌ಠಾಣೆ ಮಟ್ಟಿಲೇರಿ ತಮಗೆ ನೀಡುತ್ತಿರುವ ಕಿರುಕುಳವನ್ನು ತಪ್ಪಿಸಿ ಎಂದು ಮನವಿ ಮಾಡಿದ್ದಾರೆ.
ಇವರು ರಾಜ್ಯ ಕೆಎಸ್ಆರ್‌ಪಿ ತರಬೇತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗ ಪತಿ ನಿತಿನ್ ಸುಭಾಷ್ ಯೋಲಾ ಮತ್ತು ಅವರ ಕುಟುಂಬದ ಏಳು ಮಂದಿ ವಿರುದ್ಧ ವರದಕ್ಷಿಣೆ ಕಿರುಕುಳದ ದೂರು ದಾಖಲಿಸಿದ್ದಾರೆ.
ಕಟಿಯಾರ್ ನೀಡಿರುವ ದೂರನ್ನು ಆಧರಿಸಿ ಕಬ್ಬನ್ ಪಾರ್ಕ್ ಪೊಲೀಸರು ಪತಿ ಐಎಫ್ಎಸ್ ಅಧಿಕಾರಿ ನಿತಿನ್ ಸುಭಾಷ್ ಯೋಲಾ , ಮಾವ ಸುಭಾಷ್ ಲೊಯಾ, ಅಮೋಲ್ ಯೊಲಾ, ಸುನಿತಾ ಯೋಲಾ, ಸಚಿನ್ ಯೋಲಾ, ಪ್ರಜಕ್ತಾ ಯೋಲಾ ಇತರರ ವಿರುದ್ಧ ವರದಕ್ಷಿಣೆ ಕಿರುಕುಳ, ವಂಚನೆ, ಮೋಸ ಆರೋಪದಡಿ ಎಫ್‌ಐಆರ್ ದಾಖಲಿಸಿದ್ದು ಮುಂದಿನ ಕ್ರಮವನ್ನು ಜರುಗಿಸುತ್ತಿದ್ದಾರೆ.
2010 ನೇ ಸಾಲಿನ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ಮಹಾರಾಷ್ಟ್ರ ಮೂಲದ 2009 ನೇ ಬ್ಯಾಚ್ ನ ಐಎಫ್ಎಸ್ ( ಫಾರಿನ್ ಸರ್ವೀಸ್ ) ಅಧಿಕಾರಿ ನಿತೀನ್ ಸುಭಾಷ್ ಅವರನ್ನು ಪ್ರೀತಿಸಿ 2011 ರಲ್ಲಿ ವಿವಾಹವಾದರು. ಮದುವೆಯಾದ ಕೆಲವೇ ದಿನಗಳಲ್ಲಿ ಇಬ್ಬರ ನಡುವೆ ವೈಮನಸ್ಸು ಉಂಟಾಗಿ ಅದು ಮುಂದುರಿಯುತ್ತಲೇ ಇತ್ತು. ಈಗ ಅದನ್ನು ಪತಿ ಜತೆಗೆ ಅವರ ಕುಟುಂಬ ಸದಸ್ಯರು ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ನೀಡಿದ್ದಾರೆ.
ದೂರಿನಲ್ಲಿ ಏನಿದೆ?
ನಿತಿನ್ ಕೊಲಂಬೋ ಸೇರಿ ವಿದೇಶಿ ರಾಯಭಾರ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ನಾನು ಮತ್ತು ನಿತಿನ್ ಇಬ್ಬರೂ 2011 ನವೆಂಬರ್ ನಲ್ಲಿ ಮಹಾರಾಷ್ಟ್ರದಲ್ಲಿ ಮದುವೆಯಾದೆವು. ಮದುವೆ ವೇಳೆ ಚಿನ್ನದ ಆಭರಣ ನೀಡುವಂತೆ ನನ್ನ ಗಂಡನ ಕುಟುಂಬದವರು ಬೇಡಿಕೆ ಇಟ್ಟಿದ್ದರು. ಅದ್ದೂರಿ ನಿಶ್ಚಿತಾರ್ಥ ಮತ್ತು ಮದುವೆ ವೆಚ್ಚವನ್ನು ನಮ್ಮ ಕುಟುಂಬವೇ ಭರಿಸಿತ್ತು. ಆದರೆ, ಮದುವೆ ಬಳಿಕ ನನ್ನನ್ನು ಕೆಟ್ಟ ಪದಗಳಿಂದ ಪತಿ ಕಡೆಯವರು ನಿಂದನೆ ಮಾಡುತ್ತಲೇ ಇದ್ದಾರೆ. ಯಾವುದೇ ಕಾರಣ ಇಲ್ಲದಿದ್ದರೂ ಮಾನಸಿಕ ಹಿಂಸೆ ನೀಡುತ್ತಿದ್ದಾರೆ.
ಮದುವೆಯಾದ ಮೂರೇ ತಿಂಗಳಿಗೆ ವರದಕ್ಷಿಣೆ ನೀಡುವಂತೆ ನನ್ನ ಪತಿ ಕಡೆಯವರು ಬೇಡಿಕೆ ಇಟ್ಟು, ಕೂಡಲೇ ಮೂರು ಲಕ್ಷ ರೂಪಾಯಿ ನೀಡಬಢಕು ಇಲ್ಲದಿದ್ದರೆ, ಮದುವೆ ಸಂಬಂಧ ಮುರಿದುಕೊಳ್ಳುತ್ತೇವೆ ಎಂದು ಬೆದರಿಕೆ ಹಾಕಿದರು. ನಾನು ಹೆದರಿ ಮೂರು ಲಕ್ಷ ರೂಪಾಯಿಯನ್ನು ನೀಡಿದ್ದೇನೆ. ಹೀಗಿದ್ದೂ ಮತ್ತೆ ವರದಕ್ಷಿಣೆ ತಂದು ಕೊಡು ಎಂದು ಪೀಡಿಸುತ್ತಿದ್ದಾರೆ. ಇನ್ನು ಮದುವೆಯಾದ ಆರಂಭದಿಂದ ಒಂದು ವರ್ಷದ ವರೆಗೂ ಅವರ ಎಲ್ಲಾ ಬೇಡಿಕೆಗಳನ್ನು ಪೂರೈಸಿದ್ದೇನೆ ಆದರೂ ನನಗೆ ಕಿರುಕುಳ ಇನ್ನೂ ತಪ್ಪಿಲ್ಲ ಎಂದು ದೂರಿದ್ದಾರೆ.
