ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: 6ರಿಂದ8ನೇ ತರಗತಿಗಳ ಶಾಲಾ ಆರಂಭಕ್ಕೆ ಶಿಕ್ಷಣ ಮತ್ತು ಆರೋಗ್ಯ ತಜ್ಞರು ಒಪ್ಪಿಗೆ ಸೂಚಿಸಿದ್ದು, 1ರಿಂದ 5ನೇ ತರಗತಿಯವರೆಗೆ ವಿದ್ಯಾಗಮ ಮಾಡಲು ತಜ್ಞರು ಅನುಮತಿ ನೀಡಿದ್ದಾರೆ.
ಇಂದು ವಿಧಾನ ಸೌಧದಲ್ಲಿ ನಡೆದ ಶಾಲೆ ಆರಂಭ ಕುರಿತ ಸಭೆಯಲ್ಲಿ ಸಚಿವ ಸುರೇಶ್‌ಕುಮಾರ್ ತಜ್ಞರ ಸಲಹೆಗಳನ್ನು ಪಡೆದಿದ್ದು, ಕೆಲ ನಿಯಮಗಳನ್ನು ಪಾಲಿಸುವ ಮೂಲಕ ಫೆ.22ರಿಂದ ಶಾಲೆ ಆರಂಭಿಸಲು ಅನುಮತಿ ಸೂಚಿಸಿದ್ದಾರೆ.
ಇನ್ನು ಶಾಲೆಯಲ್ಲಿ ತರಗತಿ ಶುರುಮಾಡಲು ಯಾವುದೇ ಸಮಸ್ಯೆ ಇಲ್ಲ. ಜತೆಗೆ ಪಾಲಕರು ಮಕ್ಕಳನ್ನು ಒಂದು ವೇಳೆ ಶಾಲೆಗೆ ಕಳುಹಿಸಲು ಹಿಂದೇಟು ಹಾಕಿದರೆ, ಅವರ ಮಕ್ಕಳು ಆನ್‌ಲೈನ್‌ನಲ್ಲೇ ಪಾಠ ಕೇಳಬಹುದು. ಯಾವುದೇ ಮಗುವನ್ನು ಬಲವಂತವಾಗಿ ಶಾಲೆಗೆ ಕರೆತರಲು ಮುಂದಾಗಬಾರದು ಎಂದು ಹೇಳಿದ್ದಾರೆ.
ಇನ್ನು 1ರಿಂದ5ನೇ ತರಗತಿ ವರೆಗೆ ವಿದ್ಯಾಗಮ ಅಂದರೆ ಮಕ್ಕಳಿರುವ ಸ್ಥಳದಲ್ಲೇ ದಿನಬಿಟ್ಟು ದಿನ ತರಗತಿ ನಡೆಸಲು ಅನುಕೂಲ ಮಾಡಿಕೊಡಲಾಗಿದೆ.
ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಶಾಲೆ ಆರಂಭಕ್ಕೆ ಅನುಮತಿ ನೀಡಿರುವುದನ್ನು ಸ್ವಾಗತಿಸಿದೆ. ಜತೆಗೆ ನಾವು 1ರಿಂದ 5ನೇ ತರಗತಿ ಮಕ್ಕಳಿಗೆ ವಿದ್ಯಾಗಮದಡಿ ತರಗತಿ ನಡೆಸಲು ಹೋಗಿ ಬರುವುದಕ್ಕೆ ಆಗುವ ಖರ್ಚನ್ನು ಯಾರು ಭರಿಸಲಿದ್ದಾರೆ ಎಂದ ಗೊಂದವು ಇದೆ ಎಂದು ಹೇಳುತ್ತಿದ್ದಾರೆ.
ಬೆಂಗಳೂರಿನಲ್ಲಿ 8ನೇ ತರಗತಿ ಮಾತ್ರ ಆರಂಭವಾಗಲಿದೆ. ಆ ವಿದ್ಯಾರ್ಥಿಗಳು ಕೋವಿಡ್ ಟೆಸ್ಟ್ ಮಾಡಿಸಿಕೊಂಡಿರಬೇಕು. ಈ ನಡುವೆ 7-7ನೇ ತರಗತಿ ವಿದ್ಯಾರ್ಥಿಗಳು ಶಾಲೆಗೆ ಬರುವುದಕ್ಕೆ ಇನ್ನು ಅನುಮತಿ ಸಿಕ್ಕಿಲ್ಲ ಎಂದು ಸುರೇಶ್‌ಕುಮಾರ್ ಹೇಳಿದರು.