ವಿಜಯಪಥ ಸಮಗ್ರ ಸುದ್ದಿ
ಜೇವರ್ಗಿ: ಇಂದಿನ ದಿನಮಾನಗಳ ಸಂಸಾರದ ಜಂಜಾಟದಲ್ಲಿ ನಾವೆಲ್ಲ ನಗುವನ್ನೇ ಮರೆತಿದ್ದೇವೆ. ಆ ನಗುವನ್ನು ಮರುಕಳಿಸಲು ನಾವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸಬೇಕು ಎಂದು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ಹೇಳಿದ್ದಾರೆ.
ಪಟ್ಟಣದ ಮಹಿಬೂಬ ಪಂಕ್ಷನ್ ಹಾಲನಲ್ಲಿ ಮಂಗಳವಾರ ಸಂಜೆ ಆರ್ ಕೆ ಪಿ ಗ್ರೂಪ್ ವತಿಯಿಂದ ನಡೆದ ಮಸ್ತ ಮಜಾ ಮಾಡು ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೊರೊನಾ ಸಮಯದಲ್ಲಿ ಸಾರ್ವಜನಿಕರಿಗೆ ಯಾವುದೇ ಮನರಂಜನೆ ಕಾರ್ಯಕ್ರಮ ಇಲ್ಲದೇ ಬಹಳ ಬೇಜಾರಾಗಿದ್ದರು. ಅದನ್ನು ಮನಗಂಡು ಜೇವರ್ಗಿ ಪಟ್ಟಣದ ಆರ್ ಕೆ ಪಿ ಗ್ರೂಪ್ನನವರು ಇಂದು ಕಾರ್ಯಕ್ರಮ ಆಯೋಜಿಸುವ ಮೂಲಕ ಜನರಿಗೆ ಮನರಂಜೆ ನೀಡಿದರು. ಇವರು ಕಳೆದ ಹದಿನಾಲ್ಕು ವರ್ಷಗಳಿಂದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ಇನ್ನು ಕಲಾವಿದರನ್ನು ಪ್ರೋತ್ಸಾಹಿಸಿದೆ ಅವರಿಗೆ ಉತ್ತಮ ವೇದಿಕೆ ಕಲ್ಪಿಸಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕನ್ನಡ ಕೋಗಿಲೆ ಮತ್ತು ಜೀ ವಾಹಿನಿಯ ಖ್ಯಾತಿಯ ಕು.ಮಹಾನ್ಯ, ಕು. ಅರ್ಜುನ ಇಟಗಿ, ಇಬ್ರಾಹಿಂ ಕಾಸರ, ಕಾಸಿಂ ಅಲಿ ಮತ್ತು ಶೀಲಾ ಹಿರೇಮಠ ಸೇರಿದಂತೆ ಅನೇಕ ಕಲಾವಿದರು ತಮ್ಮ ಪ್ರತಿಭೆ ಪ್ರದರ್ಶನ ಮಾಡಿ ಪ್ರೇಕ್ಷಕರನ್ನು ರಂಜಿಸಿದರು.
ಕೊರೊನಾ ಸಂದರ್ಭದಲ್ಲಿ ಸೇವೆಗೈದ ತಾಲೂಕಿನ ಆರೋಗ್ಯಾಧಿಕಾರಿ ಸಿದ್ದು ಪಾಟೀಲ, ಪಿಎಸ್ಐ ಸಂಗಮೇಶ ಅಂಗಡಿ, ಆಹಾರ ಇಲಾಖೆಯ ಡಿ.ಬಿ.ಪಾಟೀಲ, ಸಿಡಿಪಿಒ ಸಂಗಣಗೌಡ, ಕೊರೊನಾ ಯೋಧ ಮಲ್ಲಿಕಾರ್ಜುನ ಬಿರಾದಾರ ಅವರನ್ನು ಸನ್ಮಾನಿಸಲಾಯಿತು. ಜತೆಗೆ ಐದು ಜನ ಅಂಗವಿಕಲರನ್ನು ವಿಶೇಷವಾಗಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪಟ್ಟಣದ ಸಾವಿರಾರು ಜನರು ಇದ್ದರು.