ಇನ್ನು ನಿತಿನ್ ಅವರ ಅಜ್ಜಿಯ ಮನೆ ಉತ್ತರ ಪ್ರದೇಶದಲ್ಲಿದೆ. 2012 ಜುಲೈನಲ್ಲಿ ಐದು ಲಕ್ಷ ರೂ. ನೀಡುವಂತೆ ಕೇಳಿದ್ದು, ಅದನ್ನು ನಾನು ಕೊಟ್ಟಿದ್ದೆ. ಆ ವೇಳೆ ಈ ಹಣವನ್ನು ವಾಪಸ್ ಕೊಡುತ್ತೇನೆ ಎಂದು ನಿತಿನ್ ಹೇಳಿದ್ದರು. ಆದರಂತೆ ಒಂದು ಚೆಕ್ ಕೊಟ್ಟರು ಆದರೆ ಅದು ಬೌನ್ಸ್ ಆಯಿತು. ಇನ್ನು ಮದ್ಯಪಾನ ಧೂಮಪಾನ ಸೇವನೆ ಬಿಡುವಂತೆ ನಾನು ಅನೇಕ ಸಲ ಮನವಿ ಮಾಡಿದ್ದೇನೆ ಆದರೆ ಅದಕ್ಕೆ ಅವರು ನನ್ನನ್ನು ಪ್ರಶ್ನಿಸಬಾರದು ಎಂದು ಹೆದರಿಸಿ ಹಿಂಸೆ ನೀಡುತ್ತಿದ್ದಾರೆ. ಜತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಟ್ಟಿದ್ದಾರೆ ಈಗಲು ಕೊಡುತ್ತಿದ್ದಾರೆ.
2016 ರಲ್ಲಿ ನನ್ನ ಪತಿ ವಾಸವಿದ್ದ ಕೊಲೊಂಬಗೆ ಹೋಗಿದ್ದೆ. ಅಲ್ಲಿ ಮಾರ್ಬಲ್ ಬಾಕ್ಸ್ ನಿಂದ ಹೊಡೆದಿದ್ದು, ನನ್ನ ಕೈ ಮುರಿದಿತ್ತು. ಹೀಗೆ ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಹಿಂಸೆ ನೀಡುತ್ತಿದ್ದ. ಗರ್ಭಾವತಿ ಆಗಿದ್ದ ವೇಳೆ ನಿತಿನ್ ಸೇರಿ ಅವರ ಕುಟುಂಬ ಹಿಂಸೆ ನೀಡಿ, ಬಲವಂತವಾಗಿ ನನ್ನನ್ನು ಅಪ್ಪನೆ ಮನೆಗೆ ಕಳಿಸಿದರು. ಇದೆಲ್ಲ ಆ ಬಳಿಕ 2018ರ ದೀಪಾವಳಿ ವೇಳೆ ನಾನು ಮತ್ತು ಪತಿ ಕಡೆ ಕುಟುಂಬ ಶ್ರೀಲಂಕಾದ ಕೊಲೊಂಬೊಗೆ ಹೋಗಿದ್ದೆವು. ಅಲ್ಲಿಯೂ ಅವರು ಹೀನಾಯವಾಗಿ ನನ್ನನ್ನು ನಡೆಸಿಕೊಂಡರು.
ದೀಪಾವಳಿಗೆ ಉಡುಗೊರೆ ಕೊಡಲಿಲ್ಲ ಎಂದು ಹಿಂಸೆ ನೀಡಿ, ವಿವಾಹ ವಿಚ್ಛೇದನ ನೀಡುವುದಾಗಿ ಕಿರುಕುಳ ನೀಡಿದರು. ಬಳಿಕ ಮನೆ ತೆಗೆದುಕೊಳ್ಳಲಿಕ್ಕೆ 35 ಲಕ್ಷ ರೂಪಾಯಿಯನ್ನು ವರದಕ್ಷಿಣೆ ರೂಪದಲ್ಲಿ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ ಹೀಗಾಗಿ ನಾನು ಮುಂದೆ ಇದೆಲ್ಲವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಈಗಾಗಲೇ ನಾನು ಜೀವನದಲ್ಲಿ ಸಾಕಷ್ಟು ನೋವು ಅನುಭವಿಸಿದ್ದೇನೆ ಮುಂದೆ ಆ ನೋವು ಅನುಭವಿಸಲು ನನ್ನಲ್ಲಿ ಶಕ್ತಿಯಿಲ್ಲ ಆದ್ದರಿಂದ ತಪ್ಪಿತಸ್ಥರ ವಿರುದ್ಧ ಕಾನೂನು ರೀತಿ ಸೂಕ್ತ ಕ್ರಮ ಜರುಗಿಸಿ ನನಗೆ ನ್ಯಾಯಕೊಡಿಬೇಕು ಎಂದು ವರ್ತಿಕಾ ಮನವಿ ಮಾಡಿದ್ದಾರೆ.