ವಿಜಯಪಥ ಸಮಗ್ರ ಸುದ್ದಿ
ಪಿರಿಯಾಪಟ್ಟಣ: ತಾಲೂಕಿನ ಹಿಟ್ನೆಹೆಬ್ಬಾಗಿಲು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತರಾದ ಮೀನಾಕ್ಷಿ ಬಸವಣ್ಣ ಹಾಗೂ ಉಪಾಧ್ಯಕ್ಷರಾಗಿ ಮಂಜುನಾಯ್ಕ ಅವಿರೋಧ ಆಯ್ಕೆಯಾದರು.
ಮಂಗಳವಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮೀನಾಕ್ಷಿ ಮತ್ತು ಪರಿಶಿಷ್ಟ ವರ್ಗಕ್ಕೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮಂಜುನಾಯ್ಕ ಮಾತ್ರ ನಾಮಪತ್ರ ಸಲ್ಲಿಸಿದ ಕಾರಣ ಚುನಾವಣಾಧಿಕಾರಿ ಡಾ.ಸಂದೇಶ್ ಅವಿರೋಧ ಆಯ್ಕೆ ಘೋಷಿಸಿದರು.
ನೂತನ ಅಧ್ಯಕ್ಷೆ ಎಂ.ಎಸ್ ಮೀನಾಕ್ಷಿ ಬಸವಣ್ಣ ಮಾತನಾಡಿ ಕೆ.ವೆಂಕಟೇಶ್ ಅವರು ತಾಲೂಕಿನಲ್ಲಿ ಮಾಡಿರುವ ಅಭಿವೃದ್ದಿ ಕಾರ್ಯ ಮತ್ತು ಅವರ ಮಾರ್ಗದರ್ಶನದ ಫಲವಾಗಿ ಹಿಟ್ನೆಬಾಗಿಲು ಗ್ರಾಪಂ ನಲ್ಲಿ 18 ಸದಸ್ಯ ಸ್ಥಾನಗಳಲ್ಲಿ 16 ಸದಸ್ಯರು ಗೆಲುವು ಸಾಧಿಸಲು ಸಾಧ್ಯವಾಗಿದೆ. ನಮ್ಮ ಗೆಲುವಿಗೆ ಸಹಕರಿಸಿದ ಮಾಜಿ ಶಾಸಕ ಕೆ.ವೆಂಕಟೇಶ್, ಗ್ರಾಮಸ್ಥರು ಪಂಚಾಯಿತಿ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರಿಗೆ ಮತ್ತು ನಾನು ಅವಿರೋಧವಾಗಿ ಆಯ್ಕೆಯಾಗಲು ಸಹಕರಿಸಿದ ಸದಸ್ಯರಿಗೆ ಅಭಿನಂಧನೆ ಸಲ್ಲಿಸುತ್ತೇನೆ ಎಂದರು.
ನನ್ನ ಅಧಿಕಾರವಧಿಯಲ್ಲಿ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಕುಡಿಯುವ ನೀರು ರಸ್ತೆ, ಚರಂಡಿ ಬೀದಿದೀಪ ಸೇರಿದಂತೆ ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಭರವಸೆ ನೀಡಿದರು.
ಗ್ರಾ.ಪಂ.ಸದಸ್ಯರಾದ ಎಚ್.ಪಿ.ಅನಿಲ್ ಕುಮಾರ್, ಕಾಮರಾಜ್ ಹಾಗೂ ಸೀಗೂರು ವಿಜಯಕುಮಾರ್, ವನಜಾಕ್ಷಮ್ಮ, ವರನಂದಿ, ಮಹದೇವ, ಸೌಮ್ಯ, ಯಶೋದಮ್ಮ, ಕುಮಾರ್, ರವಿಕುಮಾರ್, ಸಾಕಮ್ಮ, ಛಾಯಮಣಿ, ಸರೋಜಾ, ಸುಧಾ, ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಜಯಶಂಕರ್, ಕುರುಬರ ಸಂಘದ ತಾಲೂಕು ಅಧ್ಯಕ್ಷ ವಿ.ಜಿ.ಅಪ್ಪಾಜಿಗೌಡ, ಪಿಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಹಿಟ್ನಳ್ಳಿ ಪರಮೇಶ್, ತಾಪಂ ಮಾಜಿ ಸದಸ್ಯ ಅಣ್ಣಯ್ಯ.
ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶಫೀ, ಮುಖಂಡರಾದ ಶಿವರುದ್ರ, ವೀರಭದ್ರ, ನೀಲಕಂಠ, ಶಿವಶಂಕರ್, ಕಗ್ಗುಂಡಿ ಸುರೇಶ್, ಕಗ್ಗುಂಡಿ ಶಿವರಾಂ, ಶಿವರುದ್ರ, ನೀಲಕಂಠ, ಬಸವನಹಳ್ಳಿ ನಾರಾಯಣ, ವಡ್ಡರಕೇರಿ ಮುತ್ತುರಾಜ್, ಮಾಗಳಿ ಸ್ವಾಮಿ, ಶಂಕರ್, ಮಹೇಶ ಹಾಗೂ ಹಿಟ್ನೆಹೆಬ್ಬಾಗಿಲು ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳ ನೂರಾರು ಕಾಂಗ್ರೆಸ್ ಬೆಂಬಲಿಗರು ಇದ್ದರು.