ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು 2 ಎ ಮೀಸಲಾತಿಗಾಗಿ ಪಂಚಮಸಾಲಿ ಲಿಂಗಾಯತರು ಬೃಹತ್ ಹೋರಾಟ ನಡೆಸುತ್ತಿದ್ದು, ಪಂಚಮಸಾಲಿ ಕೂಡಲ ಸಂಗಮ ಪೀಠದ ಶ್ರೀ ಜಯಮೃತುಂಜಯ ಸ್ವಾಮೀಜಿ ನೇತೃತ್ವ ವಹಿಸಿದ್ದಾರೆ.
ಬೆಳಗ್ಗೆ 11 ಗಂಟೆಗೆ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಸಮಾವೇಶದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದಾರೆ.
38 ದಿನಗಳ ಪಾದಯಾತ್ರೆಯನ್ನು ಪೂರ್ಣಗೊಳಿಸಿದ ನಂತರ ಅವರು ಇಂದು ಪಂಚಜನ್ಯ ಮೊಳಗಿದ್ದಾರೆ. ಈ ಸಮಯದಲ್ಲಿ ಪಂಚಮಸಾಲಿ ಸ್ವಾಮೀಜಿಗಳು, ಪ್ರತಿನಿಧಿಗಳು ಮತ್ತು ಪ್ರಮುಖರು ಭಾಗಿಯಾಗಿದ್ದಾರೆ. ಮೂರು ಪಕ್ಷಗಳ ಐವರು ಸದಸ್ಯರ ನಾಯಕನನ್ನು ಆಹ್ವಾನಿಸಲಾಗಿದೆ. ಸಮಾವೇಶದ ನಂತರ, ಸ್ವಾಮೀಜಿಗಳು ಹೋರಾಟವನ್ನು ಮುಂದುವರಿಸಲು ನಿರ್ಧರಿಸಿದ್ದು, ಸ್ವಾಮೀಜಿಯ ನೇತೃತ್ವದಲ್ಲಿ ರ್ಯಾಲಿ ನಡೆಯಲಿದೆ. ಆದರೆ ವಿಧಾನ ಸೌಧದ ಕಡೆಗೆ ರ್ಯಾಲಿ ಹೋಗಲು ಅನುಮತಿ ನೀಡಿಲ್ಲ.
ಸಮಾವೇಶಕ್ಕೆ ಮಳೆ ಅಡ್ಡಿ
ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಸಮಾವೇಶಕ್ಕೆ ಮಳೆ ಅಡ್ಡಿಯಾಗಿದ್ದು, ಮೈದಾನದಲ್ಲಿ ಸೇರಿರುವ ಸಾವಿರಾರು ಮಂದಿ ತಾವು ಕಳಿತಿದ್ದ ಕುರ್ಚಿಗಳನೇ ತಲೆ ಮೇಲೆ ಎತ್ತಿಕೊಂಡು ಮಳೆಯಿಂದ ರಕ್ಷಿಸಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಮರಗಳ ಬುಡದಲ್ಲಿ ನಿಂತಿದ್ದರು. ಯುವ ಸಮೂಹ ಅದೇನನ್ನು ಲೆಚ್ಚಿಸದೆ ಕೇಕೆ ಹಾಕಿ ಮಳೆಯಲ್ಲೇ ಸಮಾವೇಶ ನಡೆಸುತ್ತಿದ್ದಾರೆ.